10 ಸಾವಿರ ಎರ್ಟಿಗಾ ಬುಕ್ಕಿಂಗ್, ವೇಟಿಂಗ್ ಅವಧಿ ಎಷ್ಟು?

ಇತ್ತೀಚೆಗೆ ರಸ್ತೆಗಿಳಿದ ಲೈಫ್ ಯುಟಿಲಿಟಿ ವೆಹಿಕಲ್ ಮಾರುತಿ ಸುಜುಕಿ ಎರ್ಟಿಗಾ ಕಂಪನಿಯ ನಿರೀಕ್ಷೆಯನ್ನೂ ಮೀರಿ ಬೇಡಿಕೆ ಪಡೆದುಕೊಳ್ಳುತ್ತಿದೆ. ಈ ಕಾರು ರಸ್ತೆಗಿಳಿದ ಐದೇ ಐದು ದಿನಗಳಲ್ಲಿ ಸುಮಾರು 10 ಸಾವಿರ ಗ್ರಾಹಕರು ಬುಕ್ಕಿಂಗ್ ಮಾಡಿದ್ದಾರೆ.

ಮಾರುತಿ ಸುಜುಕಿ ಎರ್ಟಿಗಾ ಏಪ್ರಿಲ್ ಹದಿನಾಲ್ಕರಂದು ರಸ್ತೆಗಿಳಿದಿದೆ. ವಿಶೇಷವೆಂದರೆ ಈ ಕಾರು ಈಗಾಗಲೇ ಬೆಂಗಳೂರಿನಲ್ಲೂ ಬಿಡುಗಡೆಯಾಗಿದೆ. ಕುಟುಂಬ ಸವಾರಿಗೆ ಸೂಕ್ತವಾದ ಎರ್ಟಿಗಾ ಕಾರಿನ ಎಕ್ಸ್‌ಕ್ಲೂಸಿವ್ ವಿಮರ್ಶೆ ಓದಲು ಈ ಲಿಂಕ್ ಪ್ರವೇಶಿಸಿರಿ.

ಮಾರುತಿ ಸುಜುಕಿ ಎರ್ಟಿಗಾ 7 ಸೀಟಿನ ಹಗುರ ಮಲ್ಟಿಪರ್ಪೊಸ್ ವೆಹಿಕಲ್ ಆಗಿದೆ. ಇದರ ದರ 5.89 ಲಕ್ಷ ರು.ನಿಂದ 7.30 ಲಕ್ಷ ರು.ವರೆಗಿದೆ. ಇದು ಮಾರುತಿ ಸುಜುಕಿ ಕಂಪನಿಯ ಮೊದಲ ಎಂಪಿವಿ. ಬೃಹತ್ ಕುಟುಂಬದ ಸವಾರಿಗೆ ಸೂಕ್ತವಾಗಿರುವ ಈ ಕಾರು ಮುಂದಿನ ದಿನಗಳಲ್ಲಿ ಇನ್ನಷ್ಟು ಬೇಡಿಕೆ ಪಡೆದುಕೊಳ್ಳುವ ನಿರೀಕ್ಷೆಯನ್ನು ಕಂಪನಿ ವ್ಯಕ್ತಪಡಿಸಿದೆ.

ವಿಶೇಷವೆಂದರೆ ಮಾರುತಿಯ ಇತರ ಕಾರುಗಳಿಗೆ ಹೋಲಿಸಿದರೆ ಎರ್ಟಿಗಾ ಹೆಚ್ಚು ಬೇಡಿಕೆ ಪಡೆದುಕೊಂಡಿದೆ. ಪೆಟ್ರೋಲ್ ಆವೃತ್ತಿ ಎರ್ಟಿಗಾ ವೇಟಿಂಗ್ ಪಿರೆಯಿಡ್ 1-2 ತಿಂಗಳು ಮತ್ತು ಡೀಸೆಲ್ ಆವೃತ್ತಿ ಎರ್ಟಿಗಾ ಡೆಲಿವರಿಗೆ 3-4 ತಿಂಗಳು ಕಾಯುವ ಅಗತ್ಯವಿದೆ. (ಕನ್ನಡ ಡ್ರೈವ್‌ಸ್ಪಾರ್ಕ್)

More from DriveSpark

Article Published On: Wednesday, April 18, 2012, 15:40 [IST]
English summary
The Ertiga MPV has received a record breaking 10,000 bookings in just five days of its launch. Petrol variant of the Ertiga has a waiting period of 1-2 months, it will take 3-4 months for the diesel variant to be delivered.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+