2013 ಹ್ಯಾಚ್‌ಬ್ಯಾಕ್, ಸೆಡಾನ್ ಕಾರುಗಳ ಪಟ್ಟಿ

By Nagaraja

ದೇಶದ ಕಾರು ಮಾರುಕಟ್ಟೆಯಲ್ಲಿ ಹ್ಯಾಚ್‌ಬ್ಯಾಕ್ ಕಾರುಗಳೇ ಅಧಿಪತ್ಯ ಸಾಧಿಸಿವೆ. ಕಾರು ತಯಾರಕರು ಎಸ್‌ಯುವಿ ಹಾಗೂ ದೊಡ್ಡ ಸೆಡಾನ್ ಕಾರುಗಳನ್ನು ಲಾಂಚ್ ಮಾಡಿದರೂ ಹ್ಯಾಚ್‌ಬ್ಯಾಕ್ ಹಾಗೂ ಕಾಂಪಾಕ್ಟ್ ಸೆಡಾನ್ ಕಾರುಗಳ ಬೇಡಿಕೆಗೆ ಯಾವುದೇ ಕುತ್ತು ಸಂಭವಿಸಿಲ್ಲ.

2013ನೇ ಸಾಲು ದೇಶದ ಆಟೋಮೊಬೈಲ್ ಜಗತ್ತಿನ ಪಾಲಿಗೆ ಮಹತ್ವವೆನಿಸಲಿದೆ. ಯಾಕೆಂದರೆ ಈ ಅವಧಿಯಲ್ಲಿ ಹಲವು ಕಂಪನಿಗಳು ಸ್ಪರ್ಧಾತ್ಮಕ ದರದಲ್ಲಿ ಹಲವು ಮಾದರಿಯ ಕಾರುಗಳನ್ನು ಗ್ರಾಹಕರಿಗೆ ಪರಿಚಯಿಸಲಿದೆ. ಹಾಗಿದ್ದರೆ ಬನ್ನಿ ಮುಂಬರುವ ದಿನಗಳಲ್ಲಿ ದೇಶದ ರಸ್ತೆಗೆ ಆಗಮಿಸಲಿರುವ ಹ್ಯಾಚ್‌ಬ್ಯಾಕ್ ಹಾಗೂ ಸೆಡಾನ್ ಕಾರುಗಳ ಪಟ್ಟಿ ನೋಡೋಣ.

ಟಾಟಾ ನ್ಯಾನೋ ಸಿಎನ್‌ಜಿ

ಟಾಟಾ ನ್ಯಾನೋ ಸಿಎನ್‌ಜಿ

ದೇಶದ ಮಾರುಕಟ್ಟೆಗೆ ಅತಿ ಅಗ್ಗದ ನ್ಯಾನೋ ಕಾರು ಪ್ರದರ್ಶಿಸಿದ ಟಾಟಾ ಮೋಟಾರ್ಸ್ ಇದೀಗ ಸಿಎನ್‌ಜಿ ವರ್ಷನ್ ಬಿಡುಗಡೆ ಮಾಡಲಿದೆ. 2013ನೇ ಸಾಲಿನ ಮೊದಲಾರ್ಧದಲ್ಲಿ ಟಾಟಾ ನ್ಯಾನೋ ಸಿಎನ್‌ಜಿ ಆಗಮಿಸುವ ನಿರೀಕ್ಷೆಯಿದೆ. ಈ ಮೂಲಕ ನ್ಯಾನೋ ಮತ್ತಷ್ಟು ಜನಪ್ರಿಯತೆ ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ.

ನಿರೀಕ್ಷಿತ ದರ: 2ರಿಂದ 3 ಲಕ್ಷ ರು.

