ಎಸಿ ಬಳಕೆ ಮಾಡುವುದರಿಂದ ಕಾರಿನ ಮೈಲೇಜ್ ಕಡಿಮೆಯಾಗುತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ..

ಸಾಮಾನ್ಯ ಕಾರುಗಳಲ್ಲೂ ಎಸಿ ಸೌಲಭ್ಯವನ್ನು ಒದಗಿಸಲಾಗುತ್ತಿದ್ದು, ಎಸಿ ಬಳಕೆಯಿಂದ ಕಾರಿನ ಮೈಲೇಜ್ ಕಡಿಮೆಯಾಗುತ್ತಿದೆ ಎಂದು ಚಿಂತಿಸುವವರಿಗೆ ನಿಮ್ಮ ಡ್ರೈವ್ ಸ್ಪಾರ್ಕ್ ತಂಡವು ಇಲ್ಲಿ ಕೆಲವು ಸಲಹೆಗಳನ್ನು ನೀಡುತ್ತಿದೆ.

By Praveen

ಅದೊಂದು ಕಾಲವಿತ್ತು. ಯಾವ ಕಾರುಗಳು ಎಸಿ ಸೌಲಭ್ಯ ಹೊಂದಿರುತ್ತಿದ್ದವೋ ಅವುಗಳನ್ನು ಐಷಾರಾಮಿ ಕಾರುಗಳೆಂದು ಭಾವಿಸಲಾಗುತ್ತಿತ್ತು. ಆದ್ರೆ ಕಾಲ ಬದಲಾಗಿದೆ. ಸಾಮಾನ್ಯ ಕಾರುಗಳಲ್ಲೂ ಎಸಿ ಸೌಲಭ್ಯವನ್ನು ಒದಗಿಸಲಾಗುತ್ತಿದ್ದು, ಎಸಿ ಬಳಕೆಯಿಂದ ಕಾರಿನ ಮೈಲೇಜ್ ಕಡಿಮೆಯಾಗುತ್ತಿದೆ ಎಂದು ಚಿಂತಿಸುವವರಿಗೆ ನಿಮ್ಮ ಡ್ರೈವ್ ಸ್ಪಾರ್ಕ್ ತಂಡವು ಇಲ್ಲಿ ಕೆಲವು ಸಲಹೆಗಳನ್ನು ನೀಡುತ್ತಿದೆ.

ಕಾರಿನಲ್ಲಿ ಎಸಿ ಬಳಕೆಯೊಂದಿಗೆ ಹೆಚ್ಚಿನ ಮೈಲೇಜ್ ಪಡೆಯುವುದು ಹೇಗೆ ಗೊತ್ತಾ?

ಬದಲಾಗುತ್ತಿರುವ ಜಾಗತಿಕ ತಾಪಮಾನದಿಂದ ಏರ್ ಕಂಡೀಷನರ್‌ ತನ್ನದೇ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ. ಹೀಗಾಗಿ ಕಾರಿನಲ್ಲಿ ಬಳಕೆ ಮಾಡುವ ಎಸಿ ಸೌಲಭ್ಯವು ಕೂಡಾ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದರೂ ಬಹುತೇಕ ಜನ ಮೈಲೇಜ್ ಬಗ್ಗೆ ಚಿಂತಿಸದೇ ಇರಲಾರರು.

ಕಾರಿನಲ್ಲಿ ಎಸಿ ಬಳಕೆಯೊಂದಿಗೆ ಹೆಚ್ಚಿನ ಮೈಲೇಜ್ ಪಡೆಯುವುದು ಹೇಗೆ ಗೊತ್ತಾ?

ಈ ಕುರಿತು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡುವುದಾರರೇ ಎಸಿ ಬಳಕೆಯು ವಾಸ್ತವದಲ್ಲಿ ಕಾರಿನ ಮೈಲೇಜ್ ಮೇಲೆ ಶೇ.20ರಷ್ಟು ಪರಿಣಾಮ ಬೀರುವುದು ನಿಜ. ಆದ್ರೆ ಕೆಲ ಚಾಲನಾ ತಂತ್ರಗಳನ್ನು ಬಳಸಿದ್ದಲ್ಲಿ ಕಾರಿನ ಎಸಿ ಬಳಕೆಯ ಜೊತೆ ಜೊತೆಗೆ ಕಾರಿನ ಮೈಲೇಜ್‌ನಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬಹುದು.

