ಕೆಸರಿನಲ್ಲಿ ಸಿಲುಕಿದ್ದ 9 ಟನ್ ತೂಕದ ಟ್ರಕ್ ಅನ್ನು ಸಲೀಸಾಗಿ ಎಳೆದ ಫೋರ್ಸ್ ಗೂರ್ಖಾ
ಸಾಮಾನ್ಯ ರಸ್ತೆಗಳನ್ನು ಹೊರತುಪಡಿಸಿ ಗುಡ್ಡಗಾಡು ಪ್ರದೇಶಗಳಲ್ಲಿ ಪ್ರಯಾಣಿಸುವಾಗ ಆಫ್ ರೋಡ್ ವೈಶಿಷ್ಟ್ಯತೆಯ ವಾಹನಗಳ ಬಳಕೆಯು ಸಾಕಷ್ಟು ಅನುಕೂಲಕರವಾಗಿರುತ್ತವೆ. ಇದಕ್ಕೆ ಕಾರಣ, ಸಾಮಾನ್ಯ ಮಾದರಿಯ ಕಾರುಗಳಿಂತ ಆಫ್ ರೋಡ್ ವೈಶಿಷ್ಟ್ಯತೆ ಕಾರುಗಳ ಚಾಲನಾ ವೈಖರಿಯು ವಿಭಿನ್ನವಾಗಿದ್ದು, ಗುಡ್ಡಗಾಡು ಪ್ರದೇಶಗಳಲ್ಲಿ ಹೇಗೆಲ್ಲಾ ಸಹಾಯಕ್ಕೆ ಬರುತ್ತವೆ ಎನ್ನುವುಕ್ಕೆ ಈ ಘಟನೆಯೇ ಸಾಕ್ಷಿ.

ಹೌದು, ಕಣಿವೆ ಪ್ರದೇಶಗಳಲ್ಲಿ ಸುರಕ್ಷಿತವಾಗಿ ವಾಹನ ಚಾಲನೆ ಮಾಡುವುದು ಅಷ್ಟು ಸುಲಭವಲ್ಲ. ಕಡಿದಾದ ಪ್ರದೇಶಗಳಲ್ಲಿ ಪ್ರಯಾಣಿಸುವಾಗ ವಾಹನಗಳಲ್ಲಿರುವ ಆಫ್ ರೋಡ್ ತಾಂತ್ರಿಕ ಸೌಲಭ್ಯಗಳು ಸುರಕ್ಷಿತ ಚಾಲನೆಗೆ ಸಾಕಷ್ಟು ಸಹಕಾರಿಯಾಗಿದ್ದು, ಇವು ಇತರೆ ಸಾಮಾನ್ಯ ಮಾದರಿಯ ವಾಹನಗಳಿಂತ ಆಫ್ ರೋಡ್‌ನಲ್ಲಿ ಹೇಗೆ ಭಿನ್ನವಾಗಿರುತ್ತವೆ ಎನ್ನುವುದನ್ನು ನೀವಿಲ್ಲಿ ನೋಡಬಹುದುದಾಗಿದೆ.

ಕಳೆದ ಕೆಲ ದಿನಗಳ ಹಿಂದೆ ಉತ್ತರಾಖಂಡ್‌ನಲ್ಲಿ ಐರಿಷ್ ಟಿಪ್ಪರ್ ಟ್ರಕ್ ಒಂದು ಕಡಿದಾದ ಗುಡ್ಡಗಾಡು ರಸ್ತೆಯೊಂದರಲ್ಲಿ ಚಲಿಸುತ್ತಿದ್ದಾಗ ಕೆಸರಿನಲ್ಲಿ ಸಿಲುಕಿಕೊಂಡಿತ್ತು. ಅತಿಯಾದ ಭಾರವಿದ್ದ ಕಾರಣ ಮೇಲಕ್ಕೆ ಚಲಿಸಲು ಸಾಧ್ಯವಾಗದೇ ಒದ್ದಾಡುತ್ತಿತ್ತು.

ಆದ್ರೆ ಅದೇ ರಸ್ತೆಯಲ್ಲಿ ತೆರಳುತ್ತಿದ್ದ ಫೋರ್ಸ್ ಗೂರ್ಖಾ ಆಫ್ ರೋಡ್ ಕಾರು ಮಾದರಿಯು ಕೆಸರಿನಲ್ಲಿ ಸಿಲುಕಿದ್ದ ಟ್ರಕ್ ಅನ್ನು ಹೊರತೆಗೆಲು ಸಹಕಾರಿಯಾಗಿದ್ದು, ಬರೋಬ್ಬರಿ 9 ಟನ್ ಸರಕು ತುಂಬಿದ್ದ ಟ್ರಕ್ ಅನ್ನು ಅತಿ ಸುಲಭವಾಗಿ ಹೊರಗೆ ಎಳೆದು ಎಲ್ಲರ ಮೆಚ್ಚುಗೆಗೆ ಪಾತ್ರವಾಯ್ತು.
ಸುಮಾರು 2 ಗಂಟೆಗಳ ಕಾಲ ಕೆಸರಿನಲ್ಲಿ ಸಿಲುಕಿದ್ದ ಟ್ರಕ್ ಅನ್ನು ಹೊರತೆಗೆಯಲು ಯತ್ನಿಸಿ ದಣಿದಿದ್ದ ಚಾಲಕ ಮತ್ತ ಸ್ಥಳೀಯರು ಕೊನೆಗೆ ಟ್ರಕ್‌ನಲ್ಲಿದ್ದ ಸರಕನ್ನು ಕೆಳಗಿಳಿಸಿ ಹೊರಗೆ ಎಳೆಯಲು ನಿರ್ಧರಿಸಿದ್ದರು. ಈ ವೇಳೆ ಅದೇ ಮಾರ್ಗದಲ್ಲಿ ಬಂದ ಫೋರ್ಸ್ ಗೂರ್ಖಾ ಕೇವಲ 5 ನಿಮಿಷಗಳಲ್ಲಿ ಕೆಸರಿನಲ್ಲಿ ಸಿಲುಕಿದ್ದ ಟ್ರಕ್ ಅನ್ನು ಸರಿ ದಾರಿಗೆ ತಂದು ನಿಲ್ಲಿಸಿತು. ಇದರಿಂದಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ಆಫ್ ರೋಡ್ ವಾಹನಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಈ ನಿಟ್ಟಿನಲ್ಲಿ ಫೋರ್ಸ್ ಗೂರ್ಖಾ ಕಾರು ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿವೆ.

ಸದ್ಯ ಮಾರುಕಟ್ಟೆಯಲ್ಲಿ ಫೋರ್ಸ್ ಗೂರ್ಖಾ ಕಾರುಗಳು ಮೂರು ಪ್ರಮುಖ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎಕ್ಸ್‌ಪ್ಲೊರರ್, ಎಕ್ಸ್‌ಟ್ರಿಮ್ ಮತ್ತು ಎಕ್ಸ್‌ಪ್ಯಾಂಡೆಷನ್ ಆವೃತ್ತಿಗಳು ಖರೀದಿಗೆ ಲಭ್ಯವಿವೆ.
MOST READ: ಪಾರ್ಕಿಂಗ್ ವೇಳೆ ಮಹಿಳೆಯ ಎಡವಟ್ಟು- ಮೊದಲ ಮಹಡಿಯಿಂದ ಲೆಕ್ಸಸ್ ಕಾರು ಜಂಪ್..!

ಇದರಲ್ಲಿ ಮೂರು ಬಾಗಿಲುವುಳ್ಳ ಎಕ್ಸ್‌ಟ್ರಿಮ್ ಮಾದರಿಯು ಕಳೆದ ಕೆಲ ತಿಂಗಳ ಹಿಂದಷ್ಟೇ ವಿನೂತನ ವಿನ್ಯಾಸಗಳೊಂದಿಗೆ ಮರು ಬಿಡುಗಡೆಗೊಳಿಸಿದ್ದು, ಫರ್ಪಾಮೆನ್ಸ್ ಪ್ರಿಯರ ಆಕರ್ಷಣೆಗೆ ಕಾರಣವಾಗಿರುವ ಹೊಸ ಎಕ್ಸ್‌ಟ್ರಿಮ್ ಕಾರು ಮಹೀಂದ್ರಾ ಥಾರ್‌ಗೆ ಭಾರೀ ಪೈಪೋಟಿ ನೀಡುತ್ತಿದೆ.

ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ ಕಾರು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಮರ್ಸಿಡಿಸ್-ಬೆಂಝ್ ಒಎಮ್611 ಡೀಸೆಲ್ ಎಂಜಿನ್ ಸಹಾಯದಿಂದ 138-ಬಿಹೆಚ್‍ಪಿ ಮತ್ತು 321-ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಈ ಹಿಂದೆ ಬಳಸಲಾದ 2.2 ಲೀಟರ್ ಡೀಸೆಲ್ ಎಂಜಿನ್ ಇಲ್ಲೂ ಕೂಡಾ ಬಳಕೆ ಮಾಡಲಾಗಿದೆ.
MOST READ: ರಾಂಗ್ ಸೈಡ್‌ನಲ್ಲಿ ಬಂದ ಕಾರು ಚಾಲಕನಿಗೆ ಬೆವರಿಳಿಸಿದ ಬೈಕ್ ರೈಡರ್..!

ಇನ್ನು ಫೋರ್ಸ್ ಗೂರ್ಖಾ ಎಕ್ಸ್‌ಟ್ರಿಮ್ ಆಫ್ ರೋಡಿಂಗ್‌ನಲ್ಲಿ ಉತ್ತಮವಾಗಿದ್ದು, 205-ಎಮ್ಎಮ್ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಹಾಗೆಯೇ 550-ಎಂಎಂ ವಾಟರ್ ವೇಡಿಂಗ್ ಡೆಪ್ತ್ ಅನ್ನು ಪಡೆದುಕೊಂಡಿದ್ದು, ಜೊತೆಗೆ 2,500 ಕೆಜಿ ತೂಕದೊಂದಿಗೆ 63.5 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯ ಹೊಂದಿದೆ.


Click it and Unblock the Notifications








