ಹೊಂಡಾ ಬ್ರಿಯೊ ಆಟೋಮೆಟಿಕ್ ಬಿಡುಗಡೆ; ದರ 5.74 ಲಕ್ಷ ರು..!

ಕೆಲವು ವರ್ಷಗಳ ಹಿಂದೆ ಭಾರತದಲ್ಲಿ ಆರು ಲಕ್ಷ ರುಪಾಯಿಗಳ ಬಜೆಟ್‌ನೊಳಗೆ ಆಟೋಮೆಟಿಕ್ ಕಾರು ಖರೀದಿಸಲು ಬಯಸಿದ್ದಲ್ಲಿ ನಿಮ್ಮ ಮುಂದೆ ಕೆಲವು ನಿಯಮಿತ ಕಾರುಗಳ ಆಯ್ಕೆ ಮಾತ್ರ ಲಭ್ಯವಾಗಿರುತ್ತಿತ್ತು. ಇವುಗಳಲ್ಲಿ ಮಾರುತಿ ಎ ಸ್ಟಾರ್ ಆಟೋಮೇಟಿಕ್ ಹಾಗೂ ಹ್ಯುಂಡೈ ಐ10 ಆಟೋಮೆಟಿಕ್ ಕಾರುಗಳಿಗೆ ಮಾತ್ರ ನಿಮ್ಮ ಆಕಾಂಕ್ಷೆ ಈಡೇರಿಸಲು ಸಾಧ್ಯವಾಗುತ್ತಿತ್ತು.

ಒಂದು ವೇಳೆ ಸ್ವಲ್ಪ ದುಬಾರಿ ಆಟೋಮೆಟಿಕ್ ಕಾರುಗಳ ಮೇಲೆ ಕಣ್ಣಾಯಿಸಿದರೆ, ಡಿಜೈರ್ ಆಟೊಮೆಟಿಕ್, ಸಿಟಿ, ರ‌್ಯಾಪಿಡ್, ಪೀಯೆಸ್ಟಾ ಹಾಗೂ ವೆಂಟೊಗಳಂತಹ ಕಾರುಗಳು ಲಭ್ಯವಾಗುತ್ತಿದ್ದವು. ಆದರೆ ಭಾರಿ ವಾಹನ ದಟ್ಟಣೆಯಿಂದ ಬೆಸತ್ತು ಹೋಗಿದ್ದ ಗ್ರಾಹಕರಿಗೆ ಸಣ್ಣ ಕಾರು ವಿಭಾಗದಲ್ಲಿ ತಮ್ಮ ಬಜೆಟ್‌ನೊಳಗೆ ನಿಯಮಿತ ಆಟೋಮೆಟಿಕ್ ಕಾರುಗಳು ಆಯ್ಕೆ ಮಾಡುವ ಅವಕಾಶ ವಿರಳವಾಗಿತ್ತು.

ಇದೀಗ ಗ್ರಾಹಕರ ಇಂತಹ ಕನಸನ್ನು ಪೂರೈಸಲು ಹೊರಟಿರುವ ಹೊಂಡಾ ಸೀಲ್ ಇಂಡಿಯಾ ನೂತನ ಹೊಂಡಾ ಬ್ರಿಯೊ 5 ಸ್ಪೀಡ್ ಆಟೊಮೆಟಿಕ್ ಟ್ರಾನ್ಸ್‌ಮಿಷನ್ ಕಾರನ್ನು ಬಿಡುಗಡೆ ಮಾಡಿದೆ. ಕಾರಿನ ಬಜೆಟ್ ಕೂಡಾ ಆರು ಲಕ್ಷದೊಳಗೆ ಇರುವುದರಿಂದ ಗ್ರಾಹಕರು ಕೂಡಾ ಹೆಚ್ಚೆಚ್ಚು ಆಕರ್ಷಿತರಾಗುವ ನಿರೀಕ್ಷೆಯಿದೆ.

ದರ ಮಾಹಿತಿ:

  • ಹೊಂಡಾ ಬ್ರಿಯೊ ಎಸ್ (ಒ) ಆಟೋಮೆಟಿಕ್ ಆವೃತ್ತಿ ದರ: 5.74 ಲಕ್ಷ ರು.
  • ಹೊಂಡಾ ಬ್ರಿಯೊ ವಿ ಆಟೋಮೆಟಿಕ್ ಆವೃತ್ತಿ ದರ: 5.99 ಲಕ್ಷ ರು.

ಹೊಂಡಾ ಬ್ರಿಯೊ ಫೀಚರ್ಸ್
1.2 ಲೀಟರ್ ಐವಿಟೆಕ್ ಎಂಜಿನ್ ಜತೆ 87 ಬಿಎಚ್‌ಪಿ ಪೀಕ್ ಪವರ್‌ನಿಂದ ನಿಯಂತ್ರಿಸಲ್ಪಡಲಿದ್ದು, ಮ್ಯಾನುವಲ್ ಮಾದರಿಗೆ 109 ಎನ್‌ಎಂ ಟರ್ಕ್ಯೂ ಬಳಸಲಾಗಿದೆ. ಮ್ಯಾನುವಲ್ ಮಾದರಿಯಲ್ಲಿ ಇಂಧನ ಕ್ಷಮತೆಯು ಪ್ರತಿ ಕಿಲೋ ಮೀಟರ್‌ಗೆ 18.3 ಕಿಲೋ ಮೀಟರ್ ಹಾಗೂ ಆಟೋಮೆಟಿಕ್ ಗೇರ್‌ಬಾಕ್ಸ್‌ಗಳಲ್ಲಿ ಪ್ರತಿ ಲೀಟರ್‌ಗೆ 16.5 ಕೀಲೋ ಮೀಟರ್ ವೇಗತೆ ನೀಡಲಿದೆ.

ಉತ್ತಮ ಮೈಲೇಜ್ ಜತೆಗೆ ನೂತನ ವಿನ್ಯಾಸ, ಉತ್ತಮ ನಿಯಂತ್ರಣ, ಇಂಟಿರಿಯರ್‌ನಲ್ಲಿ ಪ್ರೀಮಿಯಂ ಲುಕ್‌ಗಳಂತಹ ಫೀಚರ್‌ಗಳನ್ನು ಹೊಂದಿದೆ. ಹಾಗಾಗಿ ಇತರ ಸಮಾನ ಮಾದರಿಗಳಿಗೆ ಹೋಲಿಸಿದಾಗ ಮತ್ತಷ್ಟು ಅಗ್ಗದ ಹೊಂಡಾ ಬ್ರಿಯೊ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಿದೆ.

ಗೇರ್ ಸಿಸ್ಟಂ- ಪಿ (ಪಾರ್ಕ್), ಆರ್ (ರಿವರ್ಸ್), ಎನ್ (ನ್ಯೂಟ್ರಲ್), ಡಿ (ಡ್ರೈವ್), ಡಿ3, 2 ಮತ್ತು 1. ಹೊಂಡಾ ಸಿಟಿಯಲ್ಲಿ ಬಳಸಿದಂತಹ ಫೈವ್ ಸ್ಪೀಡ್ ಕನ್ವೇಷನಲ್ ಆಟೋಮೆಟಿಕ್ ಟ್ರಾನ್ಸ್‌ಮಿಷನ್ ಬಳಸಲಾಗಿದ್ದರೂ ವಿವಿಧ ಗೇರ್ ರೆಷಿಯೊಗಳನ್ನು ಹೊಂದಿರಲಿದೆ. ಅಲೋಯ್ ವೀಲ್ಸ್, ಫಾಗ್ ಲ್ಯಾಂಪ್‌ಗಳಂತಹ ಇತರ ಪ್ರಮುಖ ಫೀಚರ್‌ಗಳನ್ನು ಕಾರು ಹೊಂದಿದೆ.

ಆಟೋಮೆಟಿಕ್ ಆವೃತ್ತಿ ಎಸ್ (ಒ) ಆಟೋಮೆಟಿಕ್ ಹಾಗೂ ವಿ ಆಟೋಮೆಟಿಕ್‌ಗಳೆಂಬ ಎರಡು ವೆರಿಯಂಟ್‌ಗಳಲ್ಲಿ ಲಭ್ಯವಾಗಲಿದೆ. ದೆಹಲಿ ಎಕ್ಸ್ ಶೊರೂಂಗಳಲ್ಲಿ ಇದರ ದರವು ಕ್ರಮವಾಗಿ 5.74 ಹಾಗೂ 5.99 ಲಕ್ಷ ರುಪಾಯಿಗಳೆಂದು ನಿಗದಿಯಾಗಿದೆ. ಇದರ ಸಹಿತ ಮ್ಯಾನುವಲ್ ಟ್ರಾನ್ಸ್‌ಮಿಷನ್ ಕಾರನ್ನು ಸಹ ಬಿಡುಗಡೆ ಮಾಡಲಾಗಿದ್ದು, ಇದರ ಬೆಲೆಯು 4.26 ಲಕ್ಷ ರುಪಾಯಿಗಳಾಗಿವೆ.

ಹೊಂಡಾ ಬ್ರಿಯೊ ಆಟೋಮೆಟಿಕ್

ಹೊಂಡಾ ಬ್ರಿಯೊ ಆಟೋಮೆಟಿಕ್

ಆಟೋಮೆಟಿಕ್ ಆವೃತ್ತಿ ಎಸ್ (ಒ) ಆಟೋಮೆಟಿಕ್ ಹಾಗೂ ವಿ ಆಟೋಮೆಟಿಕ್‌ಗಳೆಂಬ ಎರಡು ವೆರಿಯಂಟ್‌ಗಳಲ್ಲಿ ಲಭ್ಯವಾಗಲಿದೆ.

ಹೊಂಡಾ ಬ್ರಿಯೊ ಎಂಜಿನ್

ಹೊಂಡಾ ಬ್ರಿಯೊ ಎಂಜಿನ್

1.2 ಲೀಟರ್ ಐವಿಟೆಕ್ ಎಂಜಿನ್ ಜತೆ 87 ಬಿಎಚ್‌ಪಿ ಪೀಕ್ ಪವರ್‌ನಿಂದ ನಿಯಂತ್ರಿಸಲ್ಪಡಲಿದ್ದು, ಮ್ಯಾನುವಲ್ ಮಾದರಿಗೆ 109 ಎನ್‌ಎಂ ಟರ್ಕ್ಯೂ ಬಳಸಲಾಗಿದೆ

ಹೊಂಡಾ ಬ್ರಿಯೊ ಇಂಧನ ದಕ್ಷತೆ

ಹೊಂಡಾ ಬ್ರಿಯೊ ಇಂಧನ ದಕ್ಷತೆ

ಇಂಧನ ಕ್ಷಮತೆಯು ಪ್ರತಿ ಕಿಲೋ ಮೀಟರ್‌ಗೆ 18.3 ಕಿಲೋ ಮೀಟರ್ ಹಾಗೂ ಆಟೋಮೆಟಿಕ್ ಗೇರ್‌ಬಾಕ್ಸ್‌ಗಳಲ್ಲಿ ಪ್ರತಿ ಲೀಟರ್‌ಗೆ 16.5 ಕೀಲೋ ಮೀಟರ್ ವೇಗತೆ ನೀಡಲಿದೆ.

ಹೊಂಡಾ ಬ್ರಿಯೊ ದರ ಮಾಹಿತಿ:

ಹೊಂಡಾ ಬ್ರಿಯೊ ದರ ಮಾಹಿತಿ:

ಹೊಂಡಾ ಬ್ರಿಯೊ ಎಸ್ (ಒ) ಆಟೋಮೆಟಿಕ್ ಆವೃತ್ತಿ ದರ: 5.74 ಲಕ್ಷ ರು.

ಹೊಂಡಾ ಬ್ರಿಯೊ ವಿ ಆಟೋಮೆಟಿಕ್ ಆವೃತ್ತಿ ದರ: 5.99 ಲಕ್ಷ ರು.

ಹೊಂಡಾ ಬ್ರಿಯೊ ಸುರಕ್ಷತೆ

ಹೊಂಡಾ ಬ್ರಿಯೊ ಸುರಕ್ಷತೆ

ಹೆಚ್ಚಿನ ಅನುಕೂಲತೆಗಾಗಿ ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್

ಸುರಕ್ಷತೆ ಖಾತ್ರಿಗಾಗಿ ಬಿಎಸ್+ಇಬಿಡಿ ಜತೆ ಡ್ಯುಯಲ್ ಎಸ್‌ಆರ್‌ಎಸ್ ಏರ್‌ಬ್ಯಾಗ್ಸ್

ಹಾಯಾಗಿ ಡ್ರೈವಿಂಗ್ ಮಾಡುವುದಕ್ಕಾಗಿ ಓರೆಯಾಗಿಸದ ಸ್ಟೀರಿಂಗ್

ಯುಎಸ್‌ಬಿ ಮತ್ತು ಎಯುಎಕ್ಸ್ ಕೂಡಾ ಇದೆ.

ಹೊಂಡಾ ಬ್ರಿಯೊ

ಹೊಂಡಾ ಬ್ರಿಯೊ

ಹೊಂಡಾ ಬ್ರಿಯೊ ಇದೀಗ ಆಟೋಮೆಟಿಕ್ ಆವೃತ್ತಿಯಲ್ಲೂ ಲಭ್ಯ

ಹೊಂಡಾ ಬ್ರಿಯೊ ಗೇರ್ ಸಿಸ್ಟಂ

ಹೊಂಡಾ ಬ್ರಿಯೊ ಗೇರ್ ಸಿಸ್ಟಂ

ಗೇರ್ ಸಿಸ್ಟಂ- ಪಿ (ಪಾರ್ಕ್), ಆರ್ (ರಿವರ್ಸ್), ಎನ್ (ನ್ಯೂಟ್ರಲ್), ಡಿ (ಡ್ರೈವ್), ಡಿ3, 2 ಮತ್ತು 1.

ಹೊಂಡಾ ಬ್ರಿಯೊ

ಹೊಂಡಾ ಬ್ರಿಯೊ

ಹೊಂಡಾ ಬ್ರಿಯೊ ಇದೀಗ ಆಟೋಮೆಟಿಕ್ ಆವೃತ್ತಿಯಲ್ಲಿ ಲಭ್ಯವಾಗಿದ್ದು, ಡ್ರೈವಿಂಗ್ ಆನಂದಿಸುತ್ತಾ ಹೆಚ್ಚು ಸಮಯ ಕಾರಿನಲ್ಲಿ ಕಳೆಯಿರಿ.

More from DriveSpark

Article Published On: Thursday, October 18, 2012, 15:16 [IST]
English summary
Honda has launched Brio Automatic in India today. The Automatic Brio is priced between Rs 5.50 lakh and Rs 5.80 lakh (ex-Delhi), approximately Rs 60,000 more than the equivalent manual trim.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+