ಹಬ್ಬದ ಸೀಸನ್: ನಿಮ್ಮ ಫೇವರಿಟ್ ಕಾರು ಯಾವುದು?

By Nagaraja

ಇದೀಗ ಹಬ್ಬದ ಕಾಲ. ದಸಾರಾದ ಸಂಭ್ರಮದ ಬೆನ್ನಲ್ಲೇ ದೀಪಾವಳಿ ಕೂಡಾ ಓಡೋಡಿ ಬರುತ್ತಿದೆ. ಇದರಂತೆ ಗ್ರಾಹಕರಿಗಾಗಿ ಕಾರು ತಯಾರಕ ಕಂಪನಿಗಳು ಅನೇಕ ನೂತನ ಮಾಡೆಲ್ ಕಾರುಗಳನ್ನು ಬಿಡುಗಡೆಗೊಳಿಸಿದ್ದು, ನಾನಾ ರೀತಿಯ ಕೊಡುಗೆಗಳನ್ನು ಮುಂದಿರಿಸಿವೆ.

ಕಾರು ಖರೀದಿ ಮಾಡುವವರು ಯಾವ ಕಾರು ಖರೀದಿ ಮಾಡಬೇಕೆಂಬ ಗೊಂದಲದಲ್ಲಿದ್ದಾರೆ. ಇದರಂತೆ ಈ ಹಬ್ಬದ ಸೀಸನಿನಲ್ಲಿ ಬಿಡುಗಡೆಗೊಂಡ ಕೆಲವು ಪ್ರಮುಖ ಕಾರುಗಳ ಬಗ್ಗೆ ನಾವಿಲ್ಲಿ ಪರಿಚಯಿಸಲಿದ್ದೇವೆ. ನಿಮ್ಮ ಬಜೆಟ್‌ಗೆ ತಕ್ಕಂತೆ ಈ ಹಬ್ಬದ ಸೀಸನಿನಲ್ಲಿ ಯಾವ ಕಾರು ಉತ್ತಮ ಎಂಬುದನ್ನು ತಿಳಿದುಕೊಳ್ಳಬಹುದು.

ಭಾರತದ ಮಾರುಕಟ್ಟೆಯಲ್ಲಿ ಹ್ಯಾಚ್‌ಬ್ಯಾಕ್ ಕಾರುಗಳಿಗೆ ಭಾರಿ ಬೇಡಿಕೆಯಿದೆ. ಇದರಂತೆ ಐದು ಪ್ರಮುಖ ಹ್ಯಾಚ್‌ಬ್ಯಾಕ್ ಕಾರುಗಳ ಬಗ್ಗೆ ಮಾಹಿತಿ ಕೊಡಲಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ನವನವೀನ ಹ್ಯಾಚ್‌ಬ್ಯಾಕ್ ಕಾರುಗಳನ್ನು ಕಂಪನಿಗಳು ಪರಿಚಯ ಮಾಡಿಕೊಟ್ಟಿತ್ತು. ಮಾಹಿತಿಗಾಗಿ ಫೋಟೊ ಫೀಚರ್ ಕ್ಲಿಕ್ಕಿಸಿ...

ಫೋರ್ಡ್ ಫಿಗೊ ಹೊಸ ಅವತಾರ

ಫೋರ್ಡ್ ಫಿಗೊ ಹೊಸ ಅವತಾರ

ನೂತನ ಫೋರ್ಡ್ ಫಿಗೊ ಫ್ರಂಟ್ ಗ್ರಿಲ್ ಅದ್ಭುತ ಸಸ್ಫೆಷನ್ ಹಾಗೂ ಆಕರ್ಷಕ ರಂಗನ್ನು ಹೊಂದಿದೆ. ದೇಶದ ಮಾರುಕಟ್ಟೆಯಲ್ಲಿ ಫೋರ್ಡ್ ಫಿಗೊ ಪ್ರಾರಂಭಿಕ ದರ 3.84999 ರು.ಗಳಾಗಿವೆ. ನೂತನ ಫಿಗೊ ಮಾಡೆಲ್ ಪ್ರಮುಖವಾಗಿಯೂ ಕಾಸ್ಮೆಟಿಕ್ಸ್ ಬದಲಾವಣೆಗಳ ಮೂಲಕ ರಸ್ತೆಗಿಳಿದಿವೆ. ದಸಾರಾ ಹಾಗೂ ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಹೆಚ್ಚಿನ ಮಾರಾಟ ಗಿಟ್ಟಿಸಿಕೊಳ್ಳುವ ಗುರಿಯನ್ನು ಕಂಪೆನಿ ಹೊಂದಿದೆ.

