ಮೊಟ್ಟೆಯಾಕಾರದ ಎಲೆಕ್ಟ್ರಿಕ್ ಕಾರು "ಎಗ್‌ಆಸಸ್"

ಸ್ಯಾನ್ ಡಿಯಾಗೊ ವಿನ್ಯಾಸಕರ ತಂಡವೊಂದು ಮೊಟ್ಟೆಯಾಕಾರದ ಎಲೆಕ್ಟ್ರಿಕ್ ಕಾರನ್ನು ಅಭಿವೃದ್ಧಿಪಡಿಸಿದೆ. ಸಂಚಾರ ದಟ್ಟಣೆಯಲ್ಲೂ ನಿರಾಳವಾಗಿ, ಸರಾಗವಾಗಿ ಈ ಪುಟ್ಟ ಕಾರಿನಲ್ಲಿ ಪ್ರಯಾಣಿಸಬಹುದಾಗಿದೆ. ಅಂದಹಾಗೆ ಈ ಕಾರಿನ ಹೆಸರು ಎಗ್‌ಆಸಸ್.

ಎಗ್‌ಆಸಸ್ ಕಾರು ಎಲೆಕ್ಟ್ರಿಕ್ ಚಾಲೀತವಾಗಿದ್ದು, ಕೇವಲ ಒಬ್ಬ ವ್ಯಕ್ತಿ ಮಾತ್ರ ಕಾರಿನೊಳಗೆ ಪ್ರಯಾಣಿಸಬಹುದಾಗಿದೆ. ಈ ಕಾರಿನಲ್ಲಿ ಗಂಟೆಗೆ ಗರಿಷ್ಠ 40 ಕಿ.ಮೀ. ವೇಗದಲ್ಲಿ ಸಾಗಬಹುದು. ಅಂದಹಾಗೆ ಇದು ಮೂರು ಚಕ್ರ ಹೊಂದಿದ್ದು, ಪರಿಸರ ಸ್ನೇಹಿ ಕಾರಾಗಿದೆ.

ವಿನ್ಯಾಸಕಾರರು ಎಗ್‌ಆಸಸ್ ಕಾರನ್ನು ಕ್ಯಾಂಪಸ್ ಒಳಗೆ ಪ್ರಯಾಣಿಸಲು ಸೂಕ್ತವಾಗುವಂತೆ ನಿರ್ಮಿಸಿದ್ದರು. ಅಂದರೆ ವಿದ್ಯಾರ್ಥಿಗಳು ಅಥವಾ ಉಪನ್ಯಾಸಕ, ಉಪನ್ಯಾಸಕಿಯರು ಒಂದು ಕಟ್ಟಡದಿಂದ ಇನ್ನೊಂದು ಕಟ್ಟಡಕ್ಕಿ ಸುಲಭವಾಗಿ ಪ್ರಯಾಣಿಸಲು ಸಾಧ್ಯವಾಗುವಂತೆ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಈ ಪುಟ್ಟಕಾರನ್ನು ಸಾರ್ವಜನಿಕ ರಸ್ತೆಗೆ ಇನ್ನೂ ಮುಕ್ತ ಮಾಡುವ ಉದ್ದೇಶ ವಿನ್ಯಾಸಗಾರರಿಗೆ ಇಲ್ಲ. ಯಾಕೆಂದರೆ ಇದರಲ್ಲಿ ಸದ್ಯಕ್ಕೆ ಏರ್ ಬ್ಯಾಗ್ ನಂತಹ ಸುರಕ್ಷತೆಯ ಫೀಚರುಗಳಿಲ್ಲ. ಮೊಟ್ಟಯಾಕಾರದ ಈ ಪುಟ್ಟಕಾರಿಗೆ ಬೇರಾವುದೇ ವಾಹನ ಗುದ್ದಿದ್ದರೆ ಮೊಟ್ಟೆ ತರಹ ಅಪ್ಪಚ್ಚಿಯಾಗುವುದರಲ್ಲಿ ಸಂಶಯವಿಲ್ಲ.

ನೂತನ ಮೊಟ್ಟೆಯಾಕಾರದ ಕಾರಿನಲ್ಲಿ ಐಪಾಡ್ ಹೋಲ್ಡರ್ ಇದೆ. ಸಾಂಪ್ರದಾಯಿಕ ಸ್ಕೂಟರ್ ಬಳಕೆದಾರರು ಇದನ್ನು ಬಳಕೆ ಮಾಡಬಹುದು. ಹಿರಿಯರು, ಅಂಗವಿಕಲರಿಗೆ ಇದು ಅತ್ಯಂತ ಸೂಕ್ತ ವಾಹನವೆಂದು ಕಾರು ನಿರ್ಮಾತೃಗಳು ಹೇಳುತ್ತಾರೆ.

ಮುಂದಿನ ವರ್ಷದ ಆರಂಭದಲ್ಲಿ ಈ ಕಾರು ಮಾರಾಟಕ್ಕೆ ಲಭ್ಯವಾಗುವ ನಿರೀಕ್ಷೆಯಿದೆ. ಇದರ ದರ ಸುಮಾರು 5 ಸಾವಿರ ಡಾಲರ್ ಆಸುಪಾಸಿನಲ್ಲಿರಲಿದೆ. ದರ ಮೊಟ್ಟೆಯಷ್ಟೇ ಅಗ್ಗವೆಂದು ವಾಹನ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

More from DriveSpark

Article Published On: Tuesday, July 31, 2012, 16:57 [IST]
English summary
Designers from San Diego introduced an electric car in the shape of an egg, and that can move easily through heavy traffic. The Eggasus is an electric-powered, fully-enclosed single-person car that can travel at up to 40kmh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+