ನಿಮ್ಗೊತ್ತ? ಷೆವರ್ಲೆ ಕಾರುಗಳು "ಮೇಡ್ ಇನ್ ಚೈನಾ"

ಇದೇ ಚೀನಾದಲ್ಲಿ ಉತ್ಪಾದಿಸಿದ ಕಾರುಗಳನ್ನು ಕಂಪನಿಯು ಭಾರತಕ್ಕೆ ತರಲಿದೆ. 2011ರಲ್ಲಿ ದೇಶದ ರಸ್ತೆಯಲ್ಲಿ ಬೀಟ್ ಮಾಡಿದ ಮೋಡಿಯಿಂದ ಉತ್ತೇಜಿತವಾದ ಕಂಪನಿಯು ನೂತನ ಕಾರುಗಳನ್ನು ವಿನ್ಯಾಸ ಮತ್ತು ಅಭಿವೃದ್ಧಿಪಡಿಸಲು ಚೀನಾದ ಎಸ್ಎಐಸಿ ಜೊತೆ ಮೈತ್ರಿಮಾಡಿಕೊಂಡಿದೆ.
"ನನಗೆ ಚೈನಾ ವಸ್ತುಗಳ ಕುರಿತಾದ ಭಾರತೀಯರ ಮೈಂಡ್ ಸೆಟ್ ತಿಳಿದಿರಲಿಲ್ಲ. ಆದರೆ ಚೀನಾದಲ್ಲಿ ಉತ್ಪಾದನೆಯಾಗುವುದು ಮಕ್ಕಳಾಟಿಕೆಯ ಕಾರಲ್ಲ. ಅದು ಷೆವರ್ಲೆ ಕಾರು. ಗುಣಮಟ್ಟ ಮತ್ತು ದಕ್ಷತೆಯಲ್ಲಿ ರಾಜಿ ಇಲ್ಲದಂತೆ ಉತ್ಪಾದಿಸಲಾಗುವುದು" ಎಂದು ಜನರಲ್ ಮೋಟರ್ಸ್ ಇಂಡಿಯಾ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಲೊವೆಲ್ ಪಡೊಕ್ ಹೇಳಿದ್ದಾರೆ.
ದೇಶದಲ್ಲಿ ಸದ್ಯ ಷೆವರ್ಲೆ ಮಾರುಕಟ್ಟೆ ಪಾಲು ಶೇಕಡ 4.4ರಷ್ಟಿದೆ. ಇದನ್ನು ಎರಡು ಪಟ್ಟು ಹೆಚ್ಚಿಸುವ ಗುರಿಯನ್ನು ಪಡೊಕ್ ವ್ಯಕ್ತಪಡಿಸಿದ್ದಾರೆ. ಅಮೆರಿಕದ ಬೃಹತ್ ವಾಹನ ತಯಾರಿಕಾ ಕಂಪನಿ ಜನರಲ್ ಮೋಟರ್ಸ್, ವಾಹನಗಳ ವಿನ್ಯಾಸ ಮತ್ತು ಅಭಿವೃದ್ಧಿಪಡಿಸಲು ಚೀನಾವನ್ನು ಅವಲಂಬಿಸಿಕೊಂಡಿದೆ.


Click it and Unblock the Notifications








