ಅತ್ಯುತ್ತಮ ರಿಸೇಲ್ ಮೌಲ್ಯ ಹೊಂದಿರುವ ಸೆಕೆಂಡ್ ಹ್ಯಾಂಡ್ ಕಾರುಗಳು

By Nagaraja

ಭಾರತದಲ್ಲಿ ಹೊಸ ಕಾರು ಮಾರುಕಟ್ಟೆಗೆ ಸಮವಾಗಿ ಸೆಕೆಂಡ್ ಹ್ಯಾಂಡ್ ಅಥವಾ ಉಪಯೋಗಿಸಿದ ಕಾರು ಮಾರುಕಟ್ಟೆ ಬೆಳೆದು ನಿಂತಿದೆ. ಹಾಗಾಗಿ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗಲೂ ಗ್ರಾಹಕರಿಗೆ ಅನೇಕ ಘಟಕಗಳು ಪ್ರಾಮುಖ್ಯತೆ ಗಿಟ್ಟಿಸಿಕೊಳ್ಳುತ್ತದೆ.

ಉಪಯೋಗಿಸಿದ ಕಾರು ಖರೀದಿಸುವಾಗಲೂ ಗ್ರಾಹಕರು ಅತಿ ಹೆಚ್ಚು ರಿಸೇಲ್ ಮೌಲ್ಯವನ್ನು ಗಿಟ್ಟಿಸಿಕೊಳ್ಳಲು ಬಯಸುತ್ತಾರೆ. ಹೀಗೆ ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ಮೌಲ್ಯ ಕಾಪಾಡಿಕೊಂಡಿರುವ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ನಾವಿಲ್ಲಿ ಹೇಳಿಕೊಡಲಿದ್ದೇವೆ.

ವಿಭಾಗ: ಹ್ಯಾಚ್ ಬ್ಯಾಕ್ - ವ್ಯಾಗನಾರ್

ವಿಭಾಗ: ಹ್ಯಾಚ್ ಬ್ಯಾಕ್ - ವ್ಯಾಗನಾರ್

ಮಾರುತಿ ಸುಜುಕಿ ವ್ಯಾಗನಾರ್ ಒಂದು ಬಹು ಬಳಕೆಯ ಕಾರಾಗಿದೆ. ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಸ್ಥಳಾವಕಾಶಯುಕ್ತ ಕಾರನ್ನು ಬಯಸುವುದಾದ್ದಲ್ಲಿ ಇಕ್ಕಟ್ಟಾದ ರಸ್ತೆ ಪರಿಸ್ಥಿತಿಯಲ್ಲೂ ವ್ಯಾಗನಾರ್ ಅತ್ಯುತ್ತಮ ಆಯ್ಕೆಯಾಗಿರಲಿದೆ.

ವ್ಯಾಗನಾರ್

ವ್ಯಾಗನಾರ್

ಬೆಲೆ: ಎರಡರಿಂದ 2.5 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಲಭ್ಯ

ಮೈಲೇಜ್: 16ರಿಂದ 18 ಕೀಮೀ.

ಕೀ.ಮೀ. ಓಡಾಟ: 30,000-40,000

ವರ್ಷ: 4ರಿಂದ 5

ಮಾರುತಿ ಸ್ವಿಫ್ಟ್

ಮಾರುತಿ ಸ್ವಿಫ್ಟ್

ಸೆಕೆಂಡ್ ಹ್ಯಾಂಡ್ ಕಾರುಗಳ ಪೈಕಿ ಮಾರುತಿ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಕಾರಿಗೆ ಅತಿ ಹೆಚ್ಚಿನ ಬೇಡಿಕೆಯಿದೆ. ಪವರ್ ಸ್ಟೀರಿಂಗ್, ಆಡಿಯೋ ಸಿಸ್ಟಂ, ಪವರ್ ವಿಂಡೋ, ಎಸಿ ಹೀಗೆ ಪ್ರಯಾಣಿಕನಿಗೆ ಬೇಕಾದ ಎಲ್ಲ ಅಗತ್ಯ ಉಪಕರಣಗಳನ್ನು ಸ್ವಿಫ್ಟ್ ಹೊಂದಿದೆ.

ಮಾರುತಿ ಸ್ವಿಫ್ಟ್

ಮಾರುತಿ ಸ್ವಿಫ್ಟ್

ಬೆಲೆ: 3ರಿಂದ 5 ಲಕ್ಷ ರು. (ಜನರೇಷನ್ ಗೆ ಅವಲಂಬಿಸಿ)

ಮೈಲೇಜ್: 15ರಿಂದ 17 ಕೀಮೀ.

ಕೀ.ಮೀ. ಓಡಾಟ: 30,000-50,000

ವರ್ಷ: 5ರಿಂದ 10 ವರ್ಷ

ಹ್ಯುಂಡೈ ಐ20

ಹ್ಯುಂಡೈ ಐ20

ಪ್ರೀಮಿಯಂ ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ಕಾಣಿಸಿಕೊಂಡಿರುವ ಹ್ಯುಂಡೈ ಐ20 ಅತ್ಯುತ್ತಮ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಂಡಿದೆ. ಮಾರುತಿ ಬಳಿಕ ಹೆಚ್ಚಿನ ಮೌಲ್ಯ ಕಾಯ್ದುಕೊಂಡಿರುವ ಎರಡನೇ ತಲೆಮಾರಿನ ಹ್ಯುಂಡೈ ಐ20 ಕಾರುಗಳು ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲೂ ಅತ್ಯುತ್ತಮ ಆಯ್ಕೆಯಾಗಿರಲಿದೆ.

ಹ್ಯುಂಡೈ ಐ20

ಹ್ಯುಂಡೈ ಐ20

ಬೆಲೆ: 3ರಿಂದ 4.5 ಲಕ್ಷ ರು. (ಪೆಟ್ರೋಲ್/ಡೀಸೆಲ್)

ಮೈಲೇಜ್: 14ರಿಂದ 17 ಕೀಮೀ.

ಕೀ.ಮೀ. ಓಡಾಟ: 30,000-50,000

ವರ್ಷ: 3ರಿಂದ 4 ವರ್ಷ

ವಿಭಾಗ: ಸೆಡಾನ್ - ಹೋಂಡಾ ಅಮೇಜ್

ವಿಭಾಗ: ಸೆಡಾನ್ - ಹೋಂಡಾ ಅಮೇಜ್

ಡೀಸೆಲ್ ಕಾರು ವಿಭಾಗಕ್ಕೆ ಬಹಳ ತಡವಾಗಿ ಪ್ರವೇಶಿಸಿದರೂ ಕಳೆದ ಕೆಲವು ವರ್ಷಗಳಿಂದ ಈ ವಿಭಾಗದಲ್ಲಿ ಹೋಂಡಾ ಅತ್ಯುತ್ತಮ ಮಾರಾಟ ಗಿಟ್ಟಿಸಿಕೊಂಡಿದೆ. ವಿನ್ಯಾಸವನ್ನು ಗಮನಕ್ಕೆ ತೆಗೆದುಕೊಂಡಾಗ ಮಾರುತಿ ಸ್ವಿಫ್ಟ್ ಡಿಜೈರ್ ಹಿಂದಿಕ್ಕಿರುವ ಹೋಂಡಾ ಅಮೇಜ್ ಸೆಕೆಂಡ್ ಹ್ಯಾಂಡ್ ಕಾರು ವಿಭಾಗದಲ್ಲಿ ಶ್ರೇಷ್ಠ ಆಯ್ಕೆಯಾಗಿರಲಿದೆ.

ಹೋಂಡಾ ಅಮೇಜ್

ಹೋಂಡಾ ಅಮೇಜ್

ಬೆಲೆ: 4ರಿಂದ 5 ಲಕ್ಷ ರು.

ಮೈಲೇಜ್: 12ರಿಂದ 18 ಕೀಮೀ. (ಪೆಟ್ರೋಲ್ ಅಥವಾ ಡೀಸೆಲ್)

ಕೀ.ಮೀ. ಓಡಾಟ: 30,000-50,000

ವರ್ಷ: 3ರಿಂದ 4 ವರ್ಷ

ಸ್ವಿಫ್ಟ್ ಡಿಜೈರ್

ಸ್ವಿಫ್ಟ್ ಡಿಜೈರ್

ದೇಶದ್ಯಂತ ಹರಡಿರುವ ಸರ್ವೀಸ್ ಜಾಲ ಮತ್ತು ಹೆಚ್ಚುವರಿ ಆಕ್ಸಸರಿಗಳು ಕಡಿಮೆ ಬೆಲೆಗಳಲ್ಲಿ ದೊರಕುವುದು ಮಾರುತಿಗೆ ವರದಾನವಾಗಿದೆ. ಹೇಗೆ ನೂತನ ಕಾರು ಮಾರುಕಟ್ಟೆಯಲ್ಲಿ ನಂ.1 ಪಟ್ಟವನ್ನು ಕಾಯ್ದುಕೊಂಡಿದೆಯೋ ಅದೇ ರೀತಿ ಮಾರುತಿ ಸ್ವಿಫ್ಟ್ ಸೆಕೆಂಡ್ ಹ್ಯಾಂಡ್ ಕಾರು ವಿಭಾಗದಲ್ಲೂ ಉತ್ತಮ ಆವೇಗ ಕಾಪಾಡಿಕೊಂಡಿದೆ.

ಸ್ವಿಫ್ಟ್ ಡಿಜೈರ್

ಸ್ವಿಫ್ಟ್ ಡಿಜೈರ್

ಬೆಲೆ: 4ರಿಂದ 5 ಲಕ್ಷ ರು.

ಮೈಲೇಜ್: 14ರಿಂದ 18 ಕೀಮೀ.

ಕೀ.ಮೀ. ಓಡಾಟ: 40,000-70,000

ವರ್ಷ: 4ರಿಂದ 5 ವರ್ಷ

ಹೋಂಡಾ ಸಿಟಿ

ಹೋಂಡಾ ಸಿಟಿ

ಹಳೆಯ ಹೋಂಡಾ ಸಿಟಿ ಈಗಲೂ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಅತ್ಯುತ್ತಮ ಬೇಡಿಕೆಯನ್ನು ಕಾಪಾಡಿಕೊಂಡಿದೆ. ಗುಣಮಟ್ಟತೆ ಮತ್ತು ಪವರ್ ಹೋಂಡಾ ಸಿಟಿ ಕಾರಿನ ವಿಶೇಷತೆಯಾಗಿದೆ.

ಹೋಂಡಾ ಸಿಟಿ

ಹೋಂಡಾ ಸಿಟಿ

ಬೆಲೆ: 2ರಿಂದ 5 ಲಕ್ಷ ರು. (ಜನರೇಷನ್ ಗೆ ಅವಲಂಬಿಸಿ)

ಮೈಲೇಜ್: 12ರಿಂದ 15 ಕೀಮೀ.

ಕೀ.ಮೀ. ಓಡಾಟ: 30,000-70,000

ವರ್ಷ: 4ರಿಂದ 7 ವರ್ಷ

 ವಿಭಾಗ: ಎಸ್‌ಯುವಿ/ಎಂಯುವಿ - ಫೋರ್ಡ್ ಇಕೊಸ್ಪೋರ್ಟ್

ವಿಭಾಗ: ಎಸ್‌ಯುವಿ/ಎಂಯುವಿ - ಫೋರ್ಡ್ ಇಕೊಸ್ಪೋರ್ಟ್

ಸೆಕೆಂಡ್ ಹ್ಯಾಂಡ್ ಕಾರು ವಿಭಾಗಕ್ಕೆ ಎಂಟ್ರಿ ಕೊಟ್ಟಿರುವ ತಾಜಾ ಕಾರುಗಳ ಪೈಕಿ ಇಕೊಸ್ಪೋರ್ಟ್ ಒಂದಾಗಿದೆ. ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಬೇಡಿಕೆ ಕಾಪಾಡಿಕೊಂಡಿರುವ ಈ ಕಾಂಪಾಕ್ಟ್ ಎಸ್ ಯುವಿ ಗರಿಷ್ಠ ತಂತ್ರಜ್ಞಾನಗಳನ್ನು ಒಳಗೊಂಡಿರುತ್ತದೆ.

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಬೆಲೆ: 7.5 ರಿಂದ 10 ಲಕ್ಷ ರು.

ಮೈಲೇಜ್: 12ರಿಂದ 18 ಕೀಮೀ.

ಕೀ.ಮೀ. ಓಡಾಟ: 20,000-40,000

ವರ್ಷ: 2ರಿಂದ 3 ವರ್ಷ

ಮಾರುತಿ ಸುಜುಕಿ ಎರ್ಟಿಗಾ

ಮಾರುತಿ ಸುಜುಕಿ ಎರ್ಟಿಗಾ

ನೀವು ಏಳು ಸೀಟುಗಳ ಬಜೆಟ್ ಕಾರಿನ ಹುಡುಕಾಟದಲ್ಲಿದ್ದರೆ ಮಾರುತಿ ಎರ್ಟಿಗಾ ಅತ್ಯುತ್ತ ಆಯ್ಕೆಯಾಗಿರಲಿದೆ. ಹೆಚ್ಚು ಅನುಕೂಲ ಮತ್ತು ಆರಾಮದಾಯಕ ಸೌಲಭ್ಯಗಳನ್ನು ಇದು ಒದಗಿಸುತ್ತಿದ್ದು, ಮಾರಾಟ ನಂತರದ ಸೇಲ್ಸ್ ಸರ್ವಿಸ್ ಮಿತವ್ಯಯವಾಗಲಿದೆ.

ಮಾರುತಿ ಸುಜುಕಿ ಎರ್ಟಿಗಾ

ಮಾರುತಿ ಸುಜುಕಿ ಎರ್ಟಿಗಾ

ಬೆಲೆ: 7.5 ರಿಂದ 10 ಲಕ್ಷ ರು.

ಮೈಲೇಜ್: 12ರಿಂದ 16 ಕೀಮೀ.

ಕೀ.ಮೀ. ಓಡಾಟ: 10,000-40,000

ವರ್ಷ: 1ರಿಂದ 4 ವರ್ಷ

ಟೊಯೊಟಾ ಇನ್ನೋವಾ

ಟೊಯೊಟಾ ಇನ್ನೋವಾ

ಬಹು ಬಳಕೆಯ ವಾಹನ ವಿಭಾಗಕ್ಕೆ ಬಂದಾಗ ಟೊಯೊಟಾ ಇನ್ನೋವಾ ಗರಿಷ್ಠ ಬೇಡಿಕೆಯನ್ನು ಕಾಪಾಡಿಕೊಂಡಿದೆ. ಬಹುತೇಕ ಲಕ್ಷದಷ್ಟೂ ಕೀ.ಮೀ. ಓಡಿದ ಬಳಿಕವೂ ಇನ್ನೋವಾ ಹೆಚ್ಚು ಬೇಡಿಕೆ ಕಾಯ್ದುಕೊಂಡಿರುವುದನ್ನು ನೀವು ಮನಗಾಣಬಹುದಾಗಿದೆ.

ಟೊಯೊಟಾ ಇನ್ನೋವಾ

ಟೊಯೊಟಾ ಇನ್ನೋವಾ

ಬೆಲೆ: 5 ರಿಂದ 20 ಲಕ್ಷ ರು.

ಮೈಲೇಜ್: 9ರಿಂದ 11 ಕೀಮೀ.

ಕೀ.ಮೀ. ಓಡಾಟ: 35,000-120,000

ವರ್ಷ: 1ರಿಂದ 8 ವರ್ಷ

ಟೊಯೊಟಾ ಫಾರ್ಚ್ಯುನರ್

ಟೊಯೊಟಾ ಫಾರ್ಚ್ಯುನರ್

ನಿಮಗೆ ಐಷಾರಾಮಿ ಕ್ರೀಡಾ ಬಳಕೆಯ ಕಾರು ಬೇಕೆಂದು ಅನಿಸಿದ್ದಲ್ಲಿ ಹಣದ ಸಮಸ್ಯೆ ಕಾಡುತ್ತಿದ್ದಲ್ಲಿ ಟೊಯೊಟಾ ಫಾರ್ಚ್ಯುನರ್ ಸೆಕೆಂಡ್ ಹ್ಯಾಂಡ್ ಕಾರು ಬಳಕೆ ಮಾಡಬಹುದಾಗಿದೆ. ಫಾರ್ಚ್ಯುನರ್ ನಲ್ಲಿ ಗರಿಷ್ಠ ಸುರಕ್ಷಾ ವೈಶಿಷ್ಟ್ಯಗಳನ್ನು ಕಾಪಾಡಿಕೊಳ್ಳಲಾಗಿದೆ.

ಟೊಯೊಟಾ ಫಾರ್ಚ್ಯುನರ್

ಟೊಯೊಟಾ ಫಾರ್ಚ್ಯುನರ್

ಬೆಲೆ: 14 ರಿಂದ 26 ಲಕ್ಷ ರು.

ಮೈಲೇಜ್: 8ರಿಂದ 10 ಕೀಮೀ.

ಕೀ.ಮೀ. ಓಡಾಟ: 15,000-120,000

ವರ್ಷ: 3ರಿಂದ 6 ವರ್ಷ

ಅತ್ಯುತ್ತಮ ರಿಸೇಲ್ ಮೌಲ್ಯ ಹೊಂದಿರುವ ಸೆಕೆಂಡ್ ಹ್ಯಾಂಡ್ ಕಾರುಗಳು

ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.

More from DriveSpark

Article Published On: Monday, May 9, 2016, 15:47 [IST]
English summary
Here Are The Best Used Cars With Resale Value In India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+