ಷೆವರ್ಲೆ ಇಎನ್-ವಿ: ವಿಚಿತ್ರ ವಂಡರ್ ಕಪ್ಪೆ ಕಾರು

2012ರ ಬೀಜಿಂಗ್ ಅಂತಾರಾಷ್ಟ್ರೀಯ ವಾಹನ ಪ್ರದರ್ಶನದಲ್ಲಿ ಜನರಲ್ ಮೋಟರ್ಸ್ ಕಂಪನಿಯು ವಂಡರ್ ಕಪ್ಪೆಯಂತೆ ಕಾಣುವ ವಿನ್ಯಾಸದ ಇಎನ್-ವಿ 2.0 ಕಾನ್ಸೆಪ್ಟ್ ಕಾರನ್ನು ಪ್ರದರ್ಶಿಸಿದೆ. ಇದು ಎರಡನೇ ತಲೆಮಾರಿನ ಎಲೆಕ್ಟ್ರಿಕ್ ಕಾರಾಗಿದೆ. ಈ ಕಾರನ್ನು ಹಿಂದೊಮ್ಮೆ ಶಾಂಘೈ ವಾಹನ ಪ್ರದರ್ಶನದಲ್ಲೂ ಪ್ರದರ್ಶಿಸಲಾಗಿತ್ತು.

EN-V 2.0 ನಾಲ್ಕು ಚಕ್ರದ ಕಾರಾಗಿದೆ. ಇದು ಸರಳವಾದ ವಿನ್ಯಾಸ ಹೊಂದಿದ್ದು, ವಿಶಾಲ ಬಾಡಿ ಗಾತ್ರ ಹೊಂದಿಲ್ಲ. ಎಲ್ ಇಡಿ ಹೆಡ್ ಲೈಟ್, ಕ್ಲೈಮೆಟ್ ಕಂಟ್ರೋಲ್ ಮತ್ತು ಕೊಂಚ ಸಂಗ್ರಹ ಸ್ಥಳಾವಕಾಶವನ್ನೂ ಇದು ಹೊಂದಿದೆ.

"ವಿನ್ಯಾಸಗಾರರು ಮತ್ತು ಎಂಜಿನಿಯರುಗಳು ಇಎನ್-ವಿ ಪರಿಕಲ್ಪನೆಯನ್ನು ಮೂರ್ತರೂಪಕ್ಕೆ ತಂದಿದ್ದಾರೆ. ಇದು ಮೊಬಿಲಿಟಿ ಇಂಟರ್‌ನೆಟ್‌ನಂತೆ ಟೆಕ್ ವಿಶಿಷ್ಟವಾದ ಕಾರಾಗಿದೆ. ಇದು ಭವಿಷ್ಯದಲ್ಲಿ ವಾಹನಗಳ ಪರಿಕಲ್ಪನೆಯನ್ನೇ ಬದಲಾಯಿಸಲಿದೆ" ಎಂದು ಜಿಎಂ ಚೀನಾ ಗ್ರೂಪ್ ಮುಖ್ಯಸ್ಥ ಕೆವಿನ್ ವಾಲ್ ಹೇಳಿದ್ದಾರೆ.

ಇದು ನಾಲ್ಕು ಚಕ್ರದ ಎರಡು ಸೀಟಿನ ಪುಟ್ಟಕಾರಾಗಿದೆ. ಪಾರ್ಕಿಂಗ್ ಸಮಸ್ಯೆ ಇರುವಲ್ಲಿ, ವಾಹನ ಸಂಚಾರ ದಟ್ಟನೆ ಹೆಚ್ಚಿರುವ ನಗರಗಳಿಗೆ(ಬೆಂಗಳೂರಿಗೂ ಓಕೆ) ಸೂಕ್ತವಾದ ಕಾರಾಗಿದೆ ಎಂದು ಕಂಪನಿ ಪ್ರತಿಪಾದಿಸಿದೆ. ಜನರಲ್ ಮೋಟರ್ಸ್ ಕಂಪನಿಯು ಈ ಕಾರನ್ನು ಶೀಘ್ರದಲ್ಲಿ ಚೀನಾ ಮಾರುಕಟ್ಟೆಗೆ ಪರಿಚಯಿಸುವ ನಿರೀಕ್ಷೆಯಿದೆ.

More from DriveSpark

Article Published On: Wednesday, April 25, 2012, 14:40 [IST]
English summary
General Motors showed off the pod-like Chevrolet EN-V 2.0 concept at 2012 beijing International Motor Show. This is the second generation of the EN-V (electric networked vehicle) which was first shown at the Shanghai World Expo 2010.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+