ಹೋಂಡಾ ಸಿವಿಕ್ ಕಾರಿಗೆ ವಿದಾಯ ಹೇಳುವ ಸಮಯ
ಮಾರಾಟವಾಗದೆ ಉಳಿದಿರುವ ಸಿವಿಕ್ ಕಾರುಗಳೆಲ್ಲ ಮುಗಿದ ನಂತರ ಕಂಪನಿಯು ಸಿವಿಕ್ ಮಾರಾಟ ಸ್ಥಗಿತಗೊಳಿಸುವ ನಿರ್ಧಾರವನ್ನು ಪ್ರಕಟಿಸಲಿದೆ. 2012ರ ಹೊಸ ಸಿವಿಕ್ ಆವೃತ್ತಿಯನ್ನು ಪರಿಚಯಿಸುವ ಯಾವುದೇ ಯೋಜನೆಯೂ ಕಂಪನಿಗಿಲ್ಲ. ಸಿವಿಕ್ ಕಾರಿಗೆ ಗ್ರಾಹಕರಿಂದ ನಿರೀಕ್ಷಿತ ಬೇಡಿಕೆ ಬಾರದಿರುವುದು ಕೂಡ ಇದಕ್ಕೆ ಪ್ರಮುಖ ಕಾರಣ.
2012ರ ನೂತನ ಹೋಂಡಾ ಸಿವಿಕ್ ಸೆಡಾನ್ ಕಾರು ಜಾಗತಿಕ ಮಾರುಕಟ್ಟೆಗೆ ಆಗಮಿಸಿ ತುಂಬಾ ದಿನ ಕಳೆದಿದೆ. ಈ ಕಾರು ದೇಶದ ರಸ್ತೆಗೂ ಆಗಮಿಸುವ ನಿರೀಕ್ಷೆಯಲ್ಲಿದ್ದವರಿಗೆ ನಿರಾಶೆಯಾಗಬಹುದಾದ ಸುದ್ದಿಯನ್ನು ಬಹಳ ಹಿಂದೆಯೇ ನಾವು ಪ್ರಕಟಿಸಿದ್ದೇವು. ಹೊಸ ಸಿವಿಕ್ ಕಾರನ್ನು ಭಾರತಕ್ಕೆ ಪರಿಚಯಿಸುವ ಯಾವುದೇ ಯೋಜನೆಯನ್ನು ಕಂಪನಿ ಹೊಂದಿಲ್ಲ.
ನೂತನ ಸಿವಿಕ್ ಸೆಡಾನ್ ಕಾರು ಯುರೋಪ್ ಮಾರುಕಟ್ಟೆಯಾದ್ಯಂತ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಇದು 2.2 ಲೀಟರಿನ ಐ-ಡಿಟೆಕ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕುತ್ತದೆ. ಇದು 148 ಅಶ್ವಶಕ್ತಿ ಮತ್ತು 350 ಎನ್ಎಂ ಟಾರ್ಕ್ ಪವರ್ ನೀಡುತ್ತದೆ.
ಸಿವಿಕ್ ಕಾರು ನಿಮಗೆ ಇಷ್ಟವಾಗಿದ್ರೆ ಹೋಂಡಾ ದಾಸ್ತಾನಿನಲ್ಲಿ ಮಾರಾಟವಾಗದೆ ಉಳಿದಿರುವ ಸಿವಿಕ್ ಕಾರು ಖರೀದಿಸಬಹುದು.
ಹೋಂಡಾ ಸಿವಿಕ್ ದರ
ಹೋಂಡಾ ಸಿವಿಕ್ 1.8ಎಸ್ ಮ್ಯಾನುಯಲ್ ಗೇರ್, ಪೆಟ್ರೋಲ್, ದರ 12,58,600 ರು
ಸಿವಿಕ್ 1.8ವಿ, ಪೆಟ್ರೋಲ್, ಮ್ಯಾನುಯಲ್ ಗೇರ್: 13,62,700 ರು.
ಸಿವಿಕ್ 1.8ವಿ ಮ್ಯಾನುಯಲ್ ಗೇರ್, ಸನ್ ರೂಫ್, ಪೆಟ್ರೋಲ್: 14,10,100 ರು.
ಸಿವಿಕ್ 1.8ವಿ ಆಟೋಮ್ಯಾಟಿಕ್, ಪೆಟ್ರೋಲ್: 14,40,600 ರು.
ಸಿವಿಕ್ 1.8 ಆಟೋಮ್ಯಾಟಿಕ್, ಸನ್ ರೂಫ್, ಪೆಟ್ರೋಲ್: 14,87,900 ರು.


Click it and Unblock the Notifications









