ಸೆಕೆಂಡ್ ಹ್ಯಾಂಡ್ ಮಾರ್ಕೆಟ್ನಲ್ಲಿ ಯಾವ ಕಾರ್ ಬೆಸ್ಟ್?

ಕಾರು ಖರೀದಿ ಹೆಚ್ಚಿನ ಜನರ ಕನಸು. ಆದರೆ ಎಲ್ಲರಿಗೂ ಹೊಸ ಕಾರು ಖರೀದಿಸುವ ಆರ್ಥಿಕ ಶಕ್ತಿ ಇರುವುದಿಲ್ಲ. ಹಣವಿದ್ದರೂ ಕೆಲವರು ಹೊಸ ಕಾರುಗಳನ್ನು ಖರೀದಿಸಲು ಇಚ್ಚಿಸುವುದಿಲ್ಲ. ಹೆಚ್ಚಿನವರು ಸೆಕೆಂಡ್ ಹ್ಯಾಂಡ್ ವಾಹನಗಳ ಖರೀದಿಗೆ ಹೆಚ್ಚಿನ ಒತ್ತು ನೀಡುತ್ತಾರೆ.

ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಮಾರುತಿ 800ನಿಂದ ಫೆರಾರಿ ಕಾರಿನವರೆಗೆ ಎಲ್ಲಾ ನಮೂನೆಯ ವಾಹನಗಳು ದೊರಕುತ್ತವೆ. ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಯಾವ ಕಾರು ಬೆಸ್ಟ್ ಎಂಬ ಪ್ರಶ್ನೆಗೆ ಹೆಚ್ಚಿನ ಡೀಲರುಗಳು "ಹೋಂಡಾ ಸಿಟಿ" ಎನ್ನುತ್ತಾರೆ. ಇದರ ನಂತರದ ಸ್ಥಾನವನ್ನು ಫೋರ್ಡ್ ಫಿಯೆಸ್ಟ್ ಕ್ಲಾಸಿಕ್ ಗೆ ಕೊಡುತ್ತಾರೆ.

2004ರಲ್ಲಿ ಹೋಂಡಾ ಕಂಪನಿಯು ಸಿಟಿ ಎಂಬ ಉದ್ದವಾದ ಕಾರನ್ನು ಪರಿಚಯಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಎರಡನೇ ತಲೆಮಾರಿನ ಹೋಂಡಾ ಸಿಟಿ 1.5 ಲೀಟರಿನ ಐಡಿಎಸ್ಐ ಎಂಜಿನ್ ಹೊಂದಿದೆ. ಇದು ಸುಮಾರು 77 ಅಶ್ವಶಕ್ತಿ ನೀಡುತ್ತದೆ. ನಂತರ 2005ರಲ್ಲಿ ವಿಟೆಕ್ ಎಂಜಿನಿನ 100 ಅಶ್ವಶಕ್ತಿಯ ಸಿಟಿ ಆವೃತ್ತಿಯನ್ನು ಕಂಪನಿ ಪರಿಚಯಿಸಿತ್ತು.

ಹೋಂಡಾ ಸಿಟಿ ಕಾರಿನ ರೈಡಿಂಗ್ ಗುಣಮಟ್ಟ ಅತ್ಯುತ್ತಮವಾಗಿದೆ. ಹೋಂಡಾ ಸಿಟಿ ಕಾರಿನೊಳಗಿನ ಸ್ಥಳಾವಕಾಶ, ಸೀಟುಗಳು ಅತ್ಯುತ್ತಮವಾಗಿದ್ದು, ಆರಾಮವಾದ ಡ್ರೈವಿಂಗಿಗೆ ಪೂರಕವಾಗಿದೆ. ಲಗೇಜ್ ಸ್ಥಳಾವಕಾಶವಂತೂ ಹೇರಳವಾಗಿದೆ.

ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಹೋಂಡಾ ಸಿಟಿ ಖರೀದಿಸುವಿರಾದರೆ ಆದಷ್ಟು ವಿಟೆಕ್ ಎಂಜಿನ್ ಕಾರಿಗೆ ಹೆಚ್ಚಿನ ಗಮನ ನೀಡಿ. ಯಾಕೆಂದರೆ ಇದು ಹಳೆಯ ಆವೃತ್ತಿಗಿಂತ ಹೆಚ್ಚು ಹಾರ್ಸ್ ಪವರ್ ನೀಡುತ್ತದೆ. ಈ ಆವೃತ್ತಿಯ ಡಿಸ್ಕ್ ಬ್ರೇಕ್ ಕೂಡ ಅತ್ಯುತ್ತಮವಾಗಿದೆ. ಅತ್ಯುತ್ತಮ ಮೈಲೇಜ್ ಕಾರಣದಿಂದ ಇದರ ಎಂಜಿನ್ ಮೇಲೆ ಭರವಸೆ ಇಡಬಹುದು. ಸುಮಾರು 50 ಸಾವಿರ ಕಿ.ಮೀ. ಪ್ರಯಾಣದ ನಂತರ ಕ್ಲಚ್ ಪರೀಕ್ಷೆ ಮಾಡಿಸಿ.

ಈಗ ಸೆಕೆಂಡ್ ಹ್ಯಾಂಡ್ ವಾಹನ ಮಾರುಕಟ್ಟೆಯಲ್ಲಿ ಹೋಂಡಾ ಸಿಟಿಗೆ ಹತ್ತಿರದ ಸ್ಪರ್ಧಿಯೆಂದರೆ ಫೋರ್ಡ್ ಫಿಯೆಸ್ಟಾ ಕ್ಲಾಸಿಕ್. ಇದು ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಆವೃತ್ತಿಗಳಲ್ಲೂ ದೊರಕುತ್ತದೆ. ಹೀಗಾಗಿ ಹೋಂಡಾ ಸಿಟಿ ಮತ್ತು ಫಿಯೆಸ್ಟಾ ಕ್ಲಾಸಿಕ್ ಕಾರುಗಳಲ್ಲಿ ನಿಮಗೆ ಬೇಕಾದನ್ನು ಆಯ್ಕೆ ಮಾಡಿಕೊಳ್ಳಬಹುದು.

ಸೆಕಂಡ್ ಹ್ಯಾಂಡ್ ವಾಹನ ಮಾರುಕಟ್ಟೆಯಲ್ಲಿ 2006ರ ಸಿಟಿ ಮಾಡೆಲ್ ಮ್ಯಾನುಯಲ್ ಗೇರ್ ಕಾರು ಸುಮಾರು 2.53 ಲಕ್ಷ ರು.ಗೆ, ವಿಟೆಕ್ ಕಾರಿಗೆ 2.83 ಲಕ್ಷ ರು. ಮತ್ತು ಸಿವಿಟಿ ಆವೃತ್ತಿಗೆ ಸುಮಾರು 2.80 ಲಕ್ಷ ರುಪಾಯಿ ಇದೆ.

2007ರ ಮಾಡೆಲಿನ ಹೋಂಡಾ ಸಿಟಿ ಮ್ಯಾನುಯಲ್ ಕಾರಿಗೆ 2.92 ಲಕ್ಷ ರು., ವಿಟೆಕ್ ಆವೃತ್ತಿಗೆ 3.27 ಲಕ್ಷ ರು., ಮತ್ತು ಸಿವಿಟಿ ಆವೃತ್ತಿಗೆ ಸುಮಾರು 3.24 ಲಕ್ಷ ರು. ಇರಲಿದೆ. 2008ರ ಮಾಡೆಲ್ ಮ್ಯಾನುಯಲ್ ಗೇರ್ ಸಿಟಿ ಕಾರಿಗೆ 3.40 ಲಕ್ಷ ರು., ವಿಟೆಕ್ ಆಯ್ಕೆಗೆ 3.81 ಲಕ್ಷ ರು., ಸಿವಿಟಿ ಆಯ್ಕೆಗೆ ಸುಮಾರು 3.76 ಲಕ್ಷ ರು. ಆಸುಪಾಸಿನಲ್ಲಿ ದೊರಕಬಹುದು.

ನಿಮಗೆ ಹೋಂಡಾ ಸಿಟಿ ಸೆಕೆಂಡ್ ಹ್ಯಾಂಡ್ ಕಾರು ಬೇಕೆಂದರೆ ಹತ್ತಿರದ ಡೀಲರುಗಳನ್ನು ಭೇಟಿಯಾಗಿ. ದರ ಚೌಕಾಶಿ ಮಾಡಲು ಮಾತ್ರ ಮರೆಯದಿರಿ.

More from DriveSpark

Article Published On: Wednesday, July 11, 2012, 17:01 [IST]
English summary
The Honda City is still the highest selling sedan in the uused car segment despite the arrival of several competitors. It has been appreciated for its refined engine, smooth performance and good mileage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+