ಸೇಲ್ ಸೇಲ್; 10 ಲಕ್ಷಕ್ಕೆ ಪಡೆಯಿರಿ ಲಗ್ಷುರಿ ಕಾರು!

Written By:

ನಿಮ್ಮ ಕೈಯಲ್ಲಿರುವ ಬಜೆಟ್ 10 ಲಕ್ಷ ರುಪಾಯಿ..! ಈ ಲಿಮಿಟೆಡ್ ಬಜೆಟ್‌ನ ಒಳಗಡೆ ಐಷಾರಾಮಿ ಕಾರು ತಮ್ಮದಾಗಿಸಿಕೊಳ್ಳಲು ಬಯಸುವುದಾದ್ದಲ್ಲಿ ನಮ್ಮ ಡ್ರೈವ್ ಸ್ಪಾರ್ಕ್ ತಂಡವು ನಿಮ್ಮ ನೆರವಿಗೆ ಬರಲಿದೆ. ಆದರೆ ಮೊದಲ ನೋಟದಲ್ಲೇ 10 ಲಕ್ಷ ಬಜೆಟ್‌ನೊಳಗೆ ಲಗ್ಷುರಿ ಕಾರು ಲಭ್ಯವಾಗುವುದು ಕಠಿಣವಾಗಿದ್ದರಿಂದ ಬಳಕೆಯಾದ ಕಾರುಗಳ ಬಗ್ಗೆ ಮಾಹಿತಿ ಕೊಡುವ ಪ್ರಯತ್ನ ಮಾಡಲಿದ್ದೇವೆ.

ಐಷಾರಾಮಿ ಕಾರು ತಮ್ಮದಾಗಿಸಿಕೊಳ್ಳಬೇಕು ಎಂಬುದು ಪ್ರತಿಯೊಬ್ಬ ಕಾರು ಪ್ರೇಮಿಯ ಮಹತ್ವಾಕಾಂಕ್ಷೆಯಾಗಿರುತ್ತದೆ. ಇದರ ಐಷಾರಾಮಿ ಫೀಚರ್‌ಗಳ ಅನುಭವ ಪಡೆದುಕೊಳ್ಳುವ ಹಂಬಲವಿರುತ್ತದೆ. ಇದಕ್ಕಾಗಿ ಸೆವಿಂಗ್ಸ್ ಪಟ್ಟಿ ಬೆಳೆಸುತ್ತಿರುತ್ತಾನೆ.

ಸಹಜವಾಗಿಯೇ ಐಷಾರಾಮಿ ಕಾರು ಆಡಂಬರದ ಸಂಕೇತವಾಗಿರುತ್ತದೆ. ಇದು ಹೆಚ್ಚು ಸ್ಟೈಲಿಷ್, ಶಕ್ತಿಯುತ ಹಾಗೂ ಶ್ರೇಷ್ಠ ಹ್ಯಾಡ್ಲಿಂಗ್ ನೀಡುತ್ತದೆ. ರೋಲ್ಸ್ ರಾಯ್ಸ್‌ಗಳಂತಹ ಕಾರುಗಳ ದರ ಕೈಗೆಟುಕುವುದು ಕಷ್ಟವಾಗಿದ್ದರಿಂದ ಕೆಲವೇ ಕೆಲವು ಗ್ರಾಹಕರನ್ನು ಮಾತ್ರ ಹೊಂದಿರುತ್ತಾರೆ.

ಮರ್ಸಿಡಿಸ್ ಬೆಂಝ್, ಆಡಿ ಹಾಗೂ ಬಿಎಂಡಬ್ಲ್ಯು ಕೂಡಾ ಪ್ರೀಮಿಯಂ ಫೀಚರ್‌ಗಳನ್ನು ಹೊಂದಿದ್ದು, ದುಬಾರಿಯೆನಿಸಿದೆ. ಹಾಗಿದ್ದರೆ ಬನ್ನಿ 10 ಲಕ್ಷ ಬಜೆಟ್‌ನೊಳಗೆ ಲಭ್ಯವಾಗುವ ಬಳಕೆಯಾದ ಕಾರುಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಇನ್ನು ಸೆಕೆಂಡ್ ಹ್ಯಾಂಡ್ ಸೇಲ್ಸ್‌ಗಾಗಿ ನಮ್ಮ ಡ್ರೈವ್ ಸ್ಪಾರ್ಕ್ ಕ್ಲಾಸಿಫೈಡ್ಸ್ ಪುಟ ತೆರೆಯಿರಿ.

Used Luxury Cars Under INR 10 Lakhs

ಮಾರುಕಟ್ಟೆಯಲ್ಲಿ ಬಳಕೆಯಾದ ಹಲವು ಮಾದರಿಯ ಲಗ್ಷುರಿ ಕಾರುಗಳು 10 ಲಕ್ಷ ಬಜೆಟ್‌ನೊಳಗೆ ಲಭ್ಯವಿದೆ. ಇದನ್ನು ನೀವು ಡೀಲರ್ ಬಳಿ ತೆರಳಿ ಅಥವಾ ವೈಯಕ್ತಿಕವಾಗಿಯೂ ಖರೀದಿಸಬಹುದಾಗಿದೆ.

2006 Mercedes-Benz C-Class 200 K

2006 Mercedes-Benz C-Class 200 K

ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿರುವ 2006ರ ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್ 200ಕೆ ನಿಮ್ಮ ಬಜೆಟ್‌ಗೆ ಅನುಗುಣವಾಗಿದ್ದು, ಎಂಟು ಲಕ್ಷ ರು.ಗಳ ಅಸುಪಾಸಿನಲ್ಲಿ ಲಭ್ಯವಾಗಲಿದೆ.

2008 Honda Accord

2008 Honda Accord

2008ನೇ ಮಾದರಿಯ ಹೋಂಡಾ ಅಕಾರ್ಡ್ ಸೆಕೆಂಡ್ ಹ್ಯಾಂಡ್ ಕಾರಿನ ದರ 8ರಿಂದ 9 ಲಕ್ಷ ಅಸುಪಾಸಿನಲ್ಲಿರಲಿದೆ. ಹಾಗಿದ್ದರೂ ಪ್ರದೇಶ, ಹೆಚ್ಚುವರಿ ಆಕ್ಸೆಸರಿ, ಕಲರ್ ವೆರಿಯಂಟ್ ಹಾಗೂ ಕಾರಿನ ನಿರ್ವಹಣೆಯ ಪರಿಸ್ಥಿತಿಯಲ್ಲಿ ದರದಲ್ಲಿ ಏರುಪೇರು ಕಂಡುಬರಲಿದೆ.

2008 Honda CR-V 2.4

2008 Honda CR-V 2.4

ಹಾಗೊಂದು ವೇಳೆ ನೀವು ಹೋಂಡಾ ಪ್ರೀಮಿಯಂ ಎಸ್‌ಯುವಿ ಕಾರು ಖರೀದಿಸಲು ಬಯಸಿದ್ದಲ್ಲಿ 2008ರ ಈ ಮಾದರಿಯು ಉತ್ತಮ ಆಯ್ಕೆಯಾಗಿರಲಿದೆ. ಇದು 10 ಲಕ್ಷ. ಬಜೆಟ್‌ನೊಳಗೆ ದೊರಕಲಿದೆ.

2010 Honda Civic 1.8V

2010 Honda Civic 1.8V

ನೀವೀಗ 2010ರ ಹೋಂಡಾ ಸಿವಿಕ್ ಕೂಡಾ ಖರೀದಿಸಬಹುದಾಗಿದೆ. ಬಳಕೆಯಾದ ಹೋಂಡಾ ಸಿವಿಕ್ 1.8ವಿ ಎಂಜಿನ್ ಮಾದರಿ 9 ಲಕ್ಷ ಅಸುಪಾಸಿನಲ್ಲಿರಲಿದೆ. ದೇಶದಲ್ಲಿ ಸಿವಿಕ್ ಮಾರಾಟವನ್ನು ಸ್ಥಗಿತಗೊಳಿಸಿರುವುದು ದರ ಕುಸಿತಕ್ಕೆ ಕಾರಣವಾಗಿದೆ.

2004 Mercedes-Benz E-Class 200 K Classic

2004 Mercedes-Benz E-Class 200 K Classic

ನೀವು ಮರ್ಸಿಡಿಸ್ ಬೆಂಝ್ ಅಭಿಮಾನಿಯಾಗಿದ್ದರೆ 2004ರ ಇ ಕ್ಲಾಸ್ 200 ಕೆ ಕ್ಲಾಸಿಕ್ ಆಯ್ಕೆ ಮಾಡಬಹುದಾಗಿದೆ. ಇದು ಕೂಡಾ 8.5 ಲಕ್ಷ ಅಸುಪಾಸಿನಲ್ಲಿರಲಿದೆ.

2004 Mercedes-Benz ML-Class 350 CDI

2004 Mercedes-Benz ML-Class 350 CDI

ಪ್ರಭಾವಿ ನಿರ್ವಹಣೆ ಹಾಗೂ ಆರಾಮದಾಯಕ ಚಾಲನೆಯನ್ನು 2004ರ ಮರ್ಸಿಡಿಸ್ ಬೆಂಝ್ ಎಂಎಲ್‌ ಕ್ಲಾಸ್ ಲಗ್ಷುರಿ ಎಸ್‌ಯುವಿ ನೀಡುತ್ತದೆ. ಇದರ ಡೀಸೆಲ್ ವೆರಿಯಂಟ್ 9 ಲಕ್ಷ ಅಸುಪಾಸಿನಲ್ಲಿರಲ್ಲಿದೆ. ಹಾಗಿದ್ದರೂ ಕೆಲವೊಂದು ಸಂದರ್ಭದಲ್ಲಿ ದರ 10 ಲಕ್ಷ ಮೀರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

2002 Mercedes-Benz S-Class 320 L

2002 Mercedes-Benz S-Class 320 L

ಚೌಕಾಶಿ ಮಾಡಿದರೆ ಖಂಡಿತವಾಗಿಯೂ 2002ನೇ ಸಾಲಿನ ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ 320 ಎಲ್ ಮಾದರಿ 10 ಲಕ್ಷ ನಿಗದಿತ ಬಜೆಟ್‌ನೊಳಗೆ ತಮ್ಮದಾಗಿಸಬಹುದಾಗಿದೆ.

ಇನ್ನು ಸೆಕೆಂಡ್ ಹ್ಯಾಂಡ್ ಸೇಲ್ಸ್‌ಗಾಗಿ ನಮ್ಮ ಡ್ರೈವ್ ಸ್ಪಾರ್ಕ್ ಕ್ಲಾಸಿಫೈಡ್ಸ್ ಪೇಜ್ ತೆರೆಯಿರಿ.English summary
Although you might find new luxury cars unaffordable, you will still be able to afford luxury cars just by doing one thing, which is buying a used one. Now you can buy a used luxury car in India from a dealer or individual owner for as little as INR 10 lakhs.
Story first published: Monday, February 11, 2013, 11:03 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more