ಜನರಿಗೆ ಕಡಿಮೆ ದರಕ್ಕೆ ಕಾರುನೀಡಿ ಕೆಟ್ಟ ಫಿಯೆಟ್

ಫಿಯೆಟ್ ಇಂಡಿಯಾ ಕಂಪನಿಗೆ ಸುಮಾರು 400 ಕೋಟಿ ರು.ನಷ್ಟು ಬಾಕಿ ಅಬಕಾರಿ ಸುಂಕ ವಿಧಿಸುವಂತೆ ಸುಪ್ರಿಂಕೋರ್ಟ್ ಆದೇಶಿಸಿದೆ. ಮಾರುಕಟ್ಟೆ ದರಕ್ಕಿಂತ ಕಡಿಮೆ ದರಕ್ಕೆ ಗ್ರಾಹಕರಿಗೆ ಕಾರು ನೀಡಿದ ಪರಿಣಾಮವಾಗಿ ಇಟಲಿಯ ಕಾರು ಕಂಪನಿಗೆ ದೇಶದಲ್ಲಿ ಭಾರಿ ಹಿನ್ನಡೆಯಾಗಿದೆ.

ಫಿಯೆಟ್ ಮತ್ತು ಪ್ರೀಮಿಯರ್ ಆಟೋಮೊಬೈಲ್ಸ್ ಜಂಟಿ ಉದ್ಯಮ 1996ರಲ್ಲಿ ಆರಂಭವಾದಗಿನಿಂದ ಇಲ್ಲಿವರೆಗೆ ಬಾಕಿವುಳಿದ ಎಲ್ಲಾ ಅಬಕಾರಿ ಸುಂಕ ಪಾವತಿಸಲು ಕೋರ್ಟ್ ಸೂಚಿಸಿದೆ.

ಫಿಯೆಟ್ ಕಂಪನಿಯು ಜನಪ್ರಿಯ ಯುನೊ ಹ್ಯಾಚ್ ಬ್ಯಾಕ್ ಕಾರುಗಳನ್ನು ಸಿಕೆಡಿ ಹಾದಿ ಮೂಲಕ ಭಾರತಕ್ಕೆ ತರುತ್ತಿತ್ತು. ಅದನ್ನು ಇಲ್ಲಿನ ಮಾರುಕಟ್ಟೆ ದರಕ್ಕಿಂತ ಕಡಿಮೆಗೆ ಮಾರಾಟ ಮಾಡುತ್ತಿತ್ತು. ಅಂದರೆ ಕಾರಿನ ವೆಚ್ಚ 5 ಲಕ್ಷ ರು. ಇದ್ದರೆ 4 ಲಕ್ಷ ರು.ಗೆ ಮಾರಾಟ ಮಾಡುತ್ತಿತ್ತು.

ಆದರೆ ತೆರಿಗೆ ಇಲಾಖೆಯು ಕಾರಿನ ನಿಜವಾದ ವೆಚ್ಚಕ್ಕೆ ತೆರಿಗೆ ವಿಧಿಸಿದೆ. ಗ್ರಾಹಕರ ಮೇಲೆ ಹೊರಿಸಬೇಕಿದ್ದ ಅಬಕಾರಿ ಸುಂಕವನ್ನೂ ಇದೀಗ ತಾನೇ ಪಾವತಿಸಬೇಕಿದೆ. 1991ರಿಂದ 2001ರವರೆಗೆ ಮಾರಾಟವಾದ ಎಲ್ಲಾ ಯುನೊ ಕಾರುಗಳನ್ನು ಲೆಕ್ಕಮಾಡಿ ಅಬಕಾರಿ ಸುಂಕ ವಿಧಿಸಲಾಗಿದೆ.

ಕಾರಿನ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಕಾರುಗಳನ್ನು ಮಾರಾಟ ಮಾಡಿದ್ದಾಗಿ ಫಿಯೆಟ್ ನ್ಯಾಯಾಲಯದಲ್ಲಿ ವಾದಿಸಿತ್ತು. ಮಾರುಕಟ್ಟೆಯಲ್ಲಿ ಪಾರಮ್ಯ ಸಾಧಿಸಲು ಕಡಿಮೆ ದರಕ್ಕೆ ಮಾರಾಟ ಮಾಡುವ ತಂತ್ರವನ್ನು ಕಂಪನಿ ಅನುಸರಿಸಿದೆ ಎಂದು ತೆರಿಗೆ ಇಲಾಖೆ ವಾದಿಸಿತ್ತು.

More from DriveSpark

Article Published On: Saturday, September 1, 2012, 11:57 [IST]
English summary
The Supreme court of India, has slammed Fiat India with regards to excise duties. The court has instructed the Italian car manufacturer, to pay around INR 400 crore towards excise duty. This outstanding excise duty, is with regards to the joint venture between Fiat and Premier Automobiles, which existed in 1996.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+