ಸದ್ಯದಲ್ಲೇ ನಿರೀಕ್ಷಿಸಿ ಹೊಂಡಾ ಸಿಆರ್-ವಿ
ಜಾಗತಿಕವಾಗಿ ಅನೇಕ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿರುವ ಮುಂದುವರಿದ ಭಾಗವೆಂಬಂತೆ ಹೊಂಡಾ ಸಿಆರ್-ವಿ ಬಹುನಿರೀಕ್ಷಿತ ಕಾರು ಪ್ರಸಕ್ತ ಸಾಲಿನಲ್ಲಿ ಭಾರತಕ್ಕೂ ಲಗ್ಗೆಯಿಡಲು ಸಜ್ಜಾಗುತ್ತಿದೆ. ಈ ಬಗ್ಗೆ ಹೊಂಡಾ ಇಂಡಿಯಾ ವೆಬ್‌ಸೈಟ್‌ನಲ್ಲಿ ಅಧಿಕೃತವಾಗಿ ಟೀಸರ್ ಚಿತ್ರ ಬಿಡುಗಡೆಗೊಳಿಸಲಾಗಿದೆ.
ಈ ಹಿಂದಿನ ವರ್ಷನ್‌ಗಳನ್ನು ಹೋಲಿಸಿದರೆ ಹೊಸ 2013 ಹೊಂಡಾ ಸಿಆರ್-ವಿ ಕಾರಿನಲ್ಲಿ ದೊಡ್ಡ ಪ್ರಮಾಣದ ವ್ಯತ್ಯಾಸ ತರಲಾಗಿಲ್ಲ. ಹಾಗಿದ್ದರೂ ಡಿಸೈನ್ ವಿಷಯದಲ್ಲಿ ಗ್ರಾಹಕರಿಗೆ ಹೊಸ ಅನುಭವ ನೀಡಲಿದೆ. ಇನ್ನುತಾಂತ್ರಿಕತೆ ಪರಿಗಣಿಸಿದರೆ ಈ ಹಿಂದಿನ ಪೆಟ್ರೋಲ್ ಎಂಜಿನ್‌ಗಳನ್ನು ಉಳಿಸಿಕೊಳ್ಳಲಾಗಿದೆ.
ಡೀಸೆಲ್ ಎಂಜಿನ್ ಆಗಮನವಾಗದಿರುವುದು ಕಾರು ಪ್ರಿಯರ ಬೇಸರಕ್ಕೆ ಕಾರಣವಾಗಿದೆ. ಹೊಸ 2013 ಹೊಂಡಾ ಸಿಆರ್-ವಿ ಕಾರಿನಲ್ಲಿ 2 ಲೀಟರ್ ಫೋರ್ ಸಿಲಿಂಡರ್ ಐ-ವಿಟೆಕ್ ( i-VTEC) ಎಂಜಿನ್ ಬಳಕೆಯಾಗಲಿದ್ದು, ಇದು 190 ಎನ್‌ಎಂ ಟರ್ಕ್ಯೂನಲ್ಲಿ 153 ಬಿಎಚ್‌ಪಿ ಪವರ್ ಉತ್ಪಾದಿಸಲಿದೆ. ಅಂತೆಯೇ ಹೊಸ ಕಾರು ಫೈವ್ ಸ್ಪೀಡ್ ಮ್ಯಾನುವಲ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನಲ್ಲಿ ಲಭ್ಯವಿರಲಿದೆ.
ಡೀಸೆಲ್ ಎಂಜಿನ್ ಕೊರತೆಯಿಂದಾಗಿಯೇ ತಮ್ಮ ಸಮೀಪದ ಸ್ಪರ್ಧಾಳುಗಳಾದ ಷೆವರ್ಲೆ ಕಾಪ್ಟಿವಾ, ಫೋರ್ಡ್ ಎಂಡೋವರ್ ಹಾಗೂ ಟೊಯೊಟಾ ಫೋರ್ಚುನರ್‌ಗಳಿಂದ ಹೊಂಡಾ ಹಿನ್ನಡೆ ಅನುಭವಿಸಿತ್ತು. ಪ್ರಸ್ತುತ ಪೆಟ್ರೋಲ್ ಕಾರು ಸ್ವಾಗತಾರ್ಹವಾದರೂ ಡೀಸೆಲ್ ಕಾರಿನ ಆಗಮನಕ್ಕಾಗಿ ಇನ್ನು ಸ್ವಲ್ಪ ಸಮಯ ಕಾಯಬೇಕಾಗಿದೆ.
ನಿಮ್ಮ ಮಾಹಿತಿಗಾಗಿ, ಹೊಂಡಾ ಡೀಸೆಲ್ ಕಾರಾದ ಬ್ರಿಯೊ ಕಾಂಪಾಕ್ಟ್ ಸೆಡಾನ್ ಮುಂದಿನ ವರ್ಷದಲ್ಲಿ ದೇಶದ ಮಾರುಕಟ್ಟೆಗೆ ಅಪ್ಪಳಿಸಲಿದೆ.
ಇನ್ನು ದರದ ಬಗ್ಗೆ ಮಾತನಾಡಿದರೆ ಹೊಂಡಾ ಸಿಆರ್-ವಿ ದರ ಭಾರತೀಯ ರುಪಾಯಿ ಪ್ರಕಾರ 28 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ. ಖಂಡಿತವಾಗಿಯೂ ಡೀಸೆಲ್ ಎಂಜಿನ್ ಆಯ್ಕೆ ಇಲ್ಲದರ ಹೊರತಾಗಿಯೂ ದರ ಸ್ವಲ್ಪ ದುಬಾರಿಯಾಗಿಯೇ ಕಾಣಿಸುತ್ತಿದೆ. ಆದರೆ ಗುಣಮಟ್ಟ ಹಾಗೂ ನಿರ್ವಹಣೆಗೆ ಕಂಪನಿ ಹೆಚ್ಚು ಪ್ರಾಮುಖ್ಯತೆ ನೀಡಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

2013 ಹೊಂಡಾ ಸಿಆರ್-ವಿ
ನೂತನ 2013 ಹೊಂಡಾ ಸಿಆರ್-ವಿ (CR-V) ಕಾರು ಭಾರತೀಯ ಮಾರುಕಟ್ಟೆಯನ್ನು ಸದ್ಯದಲ್ಲೇ ತಲುಪಲಿದೆ. ಇದು ಕಾರು ಪ್ರಿಯರ ಕುತೂಹಲಕ್ಕೆ ಕಾರಣವಾಗಿದೆ.

2013 ಹೊಂಡಾ ಸಿಆರ್-ವಿ
ನೂತನ ಹೊಂಡಾ ಸಿಆರ್-ವಿ ಕಾರು ಪೆಟ್ರೋಲ್ ಆವೃತ್ತಿಯಲ್ಲಿ ಮಾತ್ರ ಆಗಮಿಸಿರುವುದು ನಿರಾಸೆಗೆ ಕಾರಣವಾಗಿದೆ.

2013 ಹೊಂಡಾ ಸಿಆರ್-ವಿ
ಈ ಹಿಂದಿನ ವರ್ಷನ್‌ಗಳಲ್ಲಿ ಕಂಡುಬಂದಿರುವ ಮೂಲಭೂತ ವಿನ್ಯಾಸಗಳನ್ನು ಹೊಸ ಸಿಆರ್‌ವಿ ಕಾರಿನಲ್ಲೂ ಉಳಿಸಿಕೊಳ್ಳಲಾಗಿದೆ.

2013 ಹೊಂಡಾ ಸಿಆರ್-ವಿ
ಈಗಾಗಲೇ ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾಗಿರುವ ಹೊಂಡಾ ಸಿಆರ್-ವಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಗಿಟ್ಟಿಸುವಲ್ಲಿ ಯಶಸ್ವಿಯಾಗಿದೆ.

2013 ಹೊಂಡಾ ಸಿಆರ್-ವಿ
ಕ್ರಿಸ್ಮಸ್ ಟ್ರಿ ರಿಯರ್ ಲೈಟ್ ಡಿಸೈನ್ ಅನ್ನು ಹೊಸ ಸಿಆರ್-ವಿ ಕಾರಿನಲ್ಲೂ ಕಾಯ್ದುಕೊಳ್ಳಲಾಗಿದೆ.

2013 ಹೊಂಡಾ ಸಿಆರ್-ವಿ
ಆದರೆ ಹೊಸ ಸಿಆರ್-ವಿ ಕಾರಿನ ಇಂಟಿರಿಯರ್ ಭಾಗಗಳನ್ನು ಪರಿಷ್ಕೃತಗೊಳಿಸಲಾಗಿದೆ. ಇದು ಕಾರು ಖರೀದಿ ಗ್ರಾಹಕರಿಗೆ ಹೊಸ ಅನುಭವ ನೀಡಲಿದೆ.

2013 ಹೊಂಡಾ ಸಿಆರ್-ವಿ
ಉತ್ತಮ ಸ್ಥಳಾವಕಾಶ, ಆರಾಮದಾಯಕ ಹಾಗೂ ಐಷಾರಾಮಿ ಪಯಣವನ್ನು ಹೊಂಡಾ ಸಿಆರ್-ವಿ ಪ್ರತಿಪಾದಿಸುತ್ತಿದೆ.

2013 ಹೊಂಡಾ ಸಿಆರ್-ವಿ
ಇದೀಗ ಬಿಡುಗಡೆಗೊಂಡಿರುವ ಟೀಸರ್ ಚಿತ್ರ ನಿಮ್ಮ ಮನ ಸೆಳೆದಿದ್ದರೆ ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿರಿ.


Click it and Unblock the Notifications








