ಫೋರ್ಸ್-ಎಚ್‌ಪಿಸಿಎಲ್ ನಡುವೆ ತೈಲ ಒಪ್ಪಂದ

ಫೋರ್ಸ್ ಮೋಟರ್ಸ್ ಕಂಪನಿಯು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಜೊತೆ ಎಂಜಿನ್ ಆಯಿಲ್ ಪೂರೈಕೆ ಮಾಡುವ ಸಲುವಾಗಿ ಮೈತ್ರಿ ಮಾಡಿಕೊಂಡಿದೆ. ಫೋರ್ಸ್ ಮೋಟರ್ಸ್ ಕಂಪನಿಯ ಎಲ್ಲಾ ವಾಹನಗಳು ಇನ್ನು ಮುಂದೆ ಎಚ್‌ಪಿಸಿಎಲ್ ಎಂಜಿನ್ ಆಯಿಲ್ ಹೊಂದಿರಲಿದೆ.

ಫೋರ್ಸ್ ಮೋಟರ್ಸ್ ಕಂಪನಿಯು ಫೋರ್ಸ್ ಒನ್ ಸ್ಪೋರ್ಟ್ಸ್ ಕಾರು ಮೂಲಕ ದೇಶದ ಪ್ರಯಾಣಿಕ ಕಾರು ಮಾರುಕಟ್ಟೆಗೆ ಪರಿಚಯಿಸಿತ್ತು. "ಜೆನ್ಯೂನ್ ಆಯಿಲ್ ಪೂರೈಕೆ ಕುರಿತಾದ ಒಪ್ಪಂದಕ್ಕೆ ಕಂಪನಿಗಳೆರಡು ಸಹಿ ಹಾಕಿವೆ" ಎಂದು ನೂತನ ಮೈತ್ರಿಯ ಕುರಿತು ಫೋರ್ಸ್ ಮೋಟರ್ಸ್ ಪ್ರಕಟಣೆಯಲ್ಲಿ ಹೇಳಿದೆ.

ಫೋರ್ಸ್ ಮೋಟರ್ಸ್ ಕಂಪನಿಯ ಎಲ್ಲಾ ವಾಹನಗಳ ಎಂಜಿನ್, ಗೇರ್‌ಬಾಕ್ಸ್ ಮತ್ತು ಆಕ್ಸೆಲ್‌ಗಳಿಗೆ ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಯು ತೈಲ ಪೂರೈಕೆ ಮಾಡಲಿದೆ. ಫೋರ್ಸ್ ಮೋಟರ್ಸ್ ಕಂಪನಿಯ ಪ್ರತಿವಾಹನಗಳ ಸೂಕ್ತವಾಗುವಂತಹ ವಿವಿಧ ಪರಿಷ್ಕೃತ ತೈಲಗಳನ್ನು ಕಂಪನಿ ಪೂರೈಕೆ ಮಾಡಲಿದೆ.

ಹಗುರ ವಾಣಿಜ್ಯ ವಾಹನ ಮಾರುಕಟ್ಟೆಯಲ್ಲಿ ಫೋರ್ಸ್ ಮೋಟರ್ಸ್ ಕಂಪನಿಯು ಪ್ರಮುಖ ಕಂಪನಿಯಾಗಿದೆ. ಕಂಪನಿಯು ಮಲ್ಟಿ ಯುಟಿಲಿಟಿ ವಾಹನ, ಕೃಷಿ ಅಗತ್ಯ ವಾಹನಗಳನ್ನೂ ಉತ್ಪಾದಿಸುತ್ತಿದೆ. ಕಂಪನಿಯು ಇತ್ತೀಚೆಗೆ ಪ್ರಯಾಣಿಕ ಕಾರು ಮಾರುಕಟ್ಟೆಗೂ ಲಗ್ಗೆಯಿಟ್ಟಿದೆ. (ಕನ್ನಡ ಡ್ರೈವ್‌ಸ್ಪಾರ್ಕ್)

More from DriveSpark

Article Published On: Thursday, April 12, 2012, 15:14 [IST]
English summary
Force Motors, the maker of the Force One SUV has tied up with Hindustan Petroleum Corporation Ltd to supply engine oil to its entire range of vehicles. This deal will mean all Force Motors' vehicles will be getting HPCL's engine oils from April 2012.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+