ಫಿಗೊ ಡ್ಯುರಟಿಕ್ ಎಲ್‌ಎಕ್ಸ್‌ಐ- 3.84 ಲಕ್ಷ ರು.

ಫಿಗೊ ಡ್ಯುರಟಿಕ್ ಇಎಕ್ಸ್‌ಐ- 4.22 ಲಕ್ಷ ರು

ಫಿಗೊ ಡ್ಯುರಟಿಕ್ ಜೆಡ್‌ಎಕ್ಸ್‌ಐ- 4. 52 ಲಕ್ಷ ರು.

ಫಿಗೊ ಡ್ಯುರಟಿಕ್ ಟೈಟಾನಿಯಂ- 5.01 ಲಕ್ಷ ರು.

(ದೆಹಲಿ ಎಕ್ಸ್ ಶೋರೂಂಗಳಲ್ಲಿ)

ಮಾರುತಿ ಸುಜುಕಿ ರಿಟ್ಜ್ ಹೊಸ ಮಾಡೆಲ್

ಮಾರುತಿ ಸುಜುಕಿ ರಿಟ್ಜ್ ಹೊಸ ಮಾಡೆಲ್

ಕಂಪೆನಿಯು ಹೊಸ ಮಾರುತಿ ರಿಟ್ಜ್ ಕಾರಿಗೆ 1.3 ಲೀಟರ್ ಮಲ್ಟಿ ಜೆಟ್ ಎಂಜಿನ್ ಆಳವಡಿಸಿದೆ. ದೀಪಾವಳಿಯ ಈ ಸಂಭ್ರಮದಲ್ಲಿ ಗ್ರಾಹಕರು ಈ ಕಾರನ್ನು ಸಹ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಮಾರುತಿ ಸುಜುಕಿ ಸ್ಪಾಷ್ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ದೊರಕುತ್ತದೆ.

ಮಾರುತಿ ಸುಜುಕಿ ರಿಟ್ಜ್ ಎಲ್‌ಡಿಐ ದರ- 5.31 ಲಕ್ಷ ರು.

ಮಾರುತಿ ಸುಜುಕಿ ರಿಟ್ಜ್ ವಿಡಿಐ- 5.64 ಲಕ್ಷ

ಮಾರುತಿ ಸುಜುಕಿ ರಿಟ್ಜ್ ವಿಡಿಐ ಎಬಿಎಸ್- 5.82 ಲಕ್ಷ

ಮಾರುತಿ ಸುಜುಕಿ ರಿಟ್ಜ್ ಜೆಡಿಐ- 6.23 ಲಕ್ಷ ರು.

ಹೊಂಡಾ ಬ್ರಿಯೊ ಆಟೋಮೆಟಿಕ್ ವೆರಿಯಂಟ್

ಹೊಂಡಾ ಬ್ರಿಯೊ ಆಟೋಮೆಟಿಕ್ ವೆರಿಯಂಟ್

ಆಕರ್ಷಕ ವಿನ್ಯಾಸ ಹಾಗೂ ಅಧಿಕ ಎಂಜಿನ್ ಕ್ಷಮತೆ ಹೊಂದಿರುವ ಹೊಂಡಾ ಬ್ರಿಯೊ. ಎಸ್ (ಒ) ಆಟೋಮೆಟಿಕ್ ಹಾಗೂ ವಿ ಆಟೋಮೆಟಿಕ್‌ಗಳೆಂಬ ವೆರಿಯಂಟ್‌ಗಳಲ್ಲಿ ಲಭ್ಯವಾಗಲಿದೆ.

ಬ್ರಿಯೊ ಎಸ್ (ಒ) ಒಟಿ- 5.74 ಲಕ್ಷ ರು.

ಬ್ರಿಯೊ ವಿ ಎಟಿ- 5.99 ಲಕ್ಷ ರು

ಬ್ರಿಯೊ ಇಎಂಟಿ- 4.06 ಲಕ್ಷ

ಬ್ರಿಯೊ ಇಎಕ್ಸ್ ಎಎಂಟಿ- 4.26 ಲಕ್ಷ ರು

ಬ್ರಿಯೊ ಎಸ್ ಎಂಟಿ- 4.55 ಲಕ್ಷ ರು.

ಬ್ರಿಯೊ ಎಸ್ (ಒ) ಎಂಟಿ- 4.99 ಲಕ್ಷ ರು.

ಬ್ರಿಯೊ ವಿ ಎಂಟಿ- 5.24 ಲಕ್ಷ ರು.

ದೀಪಾವಳಿಗೆ ಮಾರುತಿ ಆಲ್ಟೊ ಹಬ್ಬ

ದೀಪಾವಳಿಗೆ ಮಾರುತಿ ಆಲ್ಟೊ ಹಬ್ಬ

ಮಾರುತಿ ಆಲ್ಟೊ 800 ಸದ್ಯ ಚಾಲ್ತಿಯಲ್ಲಿರುವ ಹಾಟ್ ನ್ಯೂಸ್. ಈ ಕಾರಿನ ಜನಪ್ರಿಯತೆಯಿಂದಲೇ ಬಿಡುಗಡೆ ಮೊದಲೇ 10 ಸಾವಿರಕ್ಕಿಂತಲೂ ಹೆಚ್ಚು ಬುಕ್ಕಿಂಗ್ ಪಡೆಯಲು ಯಶಸ್ವಿಯಾಗಿತ್ತು. ಇದರ ದರ ಬಗ್ಗೆ ತಿಳಿಯೋಣ.

ವೆರಿಯಂಟ್ (ಮೆಟಾಲಿಕ್)

ಮಾರುತಿ ಆಲ್ಟೊ 800 ಎಲ್ಎಕ್ಸ್- 2.88 ಲಕ್ಷ ರು.

ಮಾರುತಿ ಆಲ್ಟೊ 800 ಎಲ್ಎಕ್ಸ್ ಸಿಎನ್‌ಜಿ- 3.50 ಲಕ್ಷ ರು.

ಮಾರುತಿ ಆಲ್ಟೊ 800 ಎಲ್ಎಕ್ಸ್ಐ- 3.11 ಲಕ್ಷ

ರು.

ಮಾರುತಿ ಆಲ್ಟೊ 800 ಎಲ್ಎಕ್ಸ್‌ಐ (ಏರ್‌ಬ್ಯಾಗ್)- 3.26 ಲಕ್ಷ ರು.

ಮಾರುತಿ ಆಲ್ಟೊ 800 ಎಲ್ಎಕ್ಸ್ಐ ಸಿಎನ್‌ಜಿ- 3.69 ಲಕ್ಷ ರು.

ಮಾರುತಿ ಆಲ್ಟೊ 800 ಎಸ್‌ಟಿಡಿ- 2.55 ಲಕ್ಷ ರು.

ಮಾರುತಿ ಆಲ್ಟೊ 800 ಎಸ್‌ಟಿಡಿ ಸಿಎನ್‌ಜಿ- 3.31 ಲಕ್ಷ ರು.

ಷೆರ್ವಲೆಯ ನೂತನ ಸ್ಪಾರ್ಕ್

ಷೆರ್ವಲೆಯ ನೂತನ ಸ್ಪಾರ್ಕ್

ಅಮೆರಿಕ ವಾಹನ ತಯಾರಕ ಕಂಪೆನಿಯಾದ ಜನರಲ್ ಮೋಟಾರ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಪರಿಷ್ಕೃತ ಷೆವರ್ಲೆ ಸ್ಪಾರ್ಕ್ ಕಾರನ್ನು ಪರಿಚರಿಸಿದೆ. ಹಾಗಿದ್ದರೂ ಈ ಕಾರು ಅಕ್ಟೋಬರ್ 25ರಂದು ಬಿಡುಗಡೆಯಾಗಲಿರುವ ನಿರೀಕ್ಷೆಯಿದ್ದು, ದರ 3.5ರಿಂದ 4.20 ಲಕ್ಷ ರುಪಾಯಿಗಳ ವರೆಗೆ ಇರುವ ನಿರೀಕ್ಷೆಯಿದೆ.

More from DriveSpark

Article Published On: Tuesday, October 23, 2012, 9:37 [IST]
English summary
We take a quick look at the top 5 hatchback cars one can choose this Diwali. If you looking to purchase a hatchback car priced between 4 to 6 lakhs step right in.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+