ಹೆಲಿಕಾಪ್ಟರ್ ಅಲ್ಲ, ಫೋರ್ಡ್ ಆಫ್-ರೋಡ್ ರಾಪ್ಟರ್!
ಫೋರ್ಡ್ ರಾಪ್ಟರ್ ಹತ್ತು ಹಲವು ಹೊಸ ಫೀಚರುಗಳೊಂದಿಗೆ ಆಗಮಿಸಿದೆ. ಕಡಿದಾದ ರಸ್ತೆಗಳಲ್ಲಿ, ದುರ್ಗಮ ಪ್ರದೇಶಗಳಲ್ಲಿ, ಕಲ್ಲು ಬಂಡೆಗಳ ಹಾದಿಗಳಲ್ಲಿ, ಕಾಡುಮೇಡುಗಳಲ್ಲಿ ಅಥವಾ ಸುಡುಗಾಡಿನಲ್ಲೂ ಫೋರ್ಡ್ ರಾಪ್ಟರ್ ಚಲಿಸುತ್ತದೆ. ನೂತನ ರಾಪ್ಟರ್ ವಿನ್ಯಾಸವೂ ಕಣ್ಮನ ಸೆಳೆಯುವಂತಿದೆ.
ನೂತನ ಫೋರ್ಡ್ ರಾಪ್ಟರ್ ಮುಂಭಾಗವು ಭರ್ಜರಿ ವಿನ್ಯಾಸವನ್ನು ಹೊಂದಿದೆ. ಫೋರ್ಡ್ ಎಂಬ ಸಿಂಬಲ್ ವಿಶಾಲವಾಗಿ ಗರ್ವದಿಂದ ಕಾಣುತ್ತದೆ. ಇಂಟಿರಿಯರ್ ಕೂಡ 4.2 ಇಂಚಿನ ಮಲ್ಟಿ ಫಂಕ್ಷನ್ ಎಲ್‌ಸಿಡಿ ಪರದೆ, ಮೈಫೋರ್ಡ್ ಇನ್ಫೋಟೈನ್ ಮೆಂಟ್ ಸಿಸ್ಟಮ್, ಚರ್ಮದ ಮೃದುವಾದ ಸೀಟು ಸೇರಿದಂತೆ ಹತ್ತು ಹಲವು ಆಧುನಿಕ ಫೀಚರುಗಳನ್ನು ಹೊಂದಿದೆ.
ನೂತನ ಫೋರ್ಡ್ ರಾಪ್ಟರ್ 6.2 ಲೀಟರಿನ ವಿ8 ಎಂಜಿನ್ ಹೊಂದಿದೆ. ಇದು 411 ಅಶ್ವಶಕ್ತಿ ಮತ್ತು 434 ಟಾರ್ಕ್ ಪವರ್ ನೀಡುತ್ತದೆ. ಮುಂದಿನ ವರ್ಷದ ಜನವರಿ ತಿಂಗಳಿನಿಂದಲೇ ನೂತನ ಫೋರ್ಡ್ ಮಾರಾಟ ಆರಂಭವಾಗಲಿದೆ. ನೂತನ ಫೋರ್ಡ್ ರಾಪ್ಟರ್ ದರ ಸುಮಾರು 43,970 ಡಾಲರ್ ಇರಲಿದೆ.
ಫೋರ್ಡ್ ರಾಪ್ಟರ್ ಟ್ರಕ್ ದೇಶದ ರಸ್ತೆಗೆ ಆಗಮಿಸಲಿದೆಯೇ ಎಂಬ ಮಾಹಿತಿ ಲಭ್ಯವಿಲ್ಲ.


Click it and Unblock the Notifications









