ಟ್ರಾಫಿಕ್ ಜಾಮ್‌ನಿಂದ ಪಾರು ಮಾಡುವ ಹೋಂಡಾ ಟೆಕ್ನಾಲಜಿ
ಜಪಾನಿನ ಕಾರು ಕಂಪನಿ ಹೋಂಡಾ ನೂತನ ಸಾಧನವೊಂದು ಅಭಿವೃದ್ಧಿಪಡಿಸಿದೆ. ಇದು ನಿಮ್ಮನ್ನು ಟ್ರಾಫಿಕ್ ಜಾಮ್‌ನಿಂದ ಪಾರು ಮಾಡುತ್ತದೆ.
ಆದ್ರೆ ಇದು ಮಾಮೂಲಿ ಜಿಪಿಎಸ್ ಸಿಸ್ಟಮ್ ಅಲ್ಲ. ಜಿಪಿಎಸ್ ಸಿಸ್ಟಮಿನಲ್ಲಾದರೆ ಟ್ರಾಫಿಕ್ ಜಾಮ್ ಇರೋ ಪ್ರದೇಶವನ್ನು ತಪ್ಪಿಸಿ ಬೇರೊಂದು ರೂಟಿನಲ್ಲಿ ಪ್ರಯಾಣಿಸಬಹುದು. ಆದರೆ ನೂತನ ಸಾಧನವು ಸಂಚಾರ ದಟ್ಟಣೆಯಲ್ಲಿ ವಾಹನದ ಆಕ್ಸಿಲರೇಷನ್ ಇತ್ಯಾದಿಗಳ ಮೇಲೆ ನಿಗಾವಿಡುತ್ತದೆ. ಅನಗತ್ಯ ಆಕ್ಸಿಲರೇಷನ್ ಅವಾಯ್ಡ್ ಮಾಡಿಸುತ್ತದೆ.
ಸೆಂಟ್ರಲ್ ಕನ್ಸೋಲ್ ಬಳಿಯಿರುವ ಈ ಸಾಧನವು ಡಿಸ್ ಪ್ಲೇ ಹೊಂದಿದೆ. ಆ ಪರದೆಯಲ್ಲಿ ಹೇಗೆ ಡ್ರೈವಿಂಗ್ ಮಾಡಬೇಕೆಂದು ಚಾಲಕನಿಗೆ ಸೂಚಿಸುತ್ತದೆ. ಅದರಲ್ಲಿ ಸೂಚಿಸಿದಂತೆ ಈತ ಸಂಚಾರ ದಟ್ಟಣೆಯಲ್ಲೂ ನಿರಾಳವಾಗಿ ಡ್ರೈವ್ ಮಾಡಬಹುದು.
ಕಂಪನಿಯು ಈಗಾಗಲೇ ಈ ಸಾಧನವನ್ನು ಟೆಸ್ಟ್ ಮಾಡಿದೆ. ಇದರಲ್ಲಿ ಕಾರಿನ ಸರಾಸರಿ ವೇಗ ಮತ್ತು ಇಂಧನ ದಕ್ಷತೆ ಕೂಡ ಹೆಚ್ಚಾಗಿರುವುದು ತಿಳಿದುಬಂದಿದೆ. ಶೀಘ್ರದಲ್ಲಿ ಹೋಂಡಾ ಕಾರುಗಳು ಈ ಸಾಧನ ಅಳವಡಿಸಿಕೊಂಡು ಆಗಮಿಸುವ ನಿರೀಕ್ಷೆಯಿದೆ.


Click it and Unblock the Notifications