Recommended Video

Horrifying Footage Of A Cargo Truck Going In Reverse, Without A Driver - DriveSpark
ಕಾರಿನಲ್ಲಿ ಎಸಿ ಬಳಕೆಯೊಂದಿಗೆ ಹೆಚ್ಚಿನ ಮೈಲೇಜ್ ಪಡೆಯುವುದು ಹೇಗೆ ಗೊತ್ತಾ?

ಇನ್ನು ಇತ್ತೀಚೆಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವ ಪ್ರತಿ ಕಾರಿನಲ್ಲೂ ಎಸಿ ಬಳಕೆಯಿಂದ ಮೈಲೇಜ್ ಕಡಿತವಾಗುವುದನ್ನು ತಗ್ಗಿಸುವ ಉದ್ದೇಶದಿಂದ ಸುಧಾರಿತ ತಂತ್ರಜ್ಞಾನಗಳನ್ನು ಬಳಕೆ ಮಾಡಲಾಗುತ್ತಿದ್ದು, ಹಳೆಯ ಮಾದರಿಯ ಎಸಿ ಕಾರುಗಳ ಮೈಲೇಜ್ ಹೆಚ್ಚಿಸಲು ಇಲ್ಲಿ ಕೆಲ ಸಲಹೆಗಳನ್ನು ನೀಡಲಾಗಿದೆ.

ಕಾರಿನಲ್ಲಿ ಎಸಿ ಬಳಕೆಯೊಂದಿಗೆ ಹೆಚ್ಚಿನ ಮೈಲೇಜ್ ಪಡೆಯುವುದು ಹೇಗೆ ಗೊತ್ತಾ?

ಬಹುತೇಕ ಕಾರು ಮಾಲೀಕರು ಎಸಿ ಬಳಕೆಯಿಂದ ಮೈಲೇಜ್ ಕಡಿತವಾಗುತ್ತದೆ ಎನ್ನುವ ಉದ್ದೇಶದಿಂದ ಕಾರಿನ ಎಲ್ಲ ಕಿಟಕಿಗಳನ್ನು ತೆರೆದುಕೊಂಡು ಕಾರು ಚಾಲನೆ ಮಾಡುವುದನ್ನು ನೋಡಿದ್ದೇವೆ. ಆದ್ರೆ ವಾಸ್ತವದಲ್ಲಿ ಹಾಗೆ ಮಾಡಿದ್ದಲ್ಲಿ ನಿಮ್ಮ ಕಾರಿನ ಮೈಲೇಜ್ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತದೆ.

ಕಾರಿನಲ್ಲಿ ಎಸಿ ಬಳಕೆಯೊಂದಿಗೆ ಹೆಚ್ಚಿನ ಮೈಲೇಜ್ ಪಡೆಯುವುದು ಹೇಗೆ ಗೊತ್ತಾ?

ಹೌದು, ಇದಕ್ಕೆ ಕಾರಣ ಕಾರಿನ ಎಲ್ಲ ಕಿಟಿಕಿಗಳನ್ನು ತೆರೆದುಕೊಂಡು ಕಾರು ಚಾಲನೆ ಮಾಡಿದ್ದಲ್ಲಿ ಗಾಳಿ ವಿರುದ್ಧವಾಗಿ ಚಲಿಸುವ ವಾಹನದ ಇಂಧನ ಕಾರ್ಯಕ್ಷಮತೆ ತಗ್ಗುತ್ತದೆ. ಜೊತೆಗೆ ಗಾಳಿಗೆ ವಿರುದ್ದವಾಗಿ ಸಾಗುವ ನಿಮ್ಮ ವಾಹನ ಹೊರಗಿನಿಂದ ನುಗ್ಗಿ ಬರುವ ಗಾಳಿಯ ಒತ್ತಡವು ನಿಮ್ಮ ಕಾರನ್ನು ಹಿಂದಕ್ಕೆ ನುಗ್ಗಿಸುವುದು.

ತಪ್ಪದೇ ಓದಿ- ನಿಮ್ಮ ಕಾರಿನ ಮೈಲೇಜ್ ಹೆಚ್ಚಳವಾಗಬೇಕೇ? ಈ ಕೆಳಗಿನ ವಿಧಾನಗಳನ್ನು ತಪ್ಪದೇ ಪಾಲಿಸಿ..

