ನಿಮ್ಮ ಫಿಯೆಸ್ಟಾ ಕಾರಿಗೆ ಆಕ್ಸೆಸರಿ ಅಲಂಕಾರ
ಆರ್ಮ್ ರೆಸ್ಟ್: ಫಿಯೆಸ್ಟಾ ಕಾರಿಗೆ ಅಳವಡಿಸಬಹುದಾದ ನೂತನ ಆರ್ಮ್ ರೆಸ್ಟ್ ಕೈಗೆ ಇನ್ನಷ್ಟು ಆರಾಮದಾಯಕತೆ ನೀಡುತ್ತದೆ. ಜೊತೆಗೆ ಇದರಿಂದ ನಿಮಗೆ ಹೆಚ್ಚುವರಿ ಸ್ಟೋರೆಜ್ ಸ್ಥಳಾವಕಾಶವೂ ದೊರಕುತ್ತದೆ. ಆಟೋಮೊಟಿವ್ ಲೆದರ್ ಮತ್ತು ಪ್ಲಾಸ್ಟಿಕಿನಿಂದ ನೂತನ ಆರ್ಮ್ ರೆಸ್ಟ್ ತಯಾರಿಸಲಾಗಿದೆ. ಇದನ್ನು ಅನುಕೂಲಕ್ಕೆ ತಕ್ಕಂತೆ ಮಡುಚಿಕೊಳ್ಳಬಹುದು.
ಗೇರ್ ನಾಬ್: ಆಟೋಮೊಟಿವ್ ಲೆದರ್ ಮತ್ತು ಅಲ್ಯುಮಿನಿಯಂನಿಂದ ತಯಾರಿಸಿದ ಪ್ರಕಾಶಮಾನವಾದ ಗೇರ್ ನಾಬ್ ನಿಮ್ಮ ಕಾರಿಗೆ ಹೊಸ ಲುಕ್ ಮತ್ತು ವಿನೂತನ ಡ್ರೈವಿಂಗ್ ಅನುಭವ ನೀಡುತ್ತದೆ.
ಸ್ಟಿಯರಿಂಗ್ ವೀಲ್ ಗೆ ಚರ್ಮದ ಹಾಸು: ನಿಮ್ಮ ಫಿಯೆಸ್ಟಾ ಕಾರಿನ ಇಂಟಿರಿಯರ್ ಇನ್ನಷ್ಟು ಆಕರ್ಷಕವಾಗಿಸಲು ಲೆದರ್ ಸ್ಟಿಯರಿಂಗ್ ವೀಲ್ ಆಕ್ಸೆಸರಿ ಹಾಕಿಕೊಳ್ಳಬಹುದು. ಇದರಿಂದ ಸ್ಟಿಯರಿಂಗ್ ವೀಲ್ ಹಿಡಿತ ಉತ್ತಮವಾಗುತ್ತದೆ.
ಫಿಯೆಸ್ಟಾ ಸೈಡ್ ಗ್ರಾಫಿಕ್ಸ್; ಹೆಚ್ಚಿನವರು ತಮ್ಮ ಕಾರುಗಳ ಅಂದ ಹೆಚ್ಚಿಸಲು ಗ್ರಾಫಿಕ್ಸ್ ಅಂಟಿಸುತ್ತಾರೆ. ಇದಕ್ಕಾಗಿ ಫಿಯೆಸ್ಟಾ ಕಾರಿಗೆ ನೂತನ ಗ್ರಾಫಿಕ್ಸ್ ರೇಖೆಗಳನ್ನು ಕಂಪನಿ ಬಿಡುಗಡೆ ಮಾಡಿದೆ. ಕಾರಿನ ಮೇಲೆ ಗೀರುಗಳು ಬಿದ್ದಿದ್ದರೆ, ಅದನ್ನು ಕಾಣದಂತೆ ಮಾಡಲು ಕೂಡ ಈ ಗ್ರಾಫಿಕ್ಸ್ ಬಳಸಿಕೊಳ್ಳಬಹುದು.
ಇಷ್ಟು ಮಾತ್ರವಲ್ಲದೇ ಕಾರಿನ ಮುಂಭಾಗಕ್ಕೆ ಫಾಗ್ ಲಗಯಾಂಪ್, ಸ್ಪೋರ್ಟಿ ಪೆಡಲ್, ಕಾರ್ಪೆಟ್ ಪ್ಲೊರ್ ಮ್ಯಾಟ್, ನೋಕಿಯಾ ಬ್ಲೂಟೂಥ್ ಹ್ಯಾಂಡ್ಸ್ ಫ್ರೀ ಕಿಟ್ಸ್...ಹೀಗೆ ನಿಮ್ಮ ಪ್ರೀತಿಯ ಫಿಯೆಸ್ಟಾ ಕಾರಿಗೆ ಅಳವಡಿಸಲು ಹತ್ತು ಹಲವು ಆಕ್ಸೆಸರಿಗಳನ್ನು ಫೋರ್ಡ್ ಹೊರತಂದಿದೆ. ಹತ್ತಿರದ ಫೋರ್ಡ್ ಶೋರೂಂನಲ್ಲಿ ಈ ಕುರಿತು ವಿಚಾರಿಸಿಕೊಳ್ಳಬಹುದು.


Click it and Unblock the Notifications









