ದೀಪಾವಳಿ ವೇಳೆಗೆ ಬ್ರಿಯೊ ಡೀಸೆಲ್ ಪ್ರಭಾವಳಿ

ದೇಶದ ಜನರು ದುಬಾರಿ ಪೆಟ್ರೋಲ್ ದರದಿಂದ ಕಂಗೆಟ್ಟಿರುವ ಸಮಯದಲ್ಲಿ ಹೋಂಡಾ ಕಂಪನಿಯು ಬ್ರಿಯೊ ಡೀಸೆಲ್ ಆವೃತ್ತಿಯನ್ನು ಶೀಘ್ರದಲ್ಲಿ ಪರಿಚಯಿಸುವ ಕುರಿತು ಚಿಂತಿಸುತ್ತಿದೆ. ಪ್ರಸಕ್ತ ವರ್ಷದ ದೀಪಾವಳಿ ಹಬ್ಬದ ವೇಳೆಗೆ ಹೋಂಡಾ ಕಂಪನಿಯ ಸಣ್ಣಕಾರು ಬ್ರಿಯೊ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ರಸ್ತೆಗಿಳಿಯಲಿದೆ.

"ಮುಂದಿನ ವರ್ಷ ಬ್ರಿಯೊ ಡೀಸೆಲ್ ಕಾರು ಪರಿಚಯಿಸಲು ಈ ಹಿಂದೆ ಯೋಜಿಸಿದ್ದೇವು. ಆದರೆ ದೇಶದಲ್ಲಿ ಡೀಸೆಲ್ ಕಾರಿಗೆ ಅತ್ಯಧಿಕ ಬೇಡಿಕೆಯಿರುವ ಹಿನ್ನೆಲೆಯಲ್ಲಿ ಈ ವರ್ಷದ ದೀಪಾವಳಿ ವೇಳೆಗೆ ಬ್ರಿಯೊ ಡೀಸೆಲ್ ತರಲಿದ್ದೇವೆ" ಎಂದು ಹೋಂಡಾ ಕಂಪನಿಯ ಪ್ರಮುಖ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ದೇಶದ ವಾಹನ ಮಾರುಕಟ್ಟೆಗೆ ಇಲ್ಲಿವರೆಗೆ ಹೋಂಡಾ ಯಾವುದೇ ಡೀಸೆಲ್ ಕಾರುಗಳನ್ನು ಪರಿಚಯಿಸಿಲ್ಲ. ಇಲ್ಲಿ ಡೀಸೆಲ್ ಕಾರುಗಳಿಗೆ ಅತ್ಯಧಿಕ ಬೇಡಿಕೆಯಿರುದರಿಂದ ಕಂಪನಿಯ ವಹಿವಾಟಿಗೆ ಸಾಕಷ್ಟು ಹಿನ್ನೆಡೆಯಾಗಿತ್ತು. ಬ್ರಿಯೊ ಡೀಸೆಲ್ ಆಗಮನದಿಂದ ಕಂಪನಿಯ ಮಾರಾಟ ಗಮನಾರ್ಹವಾಗಿ ಏರಿಕೆ ಕಾಣುವ ನಿರೀಕ್ಷೆಯಿದೆ.

ಕೇವಲ ಹೋಂಡಾ ಸಿಯೆಲ್ ಕಾರ್ಸ್ ಇಂಡಿಯಾ ಮಾತ್ರ ದೇಶಕ್ಕೆ ಡೀಸೆಲ್ ಕಾರುಗಳನ್ನು ಪರಿಚಯಿಸಲು ಯೋಜಿಸಿಲ್ಲ. ರೆನೊ ಸೇರಿದಂತೆ ಹಲವು ಕಂಪನಿಗಳು ಡೀಸೆಲ್ ಕಾರುಗಳನ್ನು ಪರಿಚಯಿಸುವ ಯೋಜನೆಯನ್ನು ಹಾಕಿಕೊಂಡಿವೆ.

ಹೋಂಡಾ ಬ್ರಿಯೊ ಹಲವು ಸುರಕ್ಷತೆ ಫೀಚರುಗಳೊಂದಿಗೆ ಆಗಮಿಸುವ ನಿರೀಕ್ಷೆಯಿದೆ. ಅಂದರೆ ಎಸ್ಆರ್‌ಎಸ್ ಏರ್‌ಬ್ಯಾಗ್‌ಗಳು, ಆಂಟಿ ಲಾಕ್ ಬ್ರೇಕ್ ಸಿಸ್ಟಮ್(ಎಬಿಎಸ್), ಎಲೆಕ್ಟ್ರಾನಿಕ್ ಬ್ರೇಕ್ ಡಿಸ್ಟಿಬ್ಯೂಷನ್(ಇಬಿಡಿ) ಸೇರಿದಂತೆ ಹಲವು ಫೀಚರುಗಳಿರಲಿವೆ.

Most Read Articles

Kannada
English summary
Honda Siel Cars India Planning to launch Diesel Brio car by Diwali. Honda do not offer any diesel car in India. But here diesel car demand increasing. So many car makers planing to launch new diesel cars.
Story first published: Thursday, May 31, 2012, 15:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X