ಬಿ-ಮ್ಯಾಕ್ಸ್: ಫೋರ್ಡ್ ಸಣ್ಣಕಾರಿಗೆ ಸುಸ್ವಾಗತ

Posted By:
ದೇಶದ ಸಣ್ಣಕಾರು ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲು ಪಡೆಯಲು ಫೋರ್ಡ್ ಕಂಪನಿ ನಿರ್ಧರಿಸಿದೆ. ದೇಶಕ್ಕೆ ಇನ್ನಷ್ಟು ಸಣ್ಣಕಾರುಗಳನ್ನು ಪರಿಚಯಿಸುವ ಇಂಗಿತವನ್ನು ವ್ಯಕ್ತಪಡಿಸಿದೆ. ಇದಕ್ಕೆ ಪೂರಕವಾಗಿ ಜಿನಿವಾ ವಾಹನ ಪ್ರದರ್ಶನದಲ್ಲಿ ಕಂಪನಿಯು ಬಿ-ಮ್ಯಾಕ್ಸ್ ಸಣ್ಣಕಾರನ್ನು ಅನಾವರಣ ಮಾಡಿದೆ.

ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗೆ ನೂತನ ಕಾರನ್ನು ಪರಿಚಯಿಸುವುದಾಗಿ ಕಂಪನಿಯ ಅಧ್ಯಕ್ಷ ಮತ್ತು ಸಿಇಒ ಅಲೆನ್ ಮುಟಲ್ ಹೇಳಿದ್ದಾರೆ. ಆದರೆ 2015ಕ್ಕೆ ಮುನ್ನ 8 ನೂತನ ಕಾರುಗಳನ್ನು ಪರಿಚಯಿಸುವ ಯೋಜನೆ ಕುರಿತು ಅವರು ಯಾವುದೇ ಮಾಹಿತಿ ನೀಡಿಲ್ಲ.

ನೂತನ ಬಿ ಮ್ಯಾಕ್ಸ್ ಹ್ಯಾಚ್ ಬ್ಯಾಕ್ ಕಾರಿನ ಟೆಕ್ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. (ಕನ್ನಡ ಡ್ರೈವ್ ಸ್ಪಾರ್ಕ್)

English summary
Ford unveiled small car B-MAX at Geneva Motor Show. Company plans to launch B-MAX in India and global Auto Markets.
Story first published: Thursday, March 8, 2012, 11:17 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark