ಹ್ಯುಂಡೈ ಎಲಾಂಟ್ರಾ ಕಾರು ಖರೀದಿಗೆ ಮುಗಿಬಿದ್ದ ಗ್ರಾಹಕರು

ಕೊರಿಯಾದ ಕಾರು ಕಂಪನಿ ಹ್ಯುಂಡೈ ದೇಶದ ರಸ್ತೆಗೆ ಇತ್ತೀಚೆಗೆ ಪರಿಚಯಿಸಿದ ಎಲಾಂಟ್ರಾ ಕಾರಿಗೆ ಗ್ರಾಹಕರಿಂದ ಅತ್ಯುತ್ತಮ ಬೇಡಿಕೆ ವ್ಯಕ್ತವಾಗಿದೆ. ರಸ್ತೆಗಿಳಿದ ಎರಡೇ ದಿನಗಳಲ್ಲಿ ಸುಮಾರು 750 ಗ್ರಾಹಕರು ಎಲಾಂಟ್ರಾ ಕಾರನ್ನು ಬುಕ್ಕಿಂಗ್ ಮಾಡಿಕೊಂಡಿದ್ದಾರೆ.

ನೂತನ ಪ್ರೀಮಿಯಂ ಸೆಡಾನ್ ಕಾರು ಎಲಾಂಟ್ರಾವು ಫ್ಲೂಡಿಕ್ ಸೊನಾಟಾ ಮತ್ತು ಫ್ಲೂಡಿಕ್ ವೆರ್ನಾ ಕಾರುಗಳ ನಡುವಿನ ಸೆಗ್ಮೆಂಟಿಗೆ ಆಗಮಿಸಿದೆ. ನೂತನ ಎಲಾಂಟ್ರಾ ಕಾರನ್ನು ಅಧಿಕೃತವಾಗಿ ಪರಿಚಯಿಸುವ ಒಂದು ವಾರ ಮೊದಲೇ ಕಂಪನಿಯು ಬುಕ್ಕಿಂಗ್ ಆರಂಭಿಸಿತ್ತು.

ದೇಶದ ರಸ್ತೆಗೆ ಕಂಪನಿಯು ಐದನೇ ತಲೆಮಾರಿನ ಎಲಾಂಟ್ರಾ ಆವೃತ್ತಿಯನ್ನು ಪರಿಚಯಿಸಿದೆ. ಇದರ ದರ 12.51 ಲಕ್ಷ ರು.ನಿಂದ 15.85 ಲಕ್ಷ ರು.ವರೆಗಿದೆ. ಇದು ಷೆವರ್ಲೆ ಕ್ರೂಝ್, ಟೊಯೊಟಾ ಕರೊಲ್ಲಾ ಆಲ್ಟಿಸ್, ಸ್ಕೋಡಾ ಲಾರಾ ಇತ್ಯಾದಿ ಕಾರುಗಳಿಗೆ ನೇರ ಸ್ಪರ್ಧೆಯನ್ನು ಒಡ್ಡಲಿದೆ.

ಹೊಸ ಎಲಾಂಟ್ರಾ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ದೊರಕುತ್ತಿದೆ. ಪೆಟ್ರೋಲ್ ಆವೃತ್ತಿಯು 1.8 ಲೀಟರ್ ಎಂಜಿನ್ ಮತ್ತು ಡೀಸೆಲ್ ಆವೃತ್ತಿಯು 1.6 ಲೀಟರ್ ಸಿಆರ್ ಡಿಐ ಎಂಜಿನ್ ಆಯ್ಕೆಯಲ್ಲಿ ದೊರಕುತ್ತಿದೆ.

ಹ್ಯುಂಡೈ ಎಲಾಂಟ್ರಾ ಪೆಟ್ರೋಲ್ ಮಾದರಿ ದರ (ಲಕ್ಷ ರು. ಗಳಲ್ಲಿ)
* ಹ್ಯುಂಡೈ ಎಲಾಂಟ್ರಾ ಎಸ್ - 12.51
* ಹ್ಯುಂಡೈ ಎಲಾಂಟ್ರಾ ಎಸ್ ಎಕ್ಸ್ ಎಂಟಿ - 13.74
* ಹ್ಯುಂಡೈ ಎಲಾಂಟ್ರಾ ಎಸ್ ಎಕ್ಸ್ ಎಟಿ - 14.74

ಹ್ಯುಂಡೈ ಎಲಾಂಟ್ರಾ ಡೀಸೆಲ್ ದರ (ಲಕ್ಷ ರು. ಗಳಲ್ಲಿ)
* ಹ್ಯುಂಡೈ ಎಲಾಂಟ್ರಾ ಎಸ್ - 12.91
* ಹ್ಯುಂಡೈ ಎಲಾಂಟ್ರಾ ಎಸ್ ಎಕ್ಸ್ ಎಂಟಿ - 14.85
* ಹ್ಯುಂಡೈ ಎಲಾಂಟ್ರಾ ಎಸ್ ಎಕ್ಸ್ ಎಟಿ - 15.85

ಓದಿ: ಮೊದಲ ನೋಟ: ಹ್ಯುಂಡೈ ಎಲಾಂಟ್ರಾ ಸೆಡಾನ್

More from DriveSpark

Article Published On: Friday, August 17, 2012, 10:22 [IST]
English summary
The Hyundai Elantra, the Korean carmaker's latest offering in India has received more than 750 bookings within two days of its launch. The new premium sedan which is placed between the Fluidic Verna and the Fluidic Sonata in Hyundai's line-up was launched on August 13.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+