ಫೋರ್ಡ್ ಭವಿಷ್ಯದ ಕಾರುಗಳಿಗೆ ಟ್ರಾಫಿಕ್ ಭಯವಿಲ್ಲ!
ಸ್ವಯಂಚಾಲಿತ ಕಾರುಗಳು ಟ್ರಾಫಿಕ್ ಜಾಮ್ ನಲ್ಲೂ ಸರಾಗವಾಗಿ ಚಲಿಸಲಿದೆ ಎಂದು ಫೋರ್ಡ್ ಪ್ರಕಟಿಸಿದೆ. ನೂತನ ತಂತ್ರಜ್ಞಾನವು ಗೂಗಲ್ ಕಾರಿಗಿಂತಲೂ ಹೆಚ್ಚು ಅಡ್ವಾನ್ಸಡ್ ಆಗಿದೆ ಎಂದು ಫೋರ್ಡ್ ಪ್ರತಿಪಾದಿಸಿದೆ.
ಸ್ವಯಂಚಾಲಿತ ಕಾರುಗಳು ಈಗ ಕಾಲ್ಪನಿಕ ಸಂಗತಿಯಾಗಿ ಉಳಿದಿಲ್ಲ. ಆದರೆ ಈಗ ಅಭಿವೃದ್ಧಿಪಡಿಸುತ್ತಿರುವ ಇಂತಹ ಕಾರುಗಳು ಟ್ರಾಫಿಕ್ ರಸ್ತೆಗೆ ಪೂರಕವಾಗಿಲ್ಲ. ಆದರೆ ಟ್ರಾಫಿಕ್ ಜಾಮ್ ನಲ್ಲೂ ನಿಧಾನವಾಗಿ ಚಲಿಸುವಂತೆ ಸ್ವಯಂಚಾಲಿತ ಕಾರನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ಫೋರ್ಡ್ ಹೇಳಿದೆ.
ಫೋರ್ಡ್ ಕಂಪನಿಯ ನೂತನ ಸಿಸ್ಟಮ್ ಗೆ "ಟ್ರಾಫಿಕ್ ಜಾಮ್ ಅಸಿಸ್ಟ್" ಎಂದು ಹೆಸರಿಡಲಾಗಿದೆ. ಒಂದು ಬಟನ್ ಪ್ರೆಸ್ ಮಾಡುವ ಮೂಲಕ ಇದನ್ನು ಆ್ಯಕ್ಟಿವೇಟ್ ಮಾಡಬಹುದಾಗಿದೆ. ಇದು ರೇಡರ್ ಆಧರಿತವಾಗಿ ಕಾರ್ಯನಿರ್ವಹಿಸುವ ವ್ಯವಸ್ಥೆಯಾಗಿದೆ. ಕಾರಿನ ರಿಯರ್ ವ್ಯೂ ಮಿರರ್ ಜಾಗದಲ್ಲಿ ರೇಡರ್ ಅಳವಡಿಸಲಾಗುತ್ತದೆ. ಅದು ರಸ್ತೆಯ ಸಂಚಾರ ದಟ್ಟನೆಯಲನ್ನು ಸ್ಕ್ಯಾನ್ ಮಾಡಿ ಕಾರಿಗೆ ಮಾಹಿತಿ ರವಾನಿಸುತ್ತದೆ.
ರಸ್ತೆಯಲ್ಲಿ ಹೆಚ್ಚು ಟ್ರಾಫಿಕ್ ಇರುವುದು ಈ ಸಿಸ್ಟಮ್ ರೇಡರಿಗೆ ಗೊತ್ತಾದರೆ ಅದು ಧ್ವನಿ ಸಂಜ್ಞೆ ಮೂಲಕ ಚಾಲಕನಿಗೆ ಟ್ರಾಫಿಕ್ ಜಾಮ್ ಅಸಿಸ್ಟ್ ಆನ್ ಮಾಡುವಂತೆ ಸೂಚಿಸುತ್ತದೆ. ಚಾಲಕನಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದ ನಂತರ ಟ್ರಾಫಿಕ್ ಜಾಮ್ ನಲ್ಲಿ ಕಾರನ್ನು ನಿಧಾನವಾಗಿ, ಎಚ್ಚರಿಕೆಯಿಂದ ಚಲಿಸುವಂತೆ ನೋಡಿಕೊಳ್ಳುತ್ತದೆ.


Click it and Unblock the Notifications









