ಷೆವರ್ಲೆ ಬೀಟ್ ಇದ್ರೂ ಜಿಎಂ ಮಾರಾಟ ಇಳಿಕೆ

ಕಳೆದ ತಿಂಗಳು ಜನರಲ್ ಮೋಟರ್ಸ್ ಇಂಡಿಯಾ ವಾಹನ ಮಾರಾಟ 8,901 ಯುನಿಟ್ ಗೆ ತಲುಪಿದ್ದು, ಕಳೆದ ವರ್ಷದ ಇದೇ ತಿಂಗಳಲ್ಲಿ 9,3003 ಕಾರು ಮಾರಾಟಕ್ಕೆ ಹೋಲಿಸಿದರೆ ಶೇಕಡ 4ರಷ್ಟು ಇಳಿಕೆ ದಾಖಲಿಸಿದೆ.

"ಬಡ್ಡಿದರ ಹೆಚ್ಚಳ, ಇಂಧನ, ಕಮಾಡಿಟಿ ದರ ಹೆಚ್ಚಳ, ಹಣದುಬ್ಬರದ ಏರುಪೇರು ಮತ್ತು ಮಾರುಕಟ್ಟೆಯಲ್ಲಿನ ನಕಾರಾತ್ಮಕ ಸಂಗತಿಗಳು ಕಾರು ಮಾರಾಟ ಇಳಿಕೆಗೆ ಕಾರಣ" ಎಂದು ಜನರಲ್ ಮೋಟರ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

ಜನರಲ್ ಮೋಟರ್ಸ್ ಕಂಪನಿಯು ದೇಶದಲ್ಲಿ ಷೆವರ್ಲೆ ಬ್ರಾಂಡುಗಳ ಮೂಲಕ ಜನಪ್ರಿಯವಾಗಿದೆ. ಒಟ್ಟಾರೆ ಕಾರು ಮಾರಾಟ ಇಳಿಕೆ ಕಂಡರೂ ಡೀಸೆಲ್ ಆವೃತ್ತಿ ನೆರವಿನಿಂದ ಷೆವರ್ಲೆ ಬೀಟ್ ಮಾರಾಟ ಹೆಚ್ಚಿಸಿಕೊಂಡಿದೆ. ಕಳೆದ ತಿಂಗಳು ಒಟ್ಟು 4,684 ಷೆವರ್ಲೆ ಬೀಟ್ ಕಾರುಗಳು ಮಾರಾಟವಾಗಿದೆ.

2012ರ ಫೆಬ್ರವರಿ ತಿಂಗಳಲ್ಲಿ ತವೆರಾ ಎಂಯುವಿ ಮಾರಾಟ 1,964 ಯುನಿಟ್ ಮಾರಾಟವಾದರೆ, ಷೆವರ್ಲೆ ಸ್ಪಾರ್ಕ್ ಮಾರಾಟ 1,328 ಯುನಿಟ್ ಮಾರಾಟವಾಗಿದೆ. ಅವಿಯೊ ಸೆಡಾನ್ 273 ಯುನಿಟ್ ಮತ್ತು ಕ್ರೂಝ್ ಪ್ರೀಮಿಯಂ ಸೆಡಾನ್ ಮಾರಾಟ 537 ಯುನಿಟ್ ಗೆ ತಲುಪಿದೆ. ಕೇವಲ 25 ಕ್ಯಾಪ್ಟಿವಾ ಕಾರುಗಳು ಕಳೆದ ತಿಂಗಳು ಮಾರಾಟವಾಗಿದೆ.

More from DriveSpark

Article Published On: Friday, March 2, 2012, 14:44 [IST]
English summary
General Motors India has posted a negative sales report for the month of February. The American carmaker has said it sold 8,901 vehicle in February 2012 marking a 4 per cent decline in comparison with last February.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+