ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಹೊಂಡಾ ಬ್ರಿಯೊ ಸೆಡಾನ್
ಮೂರು ದಿನಗಳ ಹಿಂದೆಯಷ್ಟೇ ಬಹುನಿರೀಕ್ಷಿತ ಬ್ರಿಯೊ ಸೆಡಾನ್ ಕಾರಿನ ಎರಡನೇ ಟೀಸರ್ ಚಿತ್ರವನ್ನು ಹೊಂಡಾ ಥೈಲಾಂಡ್ ಬಿಡುಗಡೆಗೊಳಿಸಿತ್ತು. ಪ್ರಸ್ತುತ ಸುದ್ದಿ ಭಾರತೀಯ ಮಾಧ್ಯಮಗಳಲ್ಲಿ ಹರಡುತ್ತಿರುವಂತೆಯೇ ಜಪಾನ್ ಕಾರು ತಯಾರಕ ಕಂಪನಿಯ ಮೊದಲ ಡೀಸೆಲ್ ಮಾದರಿ ಕಾರು ದೇಶಕ್ಕೆ ಕಾಲಿಡಲು ಸಜ್ಜಾಗುತ್ತಿದೆ. ಪ್ರಸ್ತುತ ಕಾರಿನ ಸಂಪೂರ್ಣ ಮರೆಮಾಚಿದ ಚಿತ್ರಣವನ್ನು ಬಿಡುಗಡೆಗೊಳಿಸಿದೆ.
ಕಾರಿನ ಮೇಲೆ ಕ್ಯಾಮರಾ ಕಣ್ಣುಗಳು ಬಿದ್ದ ತಕ್ಷಣ ಕೊಮೊಫ್ಲ್ಯಾಗ್ ಮಾಡಿದ ದೃಶ್ಯ ಗೋಚರವಾಗಿತ್ತು. ಕಾರನ್ನು ವಿವಿಧ ಬಣ್ಣಗಳಿಂದ ಮರೆಮಾಚಿದ್ದರಿಂದ ಸನ್ಪೆನ್ಸ್ ಉಳಿಸಿಕೊಳ್ಳಲು ಹೊಂಡಾಗೆ ಸಾಧ್ಯವಾಗಿದೆ. ಹಾಗಿದ್ದರೂ ಕಾರಿನ ಕೆಲವೊಂದು ಫೀಚರ್‌ಗಳ ಮಾಹಿತಿಗಳು ಈಗಾಗಲೇ ಹೊರಬಂದಿದೆ. ಡೀಸೆಲ್ ಆವೃತ್ತಿಯಲ್ಲಿ ನಾಲ್ಕು ಸಿಲಿಂಡರ್ 1.6 ಲೀಟರ್ ಐ-ಡಿಟೆಕ್ ಎಂಜಿನ್ ಹಾಗೂ ಪೆಟ್ರೋಲ್ ಆವೃತ್ತಿಯಲ್ಲಿ 1.2 ಲೀಟರ್ ಎಂಜಿನ್ ಹೊಂದಿರಲಿದೆ.
ಭಾರತದಲ್ಲಿ ಸ್ಪರ್ಧಾತ್ಮಕ ದರದೊಂದಿಗೆ ಹೊಂಡಾ ಬ್ರಿಯೊ ಸೆಡಾನ್ ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಎಂಜಿನ್ ಬಿಡಿ ಭಾಗಗವನ್ನು ದೇಶಿಯವಾಗಿ ನಿರ್ಮಿಸಲಾಗುವುದು ಎಂದು ಹೊಂಡಾ ಜಪಾನ್ ಸಿಇಒ ತಕನೊಬು ಇಟೊ ತಿಳಿಸಿದ್ದಾರೆ.
ಬ್ರಿಯೊ ಸೆಡಾನ್ ಮುಂದಿನ ವರ್ಷ ಬಿಡುಗಡೆಯಾಗಲಿದ್ದು ಮಹೀಂದ್ರ ವೆರಿಟೊ ಸಿಎಸ್, ಟಾಟಾ ಇಂಡಿಗೊ ಇಸಿಎಸ್, ಸ್ವಿಫ್ಟ್ ಡಿಜೈರ್ ಹಾಗೂ ಟೊಯೊಟಾ ಇಟಿಯಾಸ್‌ಗೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಿದೆ.
ಇದೇ ಸಂದರ್ಭದಲ್ಲಿ ಹೊಂಡಾ ಮತ್ತೊಂದು ವಿಷಯವನ್ನು ಸ್ಪಷ್ಟಪಡಿಸಿದ್ದು ಪ್ರಸ್ತುತ ಇರುವ ಯಾವುದೇ ಮಾಡೆಲ್‌ಗಳಿಗೆ ಡೀಸೆಲ್ ಎಂಜಿನ್ ಜೋಡಿಸಲಾಗುವುದಿಲ್ಲ. ಹಾಗಾಗಿ ಮುಂದೊಂದು ವರ್ಷದಲ್ಲಿ ಎಲ್ಲ ಮಾದರಿಗಳು ಪರಿಷ್ಕೃತ ಆವೃತ್ತಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಹೊಂಡಾ ಬ್ರಿಯೊ ಸೆಡಾನ್
ಹೊಂಡಾ ಬ್ರಿಯೊ ಸೆಡಾನ್ ಆಕರ್ಷಕ ಟೀಸರ್ ಚಿತ್ರ ಅನಾವರಣ

ಹೊಂಡಾ ಬ್ರಿಯೊ ಸೆಡಾನ್
ಹೊಂಡಾ ಬ್ರಿಯೊ ಸೆಡಾನ್ ಆಕರ್ಷಕ ಟೀಸರ್ ಚಿತ್ರ ಅನಾವರಣ

ಹೊಂಡಾ ಬ್ರಿಯೊ ಸೆಡಾನ್
ಹೊಂಡಾ ಬ್ರಿಯೊ ಸೆಡಾನ್ ಆಕರ್ಷಕ ಟೀಸರ್ ಚಿತ್ರ ಅನಾವರಣ

ಹೊಂಡಾ ಬ್ರಿಯೊ ಸೆಡಾನ್
ಹೊಂಡಾ ಬ್ರಿಯೊ ಸೆಡಾನ್ ಆಕರ್ಷಕ ಟೀಸರ್ ಚಿತ್ರ ಅನಾವರಣ

ಹೊಂಡಾ ಬ್ರಿಯೊ ಸೆಡಾನ್
ಹೊಂಡಾ ಬ್ರಿಯೊ ಸೆಡಾನ್ ಆಕರ್ಷಕ ಟೀಸರ್ ಚಿತ್ರ ಅನಾವರಣ

ಹೊಂಡಾ ಬ್ರಿಯೊ ಸೆಡಾನ್
ಹೊಂಡಾ ಬ್ರಿಯೊ ಸೆಡಾನ್ ಆಕರ್ಷಕ ಟೀಸರ್ ಚಿತ್ರ ಅನಾವರಣ


Click it and Unblock the Notifications








