ಹೆಲ್ಮೆಟ್ ಹಾಕದ ಸಬ್ ಇನ್ಸ್‌ಪೆಕ್ಟರ್‌ಗೆ ಸರಿಯಾಗಿಯೇ ಪಾಠ ಕಲಿಸಿದ ಕಾನ್‌ಸ್ಟೆಬಲ್‌

ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದವರು ಯಾರೆ ಇರಲಿ ಅದು ದಂಡಾರ್ಹ ಅಪರಾಧ. ಆದ್ರೆ ಸಾರ್ವಜನಿಕರಿಗೆ ಆದರ್ಶವಾಗಿರಬೇಕಿದ್ದ ಇಲ್ಲೊಬ್ಬ ಸಬ್ ಇನ್ಸ್‌ಪೆಕ್ಟರ್ ಮಾತ್ರ ಹೆಲ್ಮೆಟ್ ಹಾಕದೇ ಬೈಕ್ ಚಾಲನೆ ಮಾಡಿದ್ದಲ್ಲದೆ ಪ್ರಶ್ನೆ ಮಾಡಿದ ಟ್ರಾಫಿಕ್ ಕಾನ್‌ಸ್ಟೆಬಲ್ ಮೇಲೆಯೇ ದರ್ಪ ತೋರಿದ್ದಾರೆ.

ಹೆಲ್ಮೆಟ್ ಹಾಕದ ಸಬ್ ಇನ್ಸ್‌ಪೆಕ್ಟರ್‌ಗೆ ಸರಿಯಾಗಿಯೇ ಪಾಠ ಕಲಿಸಿದ ಕಾನ್‌ಸ್ಟೆಬಲ್‌

ದೇಶಾದ್ಯಂತ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಹಲವಾರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಸಹ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಮಾತ್ರ ಕಡಿಮೆಯಾಗುತ್ತಿಲ್ಲ. ಹೀಗಾಗಿರುವಾಗ ಸಾರ್ವಜನಿಕರಿಗೆ ಮಾದರಿಯಾಗಬೇಕಾದ ಪೊಲೀಸರೇ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದರೇ ಹೇಗೆ ಹೇಳಿ? ಇಲ್ಲೂ ಕೂಡಾ ಅಂತದ್ದೆ ಒಂದು ಘಟನೆಯು ಪೊಲೀಸರ ಮಧ್ಯೆಯೇ ವಾಕ್ಸಮರಕ್ಕೆ ಕಾರಣವಾಗಿದೆ.

ಹೆಲ್ಮೆಟ್ ಹಾಕದ ಸಬ್ ಇನ್ಸ್‌ಪೆಕ್ಟರ್‌ಗೆ ಸರಿಯಾಗಿಯೇ ಪಾಠ ಕಲಿಸಿದ ಕಾನ್‌ಸ್ಟೆಬಲ್‌

ಹೌದು, ಸಬ್ ಇನ್‌ಸೆಕ್ಟರ್ ಒಬ್ಬರು ಹೆಲ್ಮೆಟ್ ಇಲ್ಲದೆಯೇ ಬೈಕ್ ಚಾಲನೆ ಮಾಡುತ್ತಿದ್ದರು. ಇದೇ ವೇಳೆ ಸಂಚಾರಿ ನಿಯಮ ಉಲ್ಲಂಘನೆಗಳ ತಪಾಸಣೆ ನಡೆಸುತ್ತಿದ್ದ ಟ್ರಾಫಿಕ್ ಪೊಲೀಸರ ತಂಡದಲ್ಲಿದ್ದ ಮುಖ್ಯ ಪೇದೆಯೊಬ್ಬರು ಹೆಲ್ಮೆಟ್ ಇಲ್ಲದ ಸಬ್‌ಇನ್ಸ್‌ಪೆಕ್ಟರ್ ಅವರನ್ನು ತಡೆದಿದ್ದಾರೆ.

ಹೆಲ್ಮೆಟ್ ಹಾಕದ ಸಬ್ ಇನ್ಸ್‌ಪೆಕ್ಟರ್‌ಗೆ ಸರಿಯಾಗಿಯೇ ಪಾಠ ಕಲಿಸಿದ ಕಾನ್‌ಸ್ಟೆಬಲ್‌

ಆದರೆ ತಮ್ಮನ್ನು ಅಡ್ಡಗಟ್ಟಿದ ಮುಖ್ಯಪೇದೆಯ ಕ್ರಮಕ್ಕೆ ಸಿಡಿದೆದ್ದ ಸಬ್ ಇನ್‌ಸೆಕ್ಟರ್ ತನ್ನ ವಿರುದ್ದ ಏನು ಮಾಡಲು ಸಾಧ್ಯವಿಲ್ಲ ದರ್ಪ ತೋರಿದ್ದಾರೆ. ಆದರೆ ಸಬ್‌ಇನ್ಸೆಪೆಕ್ಟರ್ ದರ್ಪಕ್ಕೆ ಜಗ್ಗದ ಮುಖ್ಯ ಪೇದೆಯು ಹಿರಿಯ ಪೊಲೀಸ್ ಅಧಿಕಾರಿಯ ಬೈಕ್ ಅಡ್ಡಗಟ್ಟಿ ದಂಡ ವಿಧಿಸಿದ್ದಾರೆ.

ಹೆಲ್ಮೆಟ್ ಹಾಕದ ಸಬ್ ಇನ್ಸ್‌ಪೆಕ್ಟರ್‌ಗೆ ಸರಿಯಾಗಿಯೇ ಪಾಠ ಕಲಿಸಿದ ಕಾನ್‌ಸ್ಟೆಬಲ್‌

ಈ ಮೂಲಕ ಹಿರಿಯ ಪೊಲೀಸ್ ಅಧಿಕಾರಿಗೆ ಕಾನೂನು ಎಲ್ಲರಿಗೂ ಒಂದೇ ಎಂಬುವುದನ್ನು ಮನವರಿಕೆ ಮಾಡಿಕೊಟ್ಟ ಮುಖ್ಯ ಪೇದೆಯು, ಹಿರಿಯ ಅಧಿಕಾರಿಗೆ ಹೆಲ್ಮೆಟ್ ಹಾಕದಿದ್ದಕ್ಕೆ ಅಷ್ಟೇ ಅಲ್ಲದೇ ಬೈಕ್ ಇನ್ಸುರೆನ್ಸ್ ಅನ್ನು ಸಹ ಕಡ್ಡಾಯ ಹೊಂದಿರಬೇಕೆಂಬದು ಸರಿಯಾಗಿಯೇ ಜಾಡಿಸಿದ್ದಾನೆ. ಮೊದಮೊದಲು ಮುಖ್ಯ ಪೇದೆಯ ವಿರುದ್ಧ ದರ್ಪ ತೋರಿದ್ದ ಸಬ್ ಇನ್‌ಸೆಕ್ಟರ್ ತದನಂತರ ಕಾನೂನು ಪಾಲನೆ ಕುರಿತು ಮುಖ್ಯ ಪೇದೆಯ ವಾದಕ್ಕೆ ತಲೆಬಾಗಿದ್ದಾನೆ.

ಹೆಲ್ಮೆಟ್ ಹಾಕದ ಸಬ್ ಇನ್ಸ್‌ಪೆಕ್ಟರ್‌ಗೆ ಸರಿಯಾಗಿಯೇ ಪಾಠ ಕಲಿಸಿದ ಕಾನ್‌ಸ್ಟೆಬಲ್‌

ಇದೇ ವಾಹನ ತಪಾಸಣಾ ತಂಡದಲ್ಲಿದ್ದ ಅಸಿಸ್ಟಂಟ್ ಕಮಿಷನರ್ ಸಹ ಮುಖ್ಯಪೇದೆಯ ಕ್ರಮವನ್ನು ಬೆಂಬಲಿಸಿ ಸಬ್ ಇನ್‌ಸೆಕ್ಟರ್ ಅವರ ಬೈಕ್ ವಿರುದ್ದ ಕೇಸ್ ದಾಖಸಿ ದಂಡ ವಸೂಲಿ ಮಾಡಿದ್ದು, ಪೊಲೀಸ್ ಅಧಿಕಾರಿಗಳು ಮೊದಲ ಸಾರ್ವಜನಿಕರಿಗೆ ಮಾದರಿಯಾಗಿರಬೇಕೆಂದು ಬುದ್ದಿವಾದ ಹೇಳಿದ್ದಾರೆ.

ಹೆಲ್ಮೆಟ್ ಹಾಕದ ಸಬ್ ಇನ್ಸ್‌ಪೆಕ್ಟರ್‌ಗೆ ಸರಿಯಾಗಿಯೇ ಪಾಠ ಕಲಿಸಿದ ಕಾನ್‌ಸ್ಟೆಬಲ್‌

ಈ ಘಟನೆಯು ಚೆನ್ನೈನ ಕಾಮರಾಜ್ ಸಲೈ ಪ್ರದೇಶದಲ್ಲಿ ನಡೆದಿದ್ದು, ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ ಮಾಡುತ್ತಿದ್ದ ಸಬ್ ಇನ್‌ಸೆಕ್ಟರ್ ವಿರುದ್ಧ ಮುಖ್ಯ ಪೇದೆ ಕೈಗೊಂಡ ಕ್ರಮದ ಬಗ್ಗೆ ಎಲ್ಲಡೆ ಪ್ರಶಂಸೆ ವ್ಯಕ್ತವಾಗಿದೆ.

ಸಬ್‌ಇನ್ಸ್‌ಪೆಕ್ಟರ್ ಬೈಕ್ ತಡೆದು ಸಂಚಾರಿ ನಿಯಮ ಉಲ್ಲಂಘನೆ ಕುರಿತು ಪ್ರಶ್ನಿಸುತ್ತಿರುವ ಮುಖ್ಯ ಪೇದೆಯ ವಿಡಿಯೋ ಇಲ್ಲಿದೆ ನೋಡಿ..

ಹೆಲ್ಮೆಟ್ ಹಾಕದ ಸಬ್ ಇನ್ಸ್‌ಪೆಕ್ಟರ್‌ಗೆ ಸರಿಯಾಗಿಯೇ ಪಾಠ ಕಲಿಸಿದ ಕಾನ್‌ಸ್ಟೆಬಲ್‌

ಇನ್ನು ದೇಶಾದ್ಯಂತ ಹೊಸ ವಾಹನ ಸಂಖ್ಯೆ ಹೆಚ್ಚಾದಂತೆ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣ ಹೆಚ್ಚುತ್ತಲೇ ಇದ್ದು, ದಂಡದ ಮೊತ್ತವನ್ನು ಹೆಚ್ಚಿಸದರೂ ಸಹ ಪ್ರಕರಣ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುವುದು ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತಿದೆ.

MOST READ: 78 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದ ಕಾರು ಮಾಲೀಕನ ಕಥೆ ಹರೋಹರ

ಹೆಲ್ಮೆಟ್ ಹಾಕದ ಸಬ್ ಇನ್ಸ್‌ಪೆಕ್ಟರ್‌ಗೆ ಸರಿಯಾಗಿಯೇ ಪಾಠ ಕಲಿಸಿದ ಕಾನ್‌ಸ್ಟೆಬಲ್‌

ಹೀಗಾಗಿಯೇ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಮತ್ತಷ್ಟು ಕಠಿಣ ಕ್ರಮಗಳನ್ನು ಜಾರಿಗೊಳಿಸುವ ಸಂಬಂಧ ಕೇಂದ್ರ ಸಾರಿಗೆ ಇಲಾಖೆಯು ಮೋಟಾರ್ ಕಾಯ್ದೆಯಲ್ಲಿ ಕೆಲವು ತಿದ್ದುಪಡಿಗಳನ್ನು ತರಲು ಸಿದ್ದತೆ ನಡೆಸಿದ್ದು, ಅಪಘಾತಗಳಿಗೆ ಕಾರಣವಾಗಬಲ್ಲ ಕೆಲವು ನಿಯಮ ಉಲ್ಲಂಘನೆಗಳ ವಿರುದ್ಧ ಕಠಿಣ ಕ್ರಮಗಳನ್ನು ಜಾರಿಗೆ ತರಲು ಚಿಂತನೆ ನಡೆಸಿದೆ.

More from DriveSpark

Article Published On: Friday, June 14, 2019, 15:31 [IST]
English summary
Angry cop BUSTS sub-inspector for riding without wearing a helmet. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+