ಫಿಯೆಟ್ ಗ್ರಾಂಡ್ ಪುಂಟೊ ಸ್ಪೋರ್ಟ್ ರಸ್ತೆಗೆ, ದರವೆಷ್ಟು?
ಫಿಯೆಟ್ ಇಂಡಿಯಾ ಕಂಪನಿಯು ನೂತನ ಗ್ರಾಂಡ್ ಪುಂಟೊ ಸ್ಪೋರ್ಟ್ ಆವೃತ್ತಿಯನ್ನು ಪುಣೆಯ ಫಿಯೆಟ್ ಕೆಫೆಯಲ್ಲಿ ಬಿಡುಗಡೆ ಮಾಡಿದೆ. ಇದರ ದೆಹಲಿ ಎಕ್ಸ್ ಶೋರೂಂ ದರ 7.36 ಲಕ್ಷ ರುಪಾಯಿ.
ಫಿಯೆಟ್ ಕಂಪನಿಯ ಪುಂಟೊ, ತನ್ನ ಸೌಂದರ್ಯ, ಕಾರ್ಯಕ್ಷಮತೆ ಮತ್ತು ಚಾಲನಾ ಡೈನಾಮಿಕ್ ವಿಷ್ಯಗಳಿಂದ ಗ್ರಾಹಕರನ್ನು ಸೆಳೆದಿದೆ. ಇದೀಗ ನೂತನ ಸ್ಪೋರ್ಟ್ ಪುಂಟೊ ಆವೃತ್ತಿಯು ಇಂಧನ ದಕ್ಷತೆ ಮತ್ತು ಹೆಚ್ಚುವರಿ ಫೀಚರುಗಳನ್ನು ಹೆಚ್ಚಿಸಿಕೊಂಡು ಆಗಮಿಸಿದೆ.
ನೂತನ ಆವೃತ್ತಿಯು ಕ್ರೊಮ್ ಡೋರ್ ಹ್ಯಾಂಡಲ್, ಹೊಳೆಯುವ ಎಗ್ಸಾಸ್ಟ್ ಮತ್ತು ಸ್ಪೋರ್ಟಿ ಡಿಕಾಲ್ಸ್ ಇತ್ಯಾದಿ ಹೊಸ ಫೀಚರುಗಳನ್ನು ಹೊಂದಿದೆ. ಇಂಟಿರಿಯರೊಳಗೆ ಮೆಟಾಲಿಕ್ ಪೆಡಾಲ್, ಸೀಟುಗಳಿಗೆ ಕೆಂಪು ಹೊಲಿಗೆ ಸೇರಿದಂತೆ ಹಲವು ಸುಂದರ ಫೀಚರುಗಳು ಅಡಕವಾಗಿವೆ.
ಗ್ರಾಂಡ್ ಪುಂಟೊ ಸ್ಪೋರ್ಟ್ಸ್ ಕಾರು 1.3 ಲೀಟರಿನ 91 ಅಶ್ವಶಕ್ತಿಯ ಮಲ್ಟಿಜೆಟ್ ಟರ್ಬೊ ಡೀಸೆಲ್ ಎಂಜಿನ್ ಹೊಂದಿದೆ. ಇದು ಸುಮಾರು 209 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ನೂತನ ಪುಂಟೊ ಪ್ರತಿಲೀಟರ್ ಡೀಸೆಲಿಗೆ ಸುಮಾರು 20.5 ಕಿ.ಮೀ. ಮೈಲೇಜ್ ನೀಡುವುದಾಗಿ ಕಂಪನಿ ಪ್ರತಿಪಾದಿಸಿದೆ.


Click it and Unblock the Notifications









