ಪ್ಯೂಜೊ ಷೇರು ಖರೀದಿಸಿದ ಜನರಲ್ ಮೋಟರ್ಸ್
ಜಗತ್ತಿನ ಬೃಹತ್ ವಾಹನ ತಯಾರಿಕಾ ಕಂಪನಿ ಜನರಲ್ ಮೋಟರ್ಸ್ ಮತ್ತು ಯುರೋಪಿನ ಎರಡನೇ ಬೃಹತ್ ಕಾರು ತಯಾರಿಕಾ ಕಂಪನಿ ಪಿಎಸ್ಎ ಪ್ಯೂಜೊ ಸಿಟ್ರೋನ್ ಮೈತ್ರಿ ಒಪ್ಪಂದವೊಂದಕ್ಕೆ ಸಹಿ ಹಾಕಿವೆ.
ಇವೆರಡು ಕಂಪನಿಗಳು ಯುರೋಪ್ ಮಾರುಕಟ್ಟೆಯಲ್ಲಿ ತಮ್ಮ ಸದೃಢತೆ ಹೆಚ್ಚಿಸಿಕೊಳ್ಳಲು ನಿರ್ಧರಿಸಿವೆ. ಈ ನಿಟ್ಟಿನಲ್ಲಿ ಜನರಲ್ ಮೋಟರ್ಸ್ ಕಂಪನಿಯು ಪಿಎಸ್ಎ ಕಂಪನಿಯ ಶೇಕಡ 7ರಷ್ಟು ಪಾಲನ್ನು 400 ಮಿಲಿಯನ್ ಡಾಲರ್ ನೀಡಿ ಖರೀದಿಸಿದೆ.
ಜನರಲ್ ಮೋಟರ್ಸ್ ಮತ್ತು ಪಿಎಸ್ಎ ಒಟ್ಟಾಗಿರುವುದರ ಕುರಿತು ಹಲವು ಊಹಾಪೋಹಗಳು ವ್ಯಾಪಾರ ವಲಯದಲ್ಲಿ ಸುತ್ತಾಡುತ್ತಿವೆ. ಇವೆರಡೂ ಕಂಪನಿಗಳು ಹಣಕಾಸು ವಿಷ್ಯದಲ್ಲಿ ಯುರೋಪ್ ನಲ್ಲಿ ಸಮಸ್ಯೆಯಿಂದ ಬಳಲುತ್ತಿವೆ.
ಆರ್ಥಿಕ ಹಿಂಜರಿತದ ನಂತರ ಒಪೆಲ್ ಮಾರಾಟ ಇಳಿಕೆ ಕಂಡಿರುವ ಕಾರಣ ಜನರಲ್ ಮೋಟರ್ಸ್ ಸಮಸ್ಯೆಯಲ್ಲಿದೆ. ಕಳೆದ ಕೆಲವು ವರ್ಷಗಳಿಂದ ಪಿಎಸ್ಎ ಪ್ಯೂಜೊ ಕಂಪನಿ ಕೂಡ ಹತ್ತು ಹಲವು ನಷ್ಟಗಳಿಂದ ಜರ್ಜರಿತವಾಗಿವೆ. ನೊ0ದಿರುವ ಕಂಪನಿಗಳೆರಡು ಜೊತೆಯಾಗಿ ಯಶಸ್ಸು ಪಡೆಯಲು ಮುಂದಾಗಿವೆ.(ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications









