ಶೀಘ್ರದಲ್ಲಿ ನಿರೀಕ್ಷಿಸಿ: ಹೋಂಡಾ ಬ್ರಿಯೊ ಡೀಸೆಲ್ ಹ್ಯಾಚ್ ಬ್ಯಾಕ್

ಕಂಪನಿಯ ಹ್ಯಾಚ್ ಬ್ಯಾಕ್ ಸುಂದರಿ "ಬ್ರಿಯೊ" ಮಾರಾಟವೂ ಆಶಾದಾಯಕವಾಗಿಲ್ಲ. ಹೀಗಾಗಿ ಕಂಪನಿಯು ಅಂತಿಮವಾಗಿ ಡೀಸೆಲ್ ಕಾರುಗಳ ಕುರಿತು ಬಾಯಿಬಿಟ್ಟಿದೆ. ಇಂಟ್ರೆಸ್ಟಿಂಗ್ ವಿಷ್ಯವೆಂದರೆ ಕಂಪನಿಯು ಪ್ರಸಕ್ತ ವರ್ಷವೇ ಡೀಸೆಲ್ ಬ್ರಿಯೊ ಹ್ಯಾಚ್ ಬ್ಯಾಕ್ ಕಾರು ಹೊರತರಲಿದೆ. ಈಗಾಗಲೇ ಕಂಪನಿಯು ನೂತನ ಡೀಸೆಲ್ ಎಂಜಿನ್ ಅನಾವರಣ ಮಾಡಿದೆ.
ಕಂಪನಿಯು ಹೊರತರಲಿರುವ ಬ್ರಿಯೊ ಡೀಸೆಲ್ ಕಾರು, ಕಂಪನಿಯು ದೇಶಕ್ಕೆ ಪರಿಚಯಿಸುವ ಪ್ರಪ್ರಥಮ ಡೀಸೆಲ್ ಎಂಜಿನ್ ಕಾರಾಗಲಿದೆ. ಕಂಪನಿಯು ವಿವಿಧ ಡೀಸೆಲ್ ಎಂಜಿನ್ ಅಭಿವೃದ್ಧಿಪಡಿಸುತ್ತಿದೆಯಂತೆ. ಎಕ್ಸ್-ಎಫ್1 ಎಂಜಿನ್ ವಿನ್ಯಾಸಗಾರ ಕಂಪನಿಗಳೊಂದಿಗೆಯೂ ಮಾತುಕತೆ ನಡೆಸುತ್ತಿದೆಯಂತೆ.
ಹೋಂಡಾ ಸಿಯೆಲ್ ಕಾರ್ಸ್ ಕಂಪನಿಯು ಆರಂಭದಲ್ಲಿ ಸಿವಿಕ್ ಅಥವಾ ಸಿಆರ್-ವಿ ಕಾರುಗಳಿಗೆ ಡೀಸೆಲ್ ಎಂಜಿನ್ ಅಳವಡಿಸಲಿದೆ ಎಂದು ಹೆಚ್ಚಿನವರು ಅಂದುಕೊಂಡಿದ್ದರು. ಆದರೆ ಪುಟ್ಟ ಕಾರುಗಳನ್ನು ಇಷ್ಟಪಡುವ ದೊಡ್ಡ ದೇಶವಾದ ಭಾರತದಲ್ಲಿ ಬ್ರಿಯೊ ಡೀಸೆಲ್ ಕಾರುಗಳನ್ನು ಹೊರತರಲು ಕಂಪನಿ ಯೋಜಿಸಿದೆ.
ಹೋಂಡಾ ಬ್ರಿಯೊ ಡೀಸೆಲ್ ಕಾರು ಪ್ರಸಕ್ತ ವರ್ಷವೇ ರಸ್ತೆಗೆ ಆಗಮಿಸುವ ನಿರೀಕ್ಷೆಯಿದೆ. ಇದು 1.6 ಲೀಟರಿನ ಐ-ಡಿಟೆಕ್ ಟರ್ಬೋ ಡೀಸೆಲ್ ಎಂಜಿನ್ ಹೊಂದಿರಲಿದೆ ಎಂದು ವರದಿಗಳು ಹೇಳಿವೆ.


Click it and Unblock the Notifications








