ಪ್ರಯಾಣಿಕ ಕಾರುಗಳತ್ತ ಜಿಎಂ ಟಾರ್ಗೆಟ್

ದೇಶದ ಪ್ರಯಾಣಿಕ ಕಾರು ಮಾರುಕಟ್ಟೆಯತ್ತ ಜನರಲ್ ಮೋಟರ್ಸ್ ಹೆಚ್ಚು ಗಮನಹರಿಸಲು ಆರಂಭಿಸಿದೆ. ಕಂಪನಿಯು ನೂತನ ಸೇಲ್ ಮಿನಿ, ಸೆಡನ್, ಎಂಜಾಯ್ ಎಂಪಿವಿ ಮೂಲಕ ದೇಶದ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲು ತನ್ನದಾಗಿಸಿಕೊಳ್ಳಲು ಯೋಜಿಸಿದೆ.

ಈಗ ದೇಶದ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಅಗ್ರಜನಾಗಿ ಮೆರೆಯುತ್ತಿದೆ. ಎರಡನೇ ಸ್ಥಾನವನ್ನು ಹ್ಯುಂಡೈ ಪಡೆದಿದೆ. ಅಮೆರಿಕದ ಜನರಲ್ ಮೋಟರ್ಸ್ ಕಂಪನಿಯು ದೇಶದಲ್ಲಿ ಮಾರುಕಟ್ಟೆ ಪಾಲು ಹೆಚ್ಚಿಸಿಕೊಳ್ಳಲು ಹೊಸ ಹೊಸ ಉತ್ಪನ್ನಗಳನ್ನು ಪರಿಚಯಿಸಲು ಯೋಜಿಸಿದೆ.

ಭಾರತದ ವಾಹನ ಮಾರುಕಟ್ಟೆಯು ಜಗತ್ತಿನಲ್ಲಿಯೇ ಅತ್ಯಂತ ವೇಗವಾಗಿ ಪ್ರಗತಿ ಕಾಣುತ್ತಿರುವ ವಾಹನ ಮಾರುಕಟ್ಟೆಯಾಗಿದೆ. ಹೀಗಾಗಿ ದೇಶವನ್ನು ಜನರಲ್ ಮೋಟರ್ಸ್ ಗಂಭೀರವಾಗಿ ಪರಿಗಣಿಸಿದೆ. ಸದ್ಯ ದೇಶದ ವಾಹನ ಮಾರುಕಟ್ಟೆಯಲ್ಲಿ ಜನರಲ್ ಮೋಟರ್ಸ್ ಅಗ್ರ ಆರನೇ ಸ್ಥಾನವನ್ನು ಪಡೆದಿದೆ.

ದೇಶದ ವಾಹನ ಮಾರುಕಟ್ಟೆಯ ಅಗ್ರ ಮೂರು ಸ್ಥಾನಗಳಿಗೆ ಸ್ಪರ್ಧಿಸಬೇಕಿದ್ದರೆ ಹೊಸ ಕಾರು ಬಿಡುಗಡೆ ಮೂಲಕ ಕಂಪನಿಯು ಆಕ್ಟಿವ್ ಆಗಬೇಕಾದ ಅಗತ್ಯವಿದೆ ಎಂದು ಡ್ರೈವ್ ಸ್ಪಾರ್ಕ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಜೊತೆಗೆ ಕಂಪನಿಯು ತನ್ನ ಮಾರಾಟ ಜಾಲವನ್ನೂ ವಿಸ್ತರಿಸಿಕೊಳ್ಳಬೇಕಾದ ಅಗತ್ಯವಿದೆ. ಸ್ಪರ್ಧಾತ್ಮಕ ದರ, ವೆರೈಟಿ ಮಾಡೆಲ್ ಮೂಲಕ ಕಂಪನಿಯು ಮಾರಾಟ ಹೆಚ್ಚಿಸಿಕೊಳ್ಳಲು ಸಾಧ್ಯವಿದೆ.

More from DriveSpark

Article Published On: Saturday, September 22, 2012, 11:57 [IST]
English summary
General Motors has had a close look at the volume passenger car segment in India. The company is gearing up to enter the volume passenger segments with Chevrolet Sail mini, Sedan and Enjoy MPV.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+