ಕಾರಿನಲ್ಲಿ ಎಸಿ ಬಳಕೆಯೊಂದಿಗೆ ಹೆಚ್ಚಿನ ಮೈಲೇಜ್ ಪಡೆಯುವುದು ಹೇಗೆ ಗೊತ್ತಾ?

ಹೀಗಾಗಿ ಯಾವುದೇ ಕಾರಣಕ್ಕೂ ಎಸಿ ಉಳಿಸಲು ಕಾರಿನ ಕಿಟಕಿಗಳನ್ನು ತೆರೆದುಕೊಂಡು ಕಾರು ಚಾಲನೆ ಮಾಡಬೇಡಿ. ಇದರ ಬದಲಾಗಿ ಎಸಿಯಿಂದ ಕಾರಿನ ಮೈಲೇಜ್ ಹೆಚ್ಚಿಸುವ ಉದ್ದೇಶವಿದ್ದಲ್ಲಿ ಕಾರಿನ ಕಿಟಿಕಿ ತೆರೆದ ಸಂದರ್ಭಗಳಲ್ಲಿ ವೇಗದ ಕಾರಿನ ಚಾಲನೆಯನ್ನು ತಪ್ಪಿಸಿ.

ಕಾರಿನಲ್ಲಿ ಎಸಿ ಬಳಕೆಯೊಂದಿಗೆ ಹೆಚ್ಚಿನ ಮೈಲೇಜ್ ಪಡೆಯುವುದು ಹೇಗೆ ಗೊತ್ತಾ?

ಇದರಿಂದ ಗಾಳಿಗೆ ವಿರುದ್ಧದ ಕಾರು ಚಾಲನೆಯಲ್ಲಿ ವ್ಯರ್ಥವಾಗುವ ಇಂಧನ ಕಾರ್ಯಕ್ಷಮತೆಯು ಹೆಚ್ಚುವುದು. ಜೊತೆಗೆ ಅಗತ್ಯ ಸಂದರ್ಭಗಳಲ್ಲಿ ಮಾತ್ರ ಎಸಿ ಬಳಸಿದ್ದಲ್ಲಿ ನೀವು ಅಂದುಕೊಂಡಷ್ಟೇ ಮೈಲೇಜ್ ದೊರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.

OST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಕಾರಿನಲ್ಲಿ ಎಸಿ ಬಳಕೆಯೊಂದಿಗೆ ಹೆಚ್ಚಿನ ಮೈಲೇಜ್ ಪಡೆಯುವುದು ಹೇಗೆ ಗೊತ್ತಾ?

ದೇಶಾದ್ಯಂತ ಬಿಸಿಲಿನ ತಾಪಮಾನವು ಗರಿಷ್ಠಮಟ್ಟದಲ್ಲಿ ದಾಖಲಾಗುತ್ತಿದ್ದು, ಎಸಿ ಇಲ್ಲದೇ ವಾಹನಗಳಲ್ಲಿ ಸವಾರಿ ಬೇಡವೇ ಬೇಡ ಎನ್ನಿಸುತ್ತೆ. ಇನ್ನು ಕೆಲವು ಕಾರುಗಳಲ್ಲಿ ಎಸಿ ಇದ್ದರೂ ಸಹ ಸರಿಯಾಗಿ ಕಾರ್ಯನಿರ್ವಹಣೆ ಸಾಧ್ಯವಾಗದ್ದಿದ್ದಾಗ ವಾಹನ ಸವಾರಿಯಲ್ಲಿ ಆಗುವ ಕಿರಿಕಿರಿ ಅಷ್ಟಿಷ್ಟಲ್ಲ. ಹೀಗಾಗಿ ಬೇಸಿಗೆ ಅವಧಿಯಲ್ಲಿ ಎಸಿ ಸೌಲಭ್ಯವನ್ನು ಪರಿಣಾಮಕಾರಿ ಬಳಕೆ ಮಾಡುವುದು ಹೇಗೆ ಅನ್ನುವುದನ್ನು ನಾವು ಇಲ್ಲಿ ತಿಳಿಯಿರಿ.

ಕಾರಿನಲ್ಲಿ ಎಸಿ ಬಳಕೆಯೊಂದಿಗೆ ಹೆಚ್ಚಿನ ಮೈಲೇಜ್ ಪಡೆಯುವುದು ಹೇಗೆ ಗೊತ್ತಾ?

ನೆರಳಿನಡಿ ಪಾರ್ಕ್ ಮಾಡಿ..!

ನಿಮ್ಮ ಕಾರನ್ನು ಸಾಧ್ಯವಾದಷ್ಟು ತಣ್ಣಗಿರಿಸಲು ನೆರಳು ಇರುವ ಪ್ರದೇಶಗಳಲ್ಲಿ ಪಾರ್ಕ್ ಮಾಡುವುದು ಒಳಿತು. ಯಾಕೆಂದ್ರೆ ಮರದ ಅಡಿಯಲ್ಲಿ ಅಥವಾ ಬೆಸ್‌ಮೆಂಟ್ ಪಾರ್ಕಿಂಗ್ ಸ್ಲಾಟ್‌ನಲ್ಲಿ ಪಾರ್ಕ್ ಮಾಡುವುದರಿಂದ ಕಾರು ತಂಪಾಗಿರುವುದಲ್ಲದೇ ಎಸಿ ಮೇಲೆ ಹೆಚ್ಚು ಒತ್ತಡ ಬೀಳಲಾರದು.

MOST READ: ಹೆಲ್ಮೆಟ್ ಹಾಕದ ಸಬ್ ಇನ್ಸ್‌ಪೆಕ್ಟರ್‌ಗೆ ಸರಿಯಾಗಿಯೇ ಪಾಠ ಕಲಿಸಿದ ಕಾನ್‌ಸ್ಟೆಬಲ್‌

ಕಾರಿನಲ್ಲಿ ಎಸಿ ಬಳಕೆಯೊಂದಿಗೆ ಹೆಚ್ಚಿನ ಮೈಲೇಜ್ ಪಡೆಯುವುದು ಹೇಗೆ ಗೊತ್ತಾ?

ಇದರಿಂದ ಕಾರು ಸ್ಟಾರ್ಟ್ ಮಾಡಿದ ತಕ್ಷಣ ಕಾರಿನ ಒಳಭಾಗವು ಕೆಲವೇ ನಿಮಿಷಗಳಲ್ಲಿ ತಣ್ಣನೆಯ ವಾತಾವರಣ ನಿರ್ಮಾಣವಾಗುತ್ತೆ. ಇಲ್ಲವಾದಲ್ಲಿ ಬಿಸಿಲಿನಲ್ಲಿ ಕಾಯ್ದ ಕಾರಿನಲ್ಲಿ ಎಸಿಯನ್ನು ಎಷ್ಟೇ ಜೋರಾಗಿ ಇಟ್ಟರೂ ತಣ್ಣನೆಯ ಗಾಳಿ ಬರಲು ಧೀರ್ಘ ಸಮಯವನ್ನು ತೆಗೆದುಕೊಳ್ಳುತ್ತದೆ.

ಕಾರಿನಲ್ಲಿ ಎಸಿ ಬಳಕೆಯೊಂದಿಗೆ ಹೆಚ್ಚಿನ ಮೈಲೇಜ್ ಪಡೆಯುವುದು ಹೇಗೆ ಗೊತ್ತಾ?

ವಿಂಡ್ ಸ್ಕ್ರೀನ್ ರಿಪ್ಲೆಕ್ಟರ್‍‍ಗಳನ್ನು ಬಳಸಿ..!

ಈ ಹಿಂದಿನಿಂದಲೂ ಬಹುತೇಕ ಕಾರು ಮಾಲೀಕರು ಈ ಸಲಹೆಯನ್ನು ಪಾಲಿಸುತ್ತಿದ್ದರು. ಕಾರಿನ ಮುಂಭಾಗ ವಿಂಡ್ ಸ್ಕ್ರೀನ್ ಮತ್ತು ಹಿಂಭಾಗದ ವಿಂಡ್‌ ಸ್ಕ್ರೀನ್‌ಗಳಿಗೆ ಕಪ್ಪು ಬಣ್ಣದ ರಿಫ್ಲೆಕ್ಟರ್‍‍ಗಳನ್ನು ಅಂಟಿಸುವುದು ಕೂಡಾ ಬಿಸಿಲ ತಾಪವನ್ನು ಕಡಿಮೆ ಮಾಡಬಹುದಾಗಿದೆ.

ಕಾರಿನಲ್ಲಿ ಎಸಿ ಬಳಕೆಯೊಂದಿಗೆ ಹೆಚ್ಚಿನ ಮೈಲೇಜ್ ಪಡೆಯುವುದು ಹೇಗೆ ಗೊತ್ತಾ?

ಕಿಟಕಿ ಪೂರ್ತಿ ಮುಚ್ಚುವುದು ಬೇಡ..!

ಬಹುತೇಕ ಕಾರು ಮಾಲೀಕರು ಕಾರ್ ಪಾರ್ಕ್ ಮಾಡಿದ ನಂತರ ಕಾರಿನ ವಿಂಡೊಗಳನ್ನು ಪೂರ್ತಿಯಾಗಿ ಮುಚ್ಚಿಬಿಡುತ್ತಾರೆ. ಇದು ತುಂಬಾ ತಪ್ಪು. ಹೀಗೆ ಮಾಡುವುದರಿಂದ ಕಾರಿನಲ್ಲಿರುವ ಗಾಳಿಯು ಬಿಸಿಯಾಗಿ ಮಾರ್ಪಾಡುತ್ತದೆ.

ಕಾರಿನಲ್ಲಿ ಎಸಿ ಬಳಕೆಯೊಂದಿಗೆ ಹೆಚ್ಚಿನ ಮೈಲೇಜ್ ಪಡೆಯುವುದು ಹೇಗೆ ಗೊತ್ತಾ?

ಎಸಿ ಆನ್ ಮಾಡುವ ಮುನ್ನ..!

ಹೆಚ್ಚಿನ ಸಮಯ ಬಿಸಿಲಿನಲ್ಲಿ ಪಾರ್ಕ್ ಮಾಡಿದ ನಂತರ ಈ ಟಿಪ್ಸ್ ತಪ್ಪದೇ ಅನುಸರಿಸುವುದು ಹೆಚ್ಚು ಪರಿಣಾಮಕಾರಿಯಾಗಿದೆ. ಬಿಸಿಲಿನಲ್ಲಿ ಪಾರ್ಕ್ ಮಾಡಿ ತಕ್ಷಣವೇ ಕಾರು ಪ್ರಯಾಣ ಮಾಡುವ ಸಂದರ್ಭವಿದ್ದಾಗ ಎಸಿ ಆನ್ ಮಾಡುವ ಪೂರ್ತಿಯಾಗಿ ಕಿಟಿಕಿಗಳನ್ನು ಕ್ಲೋಸ್ ಮಾಡಲೇಬೇಡಿ.

ಕಾರಿನಲ್ಲಿ ಎಸಿ ಬಳಕೆಯೊಂದಿಗೆ ಹೆಚ್ಚಿನ ಮೈಲೇಜ್ ಪಡೆಯುವುದು ಹೇಗೆ ಗೊತ್ತಾ?

ಸಮಯಕ್ಕೆ ಸರಿಯಾಗಿ ಸರ್ವೀಸ್ ಮಾಡಿಸಿ!

ಬೇಸಿಗೆ ಶುರುವಾಗುವುದಕ್ಕೂ ಮುನ್ನ ಮನೆಗಳಲ್ಲಿ ಅಳವಡಿಸಲಾಗಿರುವ ಎಸಿಯನ್ನು ಹೇಗೆ ಸರ್ವೀಸ್ ಮಾಡಿಸುತ್ತಿರೋ ಹಾಗೆಯೆ ಕಾರಿನ ಎಸಿಯನ್ನು ಕೂಡಾ ಕಾಲಕಾಲಕ್ಕೆ ಚೆಕ್ ಮಾಡಿಸುವುದನ್ನು ಮರೆಯಬಾರದು. ಇದರಿಂದ ದೂರ ಪ್ರಯಾಣದ ಸಂದರ್ಭಗಳಲ್ಲಿ ಯಾವುದೇ ರೀತಿಯಾದ ತೊಂದರೆಗಳು ಇರುವುದಿಲ್ಲ.

Most Read Articles

Kannada
Read more on driving tips car
English summary
Things have changed drastically now, and cars without ACs are almost inexistent. But, there arose a popular myth, 'Does using an AC all the time reduce the car's mileage?'. Let us explain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X