ಚಾರ್ಲಿ ಚಾಂಪ್ಲಿನ್‌ಗೆ ಹುಟ್ಟುಹಬ್ಬದ ಶುಭಾಶಯಗಳು
ವಾಹನ ವೆಬ್‌ಸೈಟಾದರೂ ಕನ್ನಡ ಡ್ರೈವ್‌ಸ್ಪಾರ್ಕಿಗೂ ಚಾರ್ಲಿ ಬಗ್ಗೆ ಮಾತನಾಡುವ ಹಕ್ಕುಂಟು. ಯಾಕೆಂದರೆ ಚಾರ್ಲಿ ಐಷಾರಾಮಿ ಕಾರೊಂದನ್ನು ಬಳಸುತ್ತಿದ್ದರು. ಅವರ ಹುಟ್ಟುಹಬ್ಬದ ನೆಪದಲ್ಲಿ ಅವರ ಪ್ರೀತಿಯ 1929ರ Pierce Arrow convertible ಕಾರಿನ ಮೇಲೊಂದು ಸುತ್ತು ಹೊಡೆಯೋಣ ಬನ್ನಿ. (ಓದಿ: ಸೆಲೆಬ್ರಿಟಿ ಕಾರು)
1929ರ ಪಿಯೆರ್ಸ್ ಅರೊ ಎಂಬ ಕಾರನ್ನು ಹಾಲಿವುಡ್ ದಂತಕಥೆ, ಹಾಸ್ಯಚಕ್ರವರ್ತಿ, ಅದ್ಭುತ ನಟ ಚಾರ್ಲಿಚಾಂಪ್ಲಿನ್ ಬಳಸುತ್ತಿದ್ದರು. ಇವರು ಬಳಸುತ್ತಿದ್ದ ಡ್ಯೂಯಲ್ ಕವ್ಲ್ ಪೆಂಟೊನ್ ಕನ್ವರ್ಟಿಬಲ್ ಕಾರು ಐಷಾರಾಮಿ ಸೆಗ್ಮೆಂಟಿನಲ್ಲಿ ಪ್ರಮುಖವಾದದ್ದು. ಆ ಕಾಲದಲ್ಲಿ ಶ್ರೀಮಂತರ ಆಯ್ಕೆಯ ಕಾರಾಗಿತ್ತು.
ಈ ಕಾರನ್ನು 1933ರಲ್ಲಿ ವಾಹನ ಕಂಪನಿ ಸ್ಟಡೆಬೆಕರ್ ಮಾರಾಟ ಮಾಡಿತ್ತು. ಯಾಕೆಂದರೆ ಈ ಕಂಪನಿ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ. 1938ರಲ್ಲಿ ಈ ಕಂಪನಿ ನಷ್ಟ ಅನುಭವಿಸಿ ಮುಚ್ಚಿಹೋಯಿತು.
ಈ ಕಾರಿನ ಹರಾಜು ಪ್ರಕ್ರಿಯೆಯನ್ನು 2005ರಲ್ಲಿ ಸ್ಥಗಿತಗೊಳಿಸಲಾಗಿತ್ತು. ತದನಂತರ ಇದನ್ನು ಆನ್‌ಲೈನ್‌ನಲ್ಲಿ ಹರಾಜಿಗಿಡಲಾಗಿತ್ತು. ಈ ಕಾರು ಹೊಸದಾಗಿದ್ದಾಗ ದರ 8 ಸಾವಿರ ಡಾಲರ್. ಇದನ್ನು ಆಂಡಿ ಗ್ರಾನಟೆಲಿ ಬಳಿಯಿಂದ ಮ್ಯೂಸಿಯಂ ಮಾಲೀಕರು ಸುಮಾರು ಆರಂಕಿ ಡಾಲರಿಗೆ ಖರೀದಿಸಿದ್ದರಂತೆ. ಇದು ಎಷ್ಟು ಮೊತ್ತವೆಂಬ ಖಚಿತ ಮಾಹಿತಿ ಲಭ್ಯವಿಲ್ಲ.


Click it and Unblock the Notifications
