2,338 ಯುನಿಟ್ ಬ್ರಿಯೊ, ಅಮೇಜ್, ಸಿಆರ್-ವಿಗೆ ಹಿಂದಕ್ಕೆ ಕರೆ

By Nagaraja

ಅಮೇಜ್, ಸಿಟಿ ಸೆಡಾನ್ ಹಾಗೂ ಮೊಬಿಲಿಯೊಗಳಂತಹ ಆಕರ್ಷಕ ಕಾರುಗಳನ್ನು ದೇಶದ ಮಾರುಕಟ್ಟೆಗೆ ಪರಿಚಯಿಸುವ ಮೂಲಕ 'ಹ್ಯಾಟ್ರಿಕ್' ಯಶಸ್ಸು ಆಚರಿಸಿಕೊಂಡಿರುವ ಹೋಂಡಾ ಕಾರುಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದೆಯೇ? ಹೌದು, ಹೋಂಡಾದ ಕೆಲವೊಂದು ನಿರ್ದಿಷ್ಟ ಮಾದರಿಗಳಲ್ಲಿ ತೊಂದರೆ ಕಾಣಿಸಿಕೊಂಡಿದ್ದು, ಈ ಬಗ್ಗೆ ಸಂಸ್ಥೆಯಿಂದಲೇ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.

ಯಾವ ಕಾರಿಗೆಲ್ಲ ಸಮಸ್ಯೆ ತಗುಲಿದೆ?
ಹೋಂಡಾದ ಜನಪ್ರಿಯ ಬ್ರಿಯೊ, ಅಮೇಜ್, ಸಿಆರ್-ವಿ ಮಾದರಿಗಳಲ್ಲಿ ತೊಂದರೆ ಕಾಣಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ಒಟ್ಟು 2,338 ಯುನಿಟ್‌ಗಳನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. ಜಾಗತಿಕ ರಿಕಾಲ್ ಭಾಗವಾಗಿ ಹೋಂಡಾ ಇದನ್ನು ಹಮ್ಮಿಕೊಂಡಿದೆ.


ಏನಿದು ಸಮಸ್ಯೆ?
ಹೋಂಡಾ ಕಾರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಚ್‌ಸಿಐಎಲ್) ಪ್ರಕಾರ, ಪ್ರತಿಬಂಧಕ ಪ್ಲೇಟ್ (Baffle Plate)ಜೋಡಣೆಯು ಅಸಮರ್ಪಕವಾಗಿದ್ದು, ಈ ಹಿನ್ನಲೆಯಲ್ಲಿ ಚಾಲಕ ಬದಿಯ ಏರ್ ಬ್ಯಾಗ್ ವಾಯುಪೂರಕವನ್ನು ಬದಲಾಯಿಸಿ ಕೊಡಲಾಗುವುದು ಎಂಬ ಭರವಸೆ ನೀಡಿದೆ.

ಯಾವೆಲ್ಲ ಮಾದರಿಗಳು ಎಷ್ಟೆಷ್ಟು ಹಿಂದಕ್ಕೆ ಕರೆ (ಯುನಿಟ್‌ಗಳಲ್ಲಿ) ?
ಹೋಂಡಾ ಬ್ರಿಯೊ - 1040
ಹೋಂಡಾ ಅಮೇಜ್ - 1235
ಹೋಂಡಾ ಸಿಆರ್‌ವಿ - 63


ತಯಾರಿಯಾದ ವರ್ಷ ಯಾವುದು ?
2011 ಸೆಪ್ಟೆಂಬರ್‌ನಿಂದ 2014 ಜುಲೈ ವರೆಗೆ ತಯಾರಾದ ಮೇಲೆ ತಿಳಿಸಲಾದ ನಿರ್ದಿಷ್ಟ ಮಾದರಿಗಳನ್ನು ಹಿಂಪಡೆಯಲಾಗುತ್ತಿದ್ದು, ತೊಂದರೆಯನ್ನು ಕೂಲಂಕುಷವಾಗಿ ಪರಿಶೀಲಿಸಲಿರುವ ಸಂಸ್ಥೆಯು ಸರಿಪಡಿಸಿ ಕೊಡಲಾಗುವುದು.

ಇವೆಲ್ಲವೂ ಉಚಿತ
ಸಂಸ್ಥೆಯು ಹೇಳುವ ಪ್ರಕಾರ ಭಾರತದಲ್ಲೂ ಸಮಸ್ಯೆ ದಾಖಲಾಗಿದ್ದು, ಎಲ್ಲ ಹೋಂಡಾ ಅಧಿಕೃತ ಡೀಲರುಗಳ ಬಳಿ ಉಚಿತ ವೆಚ್ಚದಲ್ಲಿ ತೊಂದರೆ ಸರಿಪಡಿಸಿ ಕೊಡಲಾಗುವುದು.

honda brio

ನಿಮ್ಮ ಕಾರಲ್ಲೂ ತೊಂದರೆ ಇದೆಯೇ?
ಅಷ್ಟಕ್ಕೂ ನಿಮ್ಮ ಕಾರಲ್ಲೂ ತೊಂದರೆ ಇದೆಯೇ ಎಂಬುದನ್ನು ತಿಳಿದುಕೊಳ್ಳಲು ಇಲ್ಲಿ ಕೊಟ್ಟಿರುವ ಲಿಂಕ್‌ಗೆ ಭೇಟಿ ಕೊಟ್ಟು ಪರಿಶೀಲಿಸಿರಿ. ಇದಕ್ಕಾಗಿ ಕೊಟ್ಟಿರುವ ಲಿಂಕ್‌ನಲ್ಲಿ ನಿಮ್ಮ ಕಾರಿನ 17 ಅಂಕಿಯ ಚಾಸೀ ನಂಬರ್ (MAKDD************,MAKDF************ ಅಥವಾ MAKRM)ಹಾಕಿ 'ಚೆಕ್' ಬಟನ್ ಒತ್ತಿದರೆ ಸಾಕು.
Most Read Articles

Kannada
English summary
HCIL to replace Driver-Side Air Bag Inflator of 2338 units of Brio, Amaze & CR-V due to incorrect assembly of Baffle Plate
Story first published: Tuesday, October 28, 2014, 9:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X