ಕ್ಸೈಲೋಗೆ ಪ್ರತಿಸ್ಪರ್ಧಿ- ಫೋರ್ಡ್ ಇಕೊಸ್ಪೋರ್ಟ್
ಅಂತೂ ಇಂತೂ ಫೋರ್ಡ್ ಇಕೊಸ್ಪೋರ್ಟ್ ಕಾಂಪಾಕ್ಟ್ ಎಸ್‌ಯುವಿ ಕಾರು ಲಾಂಚ್ ಆಗಲು ಸರ್ವ ಸನ್ನದ್ಧವಾಗಿ ಬಂದು ನಿಂತಿದೆ. ಈ ಬಹುನಿರೀಕ್ಷಿತ ಕಾರನ್ನು ಮುಂದಿನ ವರ್ಷ ಜನವರಿ ತಿಂಗಳಲ್ಲಿ ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಬಿಡುಗಡೆ ಮಾಡಲಿದ್ದಾರೆ.
ಕಳೆದ ವರ್ಷವೇ ದೆಹಲಿ ಆಟೋ ಎಕ್ಸೋದಲ್ಲಿ ಪ್ರದರ್ಶನಗೊಂಡಿದ್ದ ಫೋರ್ಡ್ ಇಕೊಸ್ಪೋರ್ಟ್ಸ್ ಬಗ್ಗೆ ಅರಿಯಲು ಗ್ರಾಹಕರು ತುದಿಗಾಲಲ್ಲಿ ನಿಂತಿದ್ದಾರೆ. ಇದೀಗ ಗ್ರಾಹಕರ ನಿರೀಕ್ಷೆಯನ್ನು ಹುಸಿಗೊಳಿಸದ ಫೋರ್ಡ್ ಇಂಡಿಯಾ ಆದಷ್ಟು ಬೇಗ ಬಹುನಿರೀಕ್ಷಿತ ಕಾರು ಬಿಡುಗಡೆಗೊಳಿಸಲು ನಿರ್ಧರಿಸಿದೆ.
ಸದ್ಯ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್‌ಗಳು ದೇಶಿಯ ಮಾರುಕಟ್ಟೆಯಲ್ಲಿ ಬಿರುಗಾಳಿಯೆಬ್ಬಿಸುತ್ತಿದೆ. ಈ ಪೈಕಿ ಮಹೀಂದ್ರ ಕ್ಸೈಲೊಗೆ ಪ್ರಮುಖ ಪ್ರತಿಸ್ಪರ್ಧಿಯಾಗಿ ಫೋರ್ಡ್ ಇಕೊಸ್ಪೋರ್ಟ್ ವೆಹಿಕಲನ್ನು ಪರಿಗಣಿಸಲಾಗಿದೆ.

ಇಕೊಸ್ಪೋರ್ಟ್ಸ್ ಫೋರ್ಡ್‌ನಿಂದ ಆಗಮನವಾಗಲಿರುವ ದೇಶದ ಮೊದಲ ಎಸ್‌ಯುವಿ ಕಾರು ಆಗಿದೆ. ಫಿಯೆಸ್ಟಾ ಸೆಡಾನ್ ಕಾರು ಪ್ಲಾಟ್ ಫಾರ್ಮ್‌ನಲ್ಲಿಯೇ ನೂತನ ಕಾರನ್ನು ಅಭಿವೃದ್ಧಿಪಡಿಸಲಾಗಿದೆ.

ಚೆನ್ನೈ ಸಮೀಪವಿರುವ ಫೋರ್ಡ್ ಘಟಕದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಫೋರ್ಡ್ ಇಕೊಸ್ಪೋರ್ಟ್ ಕಾಂಪಾಕ್ಟ್ ಎಸ್‌ಯುವಿ ಕಾರನ್ನು ಲಾಂಚ್ ಮಾಡಲಿದ್ದಾರೆ. ನೂತನ ಇಕೊಸ್ಪೋರ್ಟ್ ದರ ಸುಮಾರು 10 ಲಕ್ಷ ರು. ಆಸುಪಾಸಿನಲ್ಲಿರಲಿದೆ.

ಜಾಗತಿಕ ಪ್ಲಾಟ್ ಫಾರ್ಮ್‌ನಡಿಯಲ್ಲಿ ಈಗಾಗಲೇ ಬ್ರೆಜಿಲ್‌ನಲ್ಲಿ ಲಾಂಚ್ ಆಗಿರುವ ಫೋರ್ಡ್ ಇಕೊಸ್ಪೋರ್ಟ್ಸ್ ಎಸ್‌ಯುವಿ ಕಾರು ರೆನೊ ಡಸ್ಟರ್‌ಗೆ ಪ್ರಬಲ ಪೈಪೋಟಿ ನೀಡುತ್ತಿದೆ. ಒಮ್ಮೆ ದೇಶದಲ್ಲಿ ಲಾಂಚ್ ಆದ ಬಳಿಕ ಇದೇ ರೀತಿ ಪ್ರತಿಸ್ಪರ್ಧಿಯಾಗುವ ನಿರೀಕ್ಷೆಯಿದೆ.

ನೂತನ ಇಕೊಸ್ಪೋರ್ಟ್ ಪರಿಸರ ಸ್ನೇಹಿ 1 ಲೀಟರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಅಲ್ಲದೆ ಪೆಟ್ರೋಲ್ ಎಂಜಿನ್‌ನಲ್ಲೂ ಲಭ್ಯವಿದ್ದರೂ ದೇಶದಲ್ಲಿ ಡೀಸೆಲ್ ಎಂಜಿನ್‌ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

ಆಟೋಮ್ಯಾಟಿಕ್ ವೆರಿಯಂಟ್‌ಗಳಲ್ಲೂ ಇಕೊಸ್ಪೋರ್ಟ್ ಲಾಂಚ್ ಮಾಡಲು ಫೋರ್ಡ್ ಗುರಿಯಿರಿಸಿಕೊಂಡಿದೆ. ನಿಮ್ಮ ಗಮನಕ್ಕೆ, ಡಸ್ಟರ್ ಕೇವಲ ಮಾನ್ಯುವಲ್ ಗೇರ್‌ಬಾಕ್ಸ್‌ಗಳಲ್ಲಿ ಮಾತ್ರ ಲಭ್ಯವಿದೆ.

ಫೋರ್ಡ್ ಇಕೊಸ್ಪೋರ್ಟ್ ಎಸ್‍ಯುವಿ ಕಾರು ನಾಲ್ಕು ಮೀಟರ್‌ಗಳಷ್ಟು ಮಾತ್ರ ಉದ್ದವಿರಲಿದೆ. ಇದರಿಂದ ಗ್ರಾಹಕರಿಗೆ ತೆರಿಗೆ ಪ್ರಯೋಜನ ಪಡೆಯಲು ಸಾಧ್ಯ.

ಫೋರ್ಡ್ ಇಕೊಸ್ಪೋರ್ಟ್ ಫ್ರಾನ್ಸ್‌ನ ರೆನೊ ಡೆಸ್ಟರ್ ಹಾಗೂ ಮಹೀಂದ್ರದ ಕ್ಸೈಲೊಗೆ ಪ್ರಬಲ ಪೈಪೋಟಿ ನೀಡುವ ಸಾಧ್ಯತೆಯಿದೆ.


Click it and Unblock the Notifications








