ಗುಜರಾತ್: ಫೋರ್ಡ್ ಕಾರು ಘಟಕಕ್ಕೆ ಗುದ್ದಲಿಪೂಜೆ
ಅಮೆರಿಕದ ಕಾರು ಕಂಪನಿ ಫೋರ್ಡ್ ದೇಶದಲ್ಲಿ ನೂತನ ಘಟಕಕ್ಕೆ ಶಂಕುಸ್ಥಾಪನೆ ಮಾಡಿದೆ. ಗುಜರಾತ್ ನಲ್ಲಿರುವ ಈ ಘಟಕವು ಸುಮಾರು 100 ಕೋಟಿ ಡಾಲರ್ ವೆಚ್ಚದಾಗಿದ್ದು, ಗುಜರಾತನ್ನು ಜಾಗತಿಕ ಕಾರು ರಫ್ತು ಹಬ್ ಮಾಡುವ ಯೋಜನೆ ಕಂಪನಿಗಿದೆ.
ಗುದ್ದಲಿ ಪೂಜೆ ಮಾಡಿದ ಫೋರ್ಡ್ ಘಟಕದಲ್ಲಿ ಕಂಪನಿಯು ವರ್ಷಕ್ಕೆ 2.40 ಲಕ್ಷ ಕಾರು ಮತ್ತು 2.70 ಲಕ್ಷ ಎಂಜಿನ್ ಉತ್ಪಾದಿಸುವ ನಿರೀಕ್ಷೆಯಿದೆ. ಫೋರ್ಡ್ ಘಟಕದ ನಿರ್ಮಾಣ ಕಾರ್ಯ 2014ಕ್ಕೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಫೋರ್ಡ್ ಇಂಡಿಯಾ ಶೀಘ್ರದಲ್ಲಿ ಎಕೊಸ್ಪೋರ್ಟ್ ಕಾಂಪ್ಯಾಕ್ಟ್ ಸ್ಪೋರ್ಟ್ ಯುಟಿಲಿಟಿ ಕಾರು ಪರಿಚಯಿಸಲಿದೆ. ದೇಶದಲ್ಲಿ ಕಂಪನಿಯ ಕಾರು ಮಾರಾಟ ಇಳಿಕೆ ಕಾಣುತ್ತಿದ್ದರೂ ಬೃಹತ್ ಮೊತ್ತ ಹೂಡಿಕೆ ಮಾಡಿದೆ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications









