ಪರಿಸರ ಉಳಿಸುವ ಭವಿಷ್ಯದ ಹಸಿರು ಟೈರು

ಇತ್ತೀಚೆಗೆ ಜನರಲ್ಲಿ ಪರಿಸರ ಸ್ನೇಹಿ ಯೋಚನೆಗಳು ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆ. ಪರಿಸರ ಮಾಲಿನ್ಯವೆಂದಾಕ್ಷಣ ಕಣ್ಮುಂದೆ ವಾಹನಗಳು ಬರುತ್ತವೆ. ಮುಖ್ಯವಾಗಿ ಅವುಗಳು ಹೊರಸೂಸುವ ಹೊಗೆಯೇ ಎಲ್ಲರಿಗೆ ಕಾಣುತ್ತದೆ. ಆದರೆ ವಾಹನಗಳ ಟೈರ್ ಮೂಲಕವೂ ಪರಿಸರ ಉಳಿಸಬಹುದು ಎಂಬ ಸಂಗತಿ ಪ್ರಾಯಶಃ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ.

ಹೆಚ್ಚಿನ ದೇಶಗಳು ಇಂಗಾಲ ಹೊರಸೂಸುವಿಕೆ ಪ್ರಮಾಣ ತಗ್ಗಿಸಲು ಗಂಭೀರವಾಗಿ ಪ್ರಯತ್ನಿಸುತ್ತಿವೆ. ಕೆಲವು ಕಂಪನಿಗಳು "ಗೋ ಗ್ರೀನ್" ಇತ್ಯಾದಿ ಕಾರ್ಯತಂತ್ರಗಳನ್ನು ರೂಪಿಸುತ್ತಿವೆ. ಪರಿಸರ ಸ್ನೇಹಿ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿವೆ.

ಈ ನಿಟ್ಟಿನಲ್ಲಿ ಟೈರ್ ಉದ್ಯಮ ಕೂಡ "ಭವಿಷ್ಯದ ಹಸಿರು ಟೈರ್" ಉತ್ಪಾದನೆಗೆ, ಅನ್ವೇಷಣೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಇದೇ ವರ್ಷದ ನವೆಂಬರ್ ತಿಂಗಳ ನಂತರ ಹೆಚ್ಚಿನ ಐರೋಪ್ಯ ದೇಶಗಳಲ್ಲಿ ಪರಿಸರ ಸ್ನೇಹಿ ಮಾನದಂಡಗಳಿಗೆ ತಕ್ಕಂತೆ ಟೈರ್ ಉತ್ಪಾದಿಸುವುದು ಕಡ್ಡಾಯವಾಗಲಿದೆ.

ಪರಿಸರ ಸ್ನೇಹಿ ಲೇಬಲ್ ಟೈರ್ ಮೇಲೆ ಅಂಟಿಸುವುದು ಕಡ್ಡಾಯವಾಗಲಿದೆ. ಬೃಹತ್ ಟೈರ್ ಮಾರುಕಟ್ಟೆಯಾದ ಭಾರತವೂ ಸಹ ಪರಿಸರ ಸ್ನೇಹಿ ಟೈರ್ ನೀತಿನಿಯಮಗಳನ್ನು ಕಡ್ಡಾಯಗೊಳಿಸುವ ನಿರೀಕ್ಷೆಯಿದೆ.

ಟೈರ್ ಲೇಬಲಿಂಗ್ ಅಂದ್ರೆನು?
ವಾಹನಗಳ ಟೈರುಗಳ ಉತ್ಪಾದನೆಗೆ ನಿರ್ಧಿಷ್ಟ ಮಾನದಂಡಗಳಿರುತ್ತವೆ. ಟೈರುಗಳು ವಾಹನಗಳ ದಕ್ಷತೆಯನ್ನು ಹೆಚ್ಚಿಸುವಂತಿರಬೇಕು. ಇದಕ್ಕಾಗಿ ಟೈರುಗಳಿಂದ ಸಿಗುವ ಇಂಧನ ದಕ್ಷತೆ, ಗ್ರಿಪ್ ಮತ್ತು ಉಂಟು ಮಾಡುವ ಶಬ್ದದ ವಿವರವನ್ನು ಟೈರಿಗೆ ಅಂಟಿಸಿರುವ ಲೇಬಲಿನಲ್ಲಿ ನಮೋದಿಸಬೇಕು.

ಕಾರು, ಬೈಕ್, ಜೀಪು, ಟ್ರಕ್ ಗಳ ಟೈರುಗಳಿಗೆ ವಿವಿಧ ಮಾನದಂಡಗಳಿರುತ್ತವೆ. ಅದಕ್ಕೆ ಅನುಗುಣವಾಗಿ ಎ, ಬಿ, ಜಿ ಎಂದೆಲ್ಲ ಗ್ರೇಡ್ ನೀಡಲಾಗುತ್ತದೆ. ಪರಿಸರ ಸ್ನೇಹಿಯಾಗಿರುವ ಟೈರುಗಳಿಗೆ ಎ ಗ್ರೇಡ್ ನೀಡಲಾಗುತ್ತದೆ. ಕಳಪೆ ಟೈರುಗಳಿಗೆ ಜಿ ಗ್ರೇಡ್ ನೀಡಲಾಗುತ್ತದೆ. ಭವಿಷ್ಯದಲ್ಲಿ ಎ ಗ್ರೇಡ್ ಇರುವ ಟೈರ್ ಬಳಕೆ ಕಡ್ಡಾಯವಾಗಲಿದೆ.

ವಾಹನಗಳ ಟೈರ್ ಇಂಧನ ದಕ್ಷತೆ ಹೆಚ್ಚಿಸುವಲ್ಲಿ ಅಥವಾ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದರ ಕುರಿತು ಹೆಚ್ಚಿನವರಿಗೆ ಅರಿವಿರುವುದಿಲ್ಲ. ಟೈರ್ ಕಂಪನಿಗಳು ಗುಣಮಟ್ಟದ ಟೈರ್ ಉತ್ಪಾದಿಸಿದರೆ ವಾಹನದ ದಕ್ಷತೆ ಹೆಚ್ಚಾಗುತ್ತದೆ. ಹೆಚ್ಚು ಸವೆಯುವ ಟೈರುಗಳಿಂದ ಇಂಗಾಲವೂ ಹೆಚ್ಚು ಭೂಮಿ ಸೇರುತ್ತದೆ.

ಮುಂಬರುವ ದಿನಗಳಲ್ಲಿ ಪರಿಸರ ಸ್ನೇಹಿ ಟೈರುಗಳನ್ನು ಕಡ್ಡಾಯಗೊಳಿಸಲು ಹೆಚ್ಚಿನ ದೇಶಗಳು ಗಂಭೀರವಾಗಿ ಯೋಚಿಸುತ್ತಿವೆ. ಭಾರತದಲ್ಲೂ ಪರಿಸರ ಸ್ನೇಹಿ ಟೈರ್ ಕಡ್ಡಾಯವಾಗಲಿ ಎನ್ನುವುದು ಕನ್ನಡ ಡ್ರೈವ್ ಸ್ಪಾರ್ಕ್ ಆಶಯ.

Article Published On: Thursday, May 31, 2012, 12:58 [IST]
English summary
Tyre Industry taking greener initiatives to reduce carbon dioxide emissions. Tyre Labeling mandatory in Europe from 2012 November. India Tyre Industry also contribute greener initiative.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+