ಮಹಿಳೆಯರ ಅಚ್ಚುಮೆಚ್ಚಿನ ಟಾಪ್ 5 ಸ್ಕೂಟರ್

ಆಟೋಮೊಬೈಲ್ ಜಗತ್ತಿನ ಕೆಲವು ಅಗ್ರಮಾನ್ಯ ವಿಚಾರಗಳ ಬಗ್ಗೆ ನಮ್ಮ ಡ್ರೈವ್ ಸ್ಪಾರ್ಕ್ ತಂಡವು ಮಾಹಿತಿ ನೀಡುವ ಪ್ರಯತ್ನ ಮಾಡುತ್ತಲೇ ಬಂದಿವೆ. ಇದೀಗ ಹೆಣ್ಣು ಮಕ್ಕಳ ಅಚ್ಚುಮೆಚ್ಚಿನ ಟಾಪ್ 5 ಸ್ಕೂಟರ್‌ಗಳ ಬಗ್ಗೆ ಮಾಹಿತಿ ಕೊಡಲಿದ್ದೇವೆ.

ಖಂಡಿತವಾಗಿಯೂ ಸ್ಕೂಟರ್ ಇಷ್ಟಪಡುವ ಮಹಿಳೆಯರು ಇದನ್ನು ಲೈಕ್ ಮಾಡುವ ಭರವಸೆಯನ್ನು ಡ್ರೈವ್ ಸ್ಪಾರ್ಕ್ ಹೊಂದಿದೆ. ಉದ್ಯೋಗಸ್ಥ ಮಹಿಳೆಯರ ಹಾಗೂ ಕಾಲೇಜು ಹುಡುಗಿಯರ ಅಚ್ಚುಮೆಚ್ಚಿನ ವಾಹನ ಸ್ಕೂಟರ್ ಆಗಿದೆ. ಹಾಗೆಯೇ ತಮ್ಮ ದೈನಂದಿನ ಜೀವನದಲ್ಲಿ ಕಚೇರಿಗಳಿಗೆ ತೆರಳಲು ಹೆಚ್ಚಾಗಿ ಸ್ಕೂಟರ್‌ಗಳನ್ನೇ ಬಳಸುತ್ತಾರೆ.

ಇದನ್ನೇ ಅಸ್ತ್ರವಾಗಿರಿಸಿರುವ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳು ವಿವಿಧ ಶೈಲಿಗಳ ಸ್ಕೂಟರ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿವೆ. ಇದರಿಂದಾಗಿ ಉತ್ತಮ ಗುಣಮಟ್ಟವನ್ನು ತಿಳಿಯುವುದು ಕಷ್ಟಕರವಾಗಿ ಬಿಟ್ಟಿದೆ.

ಈ ನಿಟ್ಟಿನಲ್ಲಿ ಟಾಪ್ 5 ಸ್ಕೂಟರ್‌ಗಳ ಪಟ್ಟಿ ಖಂಡಿತ ನಿಮ್ಮ ನೆರವಿಗೆ ಬರಲಿದೆ. ಡ್ರೈವಿಂಗ್ ಸುಲಭವಾಗಿದ್ದರಿಂದ ಹಾಗೂ ಹೊಂದಾಣಿಕೆ ಸಿಟ್ಟಿಂಗ್ ವ್ಯವಸ್ಥೆಯಿರುವುದರಿಂದ ಸ್ಕೂಟರ್‌ಗಳು ಮಹಿಳೆಯರಿಗೆ ಹೆಚ್ಚು ಹೇಳಿ ಮಾಡಿಸಿದಂತಿದೆ.

ಟಿವಿಎಸ್ ಸ್ಕೂಟಿ ಸ್ಟ್ರೀಟ್

ಟಿವಿಎಸ್ ಸ್ಕೂಟಿ ಸ್ಟ್ರೀಟ್

ದೇಶದ ಸ್ಕೂಟರ್ ತಯಾರಕ ಕಂಪನಿಗಳಲ್ಲಿ ಮುಂಚೂಣಿಯಲ್ಲಿರುವ ಟಿವಿಎಸ್‌ನ ಸ್ಕೂಟಿ ಬ್ರಾಂಡ್ ಅತಿ ಜನಪ್ರಿಯವೆನಿಸಿದೆ. ಸುಲಭವಾಗಿ ಹ್ಯಾಂಡ್ಲಿಂಗ್ ಮಾಡಬಹುದಾಗಿದ್ದರಿಂದ ಹೆಣ್ಣು ಮಕ್ಕಳು ಟಿವಿಎಸ್ ಸ್ಕೂಟಿ ಸ್ಟ್ರೀಟ್ ಸ್ಕೂಟರನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. 90 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಸ್ಕೂಟಿ ಸ್ಪರ್ಧಾತ್ಮಕ ದರದಲ್ಲಿ ಅಂದರೆ 36.000 ರು.ಗಳಿಗೆ ಗ್ರಾಹಕರ ಕೈಸೇರುತ್ತದೆ.

ಟಿವಿಎಸ್ ಸ್ಕೂಟಿ ಪೆಪ್

ಟಿವಿಎಸ್ ಸ್ಕೂಟಿ ಪೆಪ್

ಇದು ಟಿವಿಎಸ್‌ನಿಂದಲೇ ನಿರ್ಮಾಣಗೊಂಡಿರುವ ಮತ್ತೊಂದು ಜನಪ್ರಿಯ ಸ್ಕೂಟರ್ ಆಗಿದೆ. ಕರೀನಾ ಕಪೂರ್ ಅವರಂತಹ ಸೆಕ್ಸಿ ಬೆಬೋಗಳನ್ನು ಪ್ರಚಾರ ರಾಯಭಾರಿಯನ್ನಾಗಿ ನೇಮಕ ಮಾಡುವ ಮೂಲಕ ಟಿವಿಎಸ್ ಪೆಪ್‌ಗೆ ಭಾರಿ ಪ್ರಚಾರವನ್ನೇ ನೀಡಿತ್ತು. ಸ್ಕೂಟರ್‌ಗಳ ಪೈಕಿ ಅತಿ ಜನಪ್ರಿಯವಾಗಿರುವ ಪೆಪ್ ಕೂಡಾ ಸ್ಕೂಟಿ ಸ್ಟ್ರೀಕ್ ತರಹನೇ 90 ಸಿಸಿ ಎಂಜಿನ್ ಹೊಂದಿದೆ. ಆದರೆ ಶೈಲಿಯಲ್ಲಿ ವಿಭಿನ್ನವಾಗಿರುವ ಪೆಪ್‌ಗೆ ಅನುಷ್ಕಾ ಶರ್ಮಾ ರೂಪದಲ್ಲಿ ನೂತನ ಬ್ರಾಂಡ್ ಅಂಬಾಸಿಡರ್ ನೇಮಕಗೊಂಡಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ ಸ್ಕೂಟಿ ಪೆಪ್‌ಗೆ 41000 ರು.ಗಳಿವೆ.

ಯಮಹಾ ರೇ

ಯಮಹಾ ರೇ

ಜಪಾನ್ ಮೂಲಕ ಯಮಹಾ ಕಂಪನಿಯಿಂದ ದೇಶದಲ್ಲಿ ಬಿಡುಗಡೆಗೊಂಡ ಮೊದಲ ಸ್ಕೂಟರ್ ಯಮಹಾ ರೇ ಆಗಿದೆ. ವಿಶೇಷವಾಗಿಯೂ ಹೆಣ್ಣು ಮಕ್ಕಳಿಗಾಗಿ ರೂಪಿಸಲಾಗಿರುವ ಯಮಹಾ ರೇ ಎಕ್ಸ್ ಶೋ ದರ 46000 ರು.ಗಳಾಗಿವೆ. ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಯಮಹಾ ರೇಯ ಪ್ರಧಾನ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.

ಹೊಂಡಾ ಡಿಯೊ

ಹೊಂಡಾ ಡಿಯೊ

ಹೊಂಡಾ ಡಿಯೊ ಹೆಣ್ಣು ಮಕ್ಕಳು ಸೇರಿದಂತೆ ಹುಡುಗರಲ್ಲೂ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿದೆ. ವಿಶ್ವಾಸಾರ್ಹ ನಿರ್ವಹಣೆ ಹಾಗೂ ವಿಶೇಷ ವಿನ್ಯಾಸಕ್ಕಾಗಿ ಹೊಂಡಾ ಡಿಯೊ ಹೆಚ್ಚಿನ ಗಮನ ಸೆಳೆದಿದೆ. 110 ಸಿಸಿ ಅಪ್‌ಗ್ರೇಡ್ ಎಂಜಿನ್ ಹೊಂದಿರುವ ಹೊಂಡಾ ಡಿಯೊ ಎಕ್ಸ್ ಶೋ ರೂಂ ದರ 46000 ರು.ಗಳಾಗಿವೆ.

ಮಹೀಂದ್ರ ಫ್ಲೈಟ್

ಮಹೀಂದ್ರ ಫ್ಲೈಟ್

ಹೆಣ್ಣು ಮಕ್ಕಳಿಗಾಗಿ ರಚಿಸಲಾದ ಪವರ್‌ಫುಲ್ ಸ್ಕೂಟರ್‌ಗಳ ಪೈಕಿ ಮಹೀಂದ್ರ ಫ್ಲೈಟ್ ಒಂದಾಗಿದೆ. 125 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಮಹೀಂದ್ರ ಫ್ಲೈಟ್ 8 ಬಿಎಚ್‌ಪಿ ಉತ್ಪಾದಿಸಲಿದೆ. ಐದು ಪೆಪ್ಪಿ ಕಲರ್ ಆಯ್ಕೆಗಳಲ್ಲಿ ಲಭ್ಯವಿರುವ ಮಹೀಂದ್ರ ಫ್ಲೈಟ್ ದೆಹಲಿ ಎಕ್ಸ್ ಶೋ ರೂಂ ದರ 41.200 ರು.ಗಳಾಗಿವೆ.

ಮಹಿಳೆಯರ ಅಚ್ಚುಮೆಚ್ಚಿನ ಟಾಪ್ 5 ಸ್ಕೂಟರ್

ಮೇಲೆ ಕೊಡಲಾದ ಎಲ್ಲ ಐದು ಸ್ಕೂಟರ್‌ಗಳು ಮಹಿಳೆಯರ ಪ್ರೀತಿಗೆ ಪಾತ್ರವಾಗಿದೆ.

More from DriveSpark

Article Published On: Wednesday, December 19, 2012, 16:40 [IST]
English summary
More and more manufacturers are trying to attract women scooter by launching models that look smooth, are easy to ride and handle. Yamaha is the latest company to launch its scooters in India through the Ray. Drivespark takes a look at the top 5 scooters made for women
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+