ಹೋಂಡಾ ಬ್ರಿಯೊ ಪುಟ್ಟಕಾರಿನ ಬುಕ್ಕಿಂಗ್ ಪುನಾರಂಭ

Honda reopened Brio hatchback Bookings
ಹೋಂಡಾ ಕಾರು ಕಂಪನಿ ತನ್ನ ಕಾಂಪ್ಯಾಕ್ಟ್ ಹ್ಯಾಚ್ ಬ್ಯಾಕ್ ಬ್ರಿಯೊ ಬುಕ್ಕಿಂಗ್ ಪುನಾರಂಭಿಸಿರುವುದಾಗಿ ಹೇಳಿದೆ. ಥೈಲಾಂಡಿನಲ್ಲಿ ನೆರೆಹಾವಳಿಯಾಗಿ ಕಂಪನಿಯ ವಾಹನ ಉತ್ಪಾದನೆಗೆ ಹೊಡೆತ ನೀಡಿದ ನಂತರ ಕಂಪನಿಯು ಬ್ರಿಯೊ ಬುಕ್ಕಿಂಗ್ ಸ್ಥಗಿತಗೊಳಿಸಿತ್ತು. ಥೈಲಾಂಡ್ ನೆರೆಹಾವಳಿಯು ಕಂಪನಿಯ ಬ್ರಿಯೊ ಮತ್ತು ಜಾಝ್ ಉತ್ಪಾದನೆಗೆ ಹೊಡೆತ ನೀಡಿತ್ತು.

ನೆರೆಹಾವಳಿ ನಂತರ ಕಂಪನಿಯು ಬಿಡಿಭಾಗಗಳಿಗಾಗಿ ಜಪಾನ್ ಮತ್ತು ಚೀನಾಗಳನ್ನು ಅವಲಂಬಿಸಿತ್ತು. ಇದೀಗ ಬಿಡಿಭಾಗ ಪೂರೈಕೆ ಹೆಚ್ಚಾಗುತ್ತ ಬಂದ ಹಿನ್ನಲೆಯಲ್ಲಿ ವಾಹನ ಉತ್ಪಾದನೆಯು ತಹಬಂದಿಗೆ ಬಂದಿದೆ. ಇದೀಗ ಕಂಪನಿಯು ಹಳೆಯ ಬುಕ್ಕಿಂಗ್ ಗಳನ್ನು ಕ್ಲೀಯರ್ ಮಾಡಲು ನಿರ್ಧರಿಸಿದೆ.

ಹೋಂಡಾ ಬ್ರಿಯೊ ಕಾರು 1.2 ಲೀಟರ್ ಐವಿಟೆಕ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 89 ಹಾರ್ಸ್ ಪವರ್ ಮತ್ತು 109 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಇದು 5 ಸ್ಪೀಡಿನ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿದೆ. ಇದರ ಎಕ್ಸ್ ಶೋರೂಂನಿಂದ ದರ 3.95 ಲಕ್ಷ ರು.ನಿಂದ 5.10 ಲಕ್ಷ ರು.ವರೆಗಿದೆ.

ಕಂಪನಿಯು ಹೋಂಡಾ ಸಿವಿಕ್ ಮತ್ತು ಸಿಆರ್-ವಿ ಕಾರುಗಳ ಡೀಸೆಲ್ ಆವೃತ್ತಿ ಕೂಡ ಹೊರತರಲು ನಿರ್ಧರಿಸಿದೆ. ಕಂಪನಿಯು ಎಲ್ಲಾ ಆರ್ಡರ್ ಗಳನ್ನು ಕ್ಲೀಯರ್ ಮಾಡಿದ ನಂತರ ನೂತನ ಡೀಸೆಲ್ ಆವೃತ್ತಿಗಳನ್ನು ಹೊರತರಲಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Wednesday, February 22, 2012, 12:15 [IST]
English summary
Honda has reopened the bookings of the Brio hatchback months after it stopped it following the crisis in Thailand. The Japanese carmaker which recently got back to full scale production has said people can now book the Brio in all its showrooms in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+