ಚಾಲಕನ ಹಂಗಿಲ್ಲದ ಗೂಗಲ್ ಕಾರಿಗೆ ಹಸಿರು ನಿಶಾನೆ

ಗೂಗಲ್ ಡ್ರೈವರ್ ಲೆಸ್ಸ್ ಕಾರನ್ನು ರಸ್ತೆಯಲ್ಲಿ ಚಲಾಯಿಸಲು ಪರವಾನಿಗೆ ದೊರಕಿದ ಅಮೆರಿಕದ ಮೊದಲ ರಾಜ್ಯವೆಂದರೆ ನೆವದಾ. ಚಾಲಕ ರಹಿತ ಕಾರನ್ನು ಪರೀಕ್ಷಾರ್ಥ ಉದ್ದೇಶದಿಂದ ತನ್ನ ರಾಜ್ಯದ ರಸ್ತೆಯಲ್ಲಿ ಚಾಲನೆ ಮಾಡಲು ಅವಕಾಶ ಕೋರಿದ ಗೂಗಲ್ ಅರ್ಜಿಗೆ ಸಮ್ಮತಿ ಸೂಚಿಸಿರುವುದಾಗಿ ನೆವದಾ ರಾಜ್ಯದ ಮೋಟರ್ ವೆಹಿಕಲ್ ಇಲಾಖೆಯು ಪ್ರಕಟಿಸಿದೆ.

ಈ ಚಾಲಕರಹಿತ ಕಾರಿಗೆ ಪರವಾನಿಗೆ ನೀಡುವ ಮುನ್ನ ರಾಜ್ಯವ ವಿವಿಧ ಭಾಗಗಳಲ್ಲಿ ಪ್ರಾಯೋಗಿಕವಾಗಿ ಚಾಲನೆ ಮಾಡಿ ನೋಡಿರುವುದಾಗಿ ಮೂಲಗಳು ಹೇಳಿವೆ. ಇಂತಹ ಕಾರುಗಳನ್ನು ಟೆಸ್ಟ್ ಮಾಡಲು ಕಂಪನಿಯು 10 ಲಕ್ಷ ಡಾಲರಿನ ವಿಮಾ ಬಾಂಡ್ ನೀಡಿದೆ.

ಆದರೂ ಈ ಚಾಲಕ ರಹಿತ ಕಾರಿನಲ್ಲಿ ಇಬ್ಬರು ಕಡ್ಡಾಯವಾಗಿ ಪ್ರಯಾಣಿಸಬೇಕು ಎಂದು ಪರವಾನಿಗೆ ನೀಡುವಾಗ ಸ್ಪಷ್ಟವಾಗಿ ತಿಳಿಸಲಾಗಿದೆ. ಯಾಕೆಂದರೆ ಎಲ್ಲಾದರೂ ಚಾಲಕ ರಹಿತವಾಹನದಲ್ಲಿ ಏನಾದರೂ ತೊಂದರೆ ಉಂಟಾದರೆ ಹಿಡಿತಕ್ಕೆ ತೆಗೆದುಕೊಳ್ಳಲು ಕಾರಿನೊಳಗೆ ಜನರಿರುವುದು ಕಡ್ಡಾಯ ಎಂದು ನೆವದಾ ಸರಕಾರ ಹೇಳಿದೆ.

ಗೂಗಲ್ ಕಂಪನಿಯ ಈ ಚಾಲಕ ರಹಿತ ಕಾರಿಗೆ ಟೊಯೊಟಾ ಕಂಪನಿಯ ಪ್ರಯಾಸ್ ಪರಿಷ್ಕೃತ ಕಾರನ್ನು ಬಳಸಿಕೊಳ್ಳಲಾಗಿದೆ. ಇದರ ರೂಫ್ ಮತ್ತು ಗ್ರಿಲಿನಲ್ಲಿ ಲೇಸರ್ ರೇಡರ್ ಇದೆ. ಪಾದಚಾರಿಗಳು, ವಾಹನಗಳು, ಸೈಕ್ಲಿಸ್ಟ್ ಮತ್ತು ಇತರ ಯಾವುದೇ ವಸ್ತುಗಳು ಅಡ್ಡ ಬಂದಾಗ ಇದರಲ್ಲಿರುವ ಸೆನ್ಸಾರುಗಳಿಗೆ ತಿಳಿಯುತ್ತದೆ.

ಭವಿಷ್ಯದ ಚಾಲಕ ರಹಿತ ಕಾರುಗಳಿಗೆ ಮುನ್ನುಡಿ ಬರೆದಂತೆ ಇನ್ಮುಂದೆ ನೆವದಾ ರಾಜ್ಯದಲ್ಲಿ ಗೂಗಲ್ ಕಾರ್ ಚಲಿಸಲಿದೆ.

More from DriveSpark

Article Published On: Wednesday, May 9, 2012, 15:03 [IST]
English summary
Nevada became the first state in United States to licence Google driverless cars to be tested on its roads. The Nevada Department of Motor Vehicles (DMV) announced Monday it has approved Google's application to test the autonomous vehicles on public streets.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+