ಹೊಂಡಾ ಅಮೇಜ್ ಸೆಡಾನ್

ಹೊಂಡಾ ಅಮೇಜ್ ಸೆಡಾನ್

ಹೊಂಡಾ ಅಮೇಜ್ ಸೆಡಾನ್ ಕಾರು ಸಹ 2013ನೇ ಸಾಲಿನ ಮೊದಲಾರ್ಧದಲ್ಲಿ ಬಿಡುಗಡೆಯಾಗಲಿದೆ. ದೇಶದಲ್ಲಿ ಡೀಸೆಲ್ ಆವೃತ್ತಿಯಲ್ಲಿ ಲಭ್ಯವಾಗಲಿರುವ ಹೊಂಡಾದ ಮೊದಲ ಕಾರು ಅಮೇಜ್ ಆಗಿರಲಿದೆ. ಪ್ರಸ್ತುತ ದೇಶದಲ್ಲಿ ಡೀಸೆಲ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಹೊಂಡಾ ಅಮೇಜ್ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುವ ನಿರೀಕ್ಷೆಯಿದೆ.

ನಿರೀಕ್ಷಿತ ದರ: 7-8 ಲಕ್ಷ ರು.

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್

ಪ್ರೀಮಿಯಂ ಕಾರುಗಳ ಮಾರಾಟದ ಪೈಕಿ ಮೂರನೇ ಸ್ಥಾನಕ್ಕೆ ಕುಸಿದಿದ್ದ ಮರ್ಸಿಡಿಸ್ ಬೆಂಝ್ ಪ್ರಸಕ್ತ ಸಾಲಿನಲ್ಲಿ ದೇಶದ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡಿದೆ. ಅಲ್ಲದೆ ಎ-ಕ್ಲಾಸ್ ಹ್ಯಾಚ್‌ಬ್ಯಾಕ್ ಕಾರು ಲಾಂಚ್ ಮಾಡುವ ಯೋಜನೆ ಹೊಂದಿದೆ.

ನಿರೀಕ್ಷಿತ ದರ: 15-20 ಲಕ್ಷ ರು.

ಬಿಎಂಡಬ್ಲ್ಯು 1-ಸಿರೀಸ್

ಬಿಎಂಡಬ್ಲ್ಯು 1-ಸಿರೀಸ್

ಜಾಗತಿಕವಾಗಿ ಮರ್ಸಿಡಿಸ್ ಬೆಂಝ್ ಹಾಗೂ ಬಿಎಂಡಬ್ಲ್ಯು ಪ್ರಬಲ ಪ್ರತಿಸ್ಪರ್ಧಿಯಾಗಿದ್ದಾಲೆ. ಇದರಂತೆ ಬಿಎಂಡಬ್ಲ್ಯು ಕೂಡಾ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರಾದ 1-ಸಿರೀಸ್ ಬಿಡುಗಡೆಗೊಳಿಸಲಿದೆ. 3 ಸಿರೀಸ್ ಪ್ಲಾಟ್ ಫಾರ್ಮ್ ನಿರ್ಮಾಣವಾಗಲಿರುವ ಬಿಎಂಡಬ್ಲ್ಯು 1-ಸಿರೀಸ್ ಸುಗಮ ಚಾಲನೆಗೆ ನೆರವಾಗಲಿದೆ.

ನಿರೀಕ್ಷಿತ ದರ: 15-20 ಲಕ್ಷ ರು.

ಷೆವರ್ಲೆ ಸೈಲ್ ಸೆಡಾನ್

ಷೆವರ್ಲೆ ಸೈಲ್ ಸೆಡಾನ್

2013ನೇ ಸಾಲಿನಲ್ಲಿ ಅಮೆರಿಕ ಕಾರು ತಯಾರಕರಿಂದ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಾರು ಷೆವರ್ಲೆ ಸೈಲ್ ಸೆಡಾನ್ ಆಗಿದೆ. ಇದು ದೇಶದ ನಂ.1 ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿಯ ಸ್ವಿಫ್ಟ್ ಡಿಜೈರ್ ಹಾಗೂ ಟೊಯೊಟಾದ ಎಟಿಯಾಸ್ ಮತ್ತು ಮಹೀಂದ್ರದ ವೆರಿಟೊಗೆ ಪ್ರಬಲ ಪೈಪೋಟಿ ಒಡ್ಡಲಿದೆ.

ನಿರೀಕ್ಷಿತ ದರ: 7 ಲಕ್ಷ ರು.

ಟಾಟಾ ನ್ಯಾನೋ ಡೀಸೆಲ್

ಟಾಟಾ ನ್ಯಾನೋ ಡೀಸೆಲ್

ಇದು ವಿಶ್ವದ ಅತಿ ಅಗ್ಗದ ಕಾರಾದ ನ್ಯಾನೋದಿಂದ ಬಿಡುಗಡೆಯಾಗಲಿರುವ ಹೊಸ ಆವೃತ್ತಿಯಾಗಿದೆ. ಕಾರಿನ ವಿನ್ಯಾಸದಲ್ಲಿ ಹೆಚ್ಚು ಬದಲಾವಣೆ ಇಲ್ಲದಿದ್ದರೂ ನೂತನ ಡೀಸೆಲ್ ಎಂಜಿನ್ ಮೈಲೇಜ್ ಹಾಗೂ ದರದ ವಿಚಾರದಲ್ಲಿ ಕುತೂಹಲವೆನಿಸಿದೆ.

ನಿರೀಕ್ಷಿತ ದರ: 3 ಲಕ್ಷ ರು.

ಮಹೀಂದ್ರ ವೆರಿಟೊ ಸಿಎಸ್

ಮಹೀಂದ್ರ ವೆರಿಟೊ ಸಿಎಸ್

ಕಾಂಪಾಕ್ಟ್ ಸೆಡಾನ್ ಕಾರು ತಯಾರಕರ ಪಾಲಿಗೆ ಆಕರ್ಷಕವೆನಿಸಲಿದೆ. ಇದೇ ಸಾಲಿಗೆ ಮಹೀಂದ್ರ ವೆರಿಟೊ ಕಾಂಪಾಕ್ಟ್ ಸೆಡಾನ್ ಸೇರಿದೆ. ಸ್ಪರ್ಧಾತ್ಮಕ ದರದಲ್ಲಿ ಆಗಮಿಸಲಿರುವ ಮಹೀಂದ್ರ ವೆರಿಟೊ ಮಾರುತಿ ಸ್ವಿಫ್ಟ್ ಡಿಜೈರ್ ಮಾರುಕಟ್ಟೆ ವ್ಯಾಪ್ತಿಯನ್ನು ಸೆಳೆಯುವ ಹುನ್ನಾರ ಹೊಂದಿದೆ.

ನಿರೀಕ್ಷಿತ ದರ: 5 ಲಕ್ಷ ರು.

ವಾಗನ್ ಆರ್

ವಾಗನ್ ಆರ್

ದೇಶದ ನಂ. 1 ಕಾರು ತಯಾರಕ ಕಂಪನಿ ಮಾರುತಿ ಸುಜುಕಿಯ ವಾಗನ್ ಆರ್ ಅಪ್‌ಗ್ರೇಡ್ ವರ್ಷನ್ ಕಾರು ಪ್ರಿಯರ ಕುತೂಹಲಕ್ಕೆ ಕಾರಣವಾಗಿದೆ. ಜಾಗತಿಕವಾಗಿ ಬಿಡುಗಡೆಯಾಗಲಿರುವ ಈ ಕಾಂಪಾಕ್ಟ್ ವರ್ಷನ್ ಕಾರು ಟೊಯೊಟಾ ಆಟೊ ಸಲೊನ್‌ನಲ್ಲಿ ಅನಾವರಣವಾಗಲಿದೆ.

ನಿರೀಕ್ಷಿತ ದರ: 4 ಲಕ್ಷ ರು.

More from DriveSpark

Article Published On: Monday, January 7, 2013, 9:54 [IST]
English summary
The Indian car market is dominated by hatchbacks. Even as carmakers launch compact SUVs and bigger sedans, its is the hatchbacks and compact sedans that bring in the volumes for carmakers. The Indian automobile sector saw a topsy turvy year in 2012 and is hoping to see a better one in 2013.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+