ಹೊಂಡಾ ಸಣ್ಣ ಕಾರು; ನಿಮ್ಮ ನಿರೀಕ್ಷೆ ಏನು?
ಅಭಿವೃದ್ಧಿ ಹೊಂದುತ್ತಿರುವ ಭಾರತ ಹಾಗೂ ಇತರ ಏಷ್ಯಾ ರಾಷ್ಟ್ರಗಳಲ್ಲಿ ಸಣ್ಣ ಕಾರುಗಳಿಗೆ ಭಾರಿ ಬೇಡಿಕೆಯಿದೆ. ದಿನದಿಂದ ದಿನಕ್ಕೆ ಏರುತ್ತಿರುವ ಇಂಧನ ಬೆಲೆ ಹಾಗೂ ಅಗತ್ಯ ಸಾಮಾಗ್ರಿಗಳ ಬೆಲೆಯೇರಿಕೆಯಿಂದಾಗಿ ವಾಹನಗಳ ದರದಲ್ಲೂ ಭಾರಿ ಏರಿಕೆ ಕಾಣುತ್ತಿದೆ.
ಇದರಿಂದಾಗಿ ದೇಶದ ಕಾರು ಖರೀದಿ ಗ್ರಾಹಕರು ಸಣ್ಣ ಕಾರುಗಳತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಹೆಚ್ಚು ಹೊಂದಾಣಿಕೆ ಹೊಂದಿರುವ ಇಂತಹ ಕಾರುಗಳು ಸಂಚಾರ ಯೋಗ್ಯವಾಗಿದೆ. ಇದನ್ನೇ ಪ್ರಮುಖವಾಗಿ ಗುರಿಯಿರಿಸಿಕೊಂಡಿರುವ ಜಪಾನ್ ವಾಹನ ತಯಾರಕ ಕಂಪನಿಯಾದ ಹೊಂಡಾ ಭಾರತ, ಚೀನಾ ಸಹಿತ ಇತರ ಆಗ್ನೇಯ ಏಷ್ಯಾ ಮಾರುಕಟ್ಟೆಯನ್ನು ಪ್ರಮುಖವಾಗಿ ಗುರಿಯಾಗಿರಿಸಿಕೊಂಡು ಸಣ್ಣ ಕಾರುಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ.
ಸಬ್-ಬ್ರಿಯೊ ಸಣ್ಣ ಕಾರುಗಳತ್ತ ಪ್ರಮುಖವಾಗಿಯೂ ಗುರಿಯಿರಿಸಿಕೊಂಡಿರುವ ಹೊಂಡಾ ಎನ್-ಸಿರೀಸ್ ಕಾರುಗಳನ್ನು ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ. ಈ ಮೂಲಕ ಪ್ರಮುಖವಾಗಿಯೂ ಸಣ್ಣ ಬಜೆಟ್ ಕಾರುಗಳಿಗೆ ಪೈಪೋಟಿ ನೀಡಲು ಮುಂದಾಗುತ್ತಿವೆ.
ಸಬ್-ಬ್ರಿಯೊ ಮೂಲಕ ಸಣ್ಣ ಕಾರುಗಳಿಗೆ ಅಪ್‌ಗ್ರೇಡ್ ಮಾಡಲು ಬಯಸುವ ದ್ವಿಚಕ್ರ ವಾಹನ ಗ್ರಾಹಕರನ್ನು ತನ್ನತ್ತ ಸೆಳೆಯಲು ಹೊಂಡಾ ಉದ್ದೇಶವಿರಿಸಿಕೊಂಡಿದೆ. ಪ್ರಸ್ತುತ ಎನ್-ಸಿರೀಸ್ ಪ್ಲಾಟ್ ಫಾರ್ಮ್‌ನಲ್ಲಿ ಮೂರು ಕಾರುಗಳನ್ನು ಹೊಂಡಾ ಮಾರಾಟಕ್ಕಿಳಿಸಿವೆ. ಈ ಪೈಕಿ ಎನ್-ಬಾಕ್ಸ್, ಎನ್-ಬಾಕ್ಸ್+ ಹಾಗೂ ಎನ್-ಒನ್ ಕಾರುಗಳು ಜಪಾನ್‌ನಲ್ಲಿ (Kei ಎಂದು ಅರಿಯಲ್ಪಡುತ್ತದೆ) ಅತಿ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ.
ನಗರ ಪ್ರದೇಶದ ಟ್ರಾಫಿಕ್ ನಿಭಾಯಿಸಲು ಹಾಗೂ ಸ್ವಲ್ಪ ಜಾಗದಲ್ಲಿ ಪಾರ್ಕಿಂಗ್ ಮಾಡಲು ಸಾಮರ್ಥ್ಯ ಹೊಂದಿರುವುದು ಪ್ಲಸ್ ಪಾಯಿಂಟ್ ಆಗಿದೆ. ಪೆಪ್ಪೆ ಟರ್ಬೊ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಕಾರುಗಳು ಉತ್ತಮ ನಿರ್ವಹಣೆ ಹಾಗೂ ಇಂಧನ ದಕ್ಷತೆಯನ್ನು ಹೊಂದಿರಲಿದೆ.
ನಾಲ್ಕು ಜನರಿಗೆ ಆರಾಮದಾಯಕವಾಗಿ ಕುಳಿತುಕೊಳ್ಳುವ ಸೀಟ್ ವ್ಯವಸ್ಥೆ ಕೂಡಾ ಇದೆ. ಅಲ್ಲದೆ ಎತ್ತರದವರಿಗೆ ಸರಿಯಾಗಿ ಕುಳಿತುಕೊಳ್ಳಲು ಹೆಡ್ ರೂಂ ಕೂಡಾ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಹೊಂಡಾ ಎನ್ ಸಿರೀಸ್ ಸಣ್ಣ ಕಾರಿನ ಬಗ್ಗೆ ಇನ್ನಷ್ಟು ಮಾಹಿತಿ ಲಭಿಸಲಿದೆ.

ಎನ್ ಸಿರೀಸ್ ಪ್ಲಾಟ್ ಫಾರ್ಮ್‌ನಲ್ಲಿ ಹೊಂಡಾ ಸಣ್ಣ ಕಾರು ನಿರ್ಮಾಣವಾಗಲಿದೆ.

ಹೊಂಡಾ ಸಣ್ಣ ಕಾರಿನ ಸೈಡ್ ವ್ಯೂ

ಹೊಂಡಾ ಸಣ್ಣ ಕಾರಿನ ಇಂಟಿರಿಯರ್ ವ್ಯೂ

ಹೊಂಡಾ ಸಣ್ಣ ಕಾರಿನ ರಿಯರ್ ವ್ಯೂ

ಹೊಂಡಾ ಸಣ್ಣ ಕಾರಿನ ಫ್ರಂಟ್ ಲುಕ್


Click it and Unblock the Notifications








