ಮೊದಲ ನೋಟ: ಹ್ಯುಂಡೈ ಎಲಾಂಟ್ರಾ ಸೆಡಾನ್

Posted By:

ಹ್ಯುಂಡೈ ಸಂಸ್ಥೆ ತನ್ನ ನೆಚ್ಚಿನ ಸೆಡಾನ್ ಕಾರು ಎಲಾಂಟ್ರಾದ ಹೊಚ್ಚ ಹೊಸ ಮಾದರಿಯನ್ನು ಹೊರ ತಂದಿದೆ. ಹೊಸ ಫ್ಲೂಯಿಡ್ ಎಲಾಂಟ್ರಾ ಸೆಡಾನ್ ಆರಂಭಿಕ ಬೆಲೆ 12.51 ಲಕ್ಷ ರು ನಿಂದ ಆರಂಭವಾಗಲಿದ್ದು, ಮುಗಂಡ ಬುಕ್ಕಿಂಗ್ ಶುರು ಮಾಡಲಾಗಿದೆ.

ಡೀಸೆಲ್ ಹಾಗೂ ಪೆಟ್ರೋಲ್ ಎರಡೂ ಆವೃತ್ತಿಯಲ್ಲಿ ಸಿಗಲಿರುವ ಎಲಾಂಟ್ರಾ 7 ಆಕರ್ಷಕ ಬಣ್ಣಗಳಿಂದ ಗ್ರಾಹಕರನ್ನು ಸೆಳೆಯಲಿದೆ. ಪೆಟ್ರೋಲ್ ಮಾದರಿ ಎಲಾಂಟ್ರಾದಲ್ಲಿ 1.8 ಲೀ DOHC ಇಂಜಿನ್ ಅಳವಡಿಸಲಾಗಿದೆ. 6500 rpm, 149.5 PS ನಂತೆ ಕಾರ್ಯ ನಿರ್ವಹಿಸಲಿದೆ. ಡೀಸೆಲ್ ಮಾದರಿಯಲ್ಲಿ 1.6 ಲೀ VGT ಸಹಿತ CRDI ಇಂಜಿನ್ ಹೊಂದಿದೆ.

Hyundai Sedan

ಎಲ್ಲಾ ಡೀಸೆಲ್ ಇಂಜಿನ್ ಗಳಂತೆ ಎಲಾಂಟ್ರಾ ಇಂಜಿನ್ ಕೂಡಾ ಹೆಚ್ಚಿನ ಶಕ್ತಿಯುತವಾಗಿದ್ದು, 2750rpm ನಂತೆ 259Nm torque ಹೊಂದಿದೆ. ಹೆಚ್ಚಿನ 4000rpm ನಂತೆ 128 PS ಶಕ್ತಿ ಹೊಂದಿದೆ. ಎರಡೂ ಇಂಜಿನ್ ಗಳು 6 ಸ್ಪೀಡ್ ಗೇರ್ ಬಾಕ್ಸ್ ಹೊಂದಿದ್ದು ಎಲ್ಲವೂ ಆಟೋಮ್ಯಾಟಿಕ್ ಆಗಿರುವುದು ವಿಶೇಷ.

ಎಲಾಂಟ್ರಾ 3 ಪೆಟ್ರೋಲ್ ಮಾದರಿ ಹಾಗೂ 4 ಡೀಸೆಲ್ ಮಾದರಿಗಳನ್ನು ಹೊರ ತರಲು ಯೋಜಿಸಿದೆ, 3 ಪೆಟ್ರೋಲ್ ಮಾದರಿಯಲ್ಲಿ S, SX MT ಕಾರುಗಳು ಹೊರ ಬೀಳಲಿದ್ದು, SX AT ಎರಡೂ ಇಂಜಿನ್ ಗಳಲ್ಲೂ ಲಭ್ಯವಿದೆ.

ಹ್ಯುಂಡೈ ಎಲಾಂಟ್ರಾ ಪೆಟ್ರೋಲ್ ಮಾದರಿ ದರ (ಲಕ್ಷ ರು. ಗಳಲ್ಲಿ)

* ಹ್ಯುಂಡೈ ಎಲಾಂಟ್ರಾ ಎಸ್ - 12.51

* ಹ್ಯುಂಡೈ ಎಲಾಂಟ್ರಾ ಎಸ್ ಎಕ್ಸ್ ಎಂಟಿ - 13.74

* ಹ್ಯುಂಡೈ ಎಲಾಂಟ್ರಾ ಎಸ್ ಎಕ್ಸ್ ಎಟಿ - 14.74

ಹ್ಯುಂಡೈ ಎಲಾಂಟ್ರಾ ಡೀಸೆಲ್ ದರ (ಲಕ್ಷ ರು. ಗಳಲ್ಲಿ)

* ಹ್ಯುಂಡೈ ಎಲಾಂಟ್ರಾ ಎಸ್ - 12.91

* ಹ್ಯುಂಡೈ ಎಲಾಂಟ್ರಾ ಎಸ್ ಎಕ್ಸ್ ಎಂಟಿ - 14.85

* ಹ್ಯುಂಡೈ ಎಲಾಂಟ್ರಾ ಎಸ್ ಎಕ್ಸ್ ಎಟಿ - 15.85

ಬಿಳಿ, ರಜತ, ಕಪ್ಪು, ನೀಲಿ, ಕೆಂಪು ಹಾಗೂ ಬೂದು ಬಣ್ಣಗಳಲ್ಲಿ ಲಭ್ಯವಿರುವ ಎಲಾಂಟ್ರಾ ಮೊದಲ ನೋಟಕ್ಕೆ ಕಣ್ಮನ ಸೆಳೆಯುತ್ತದೆ. ಕಾರಿನ ಒಳಭಾಗದ ಬಣ್ಣಗಳಲ್ಲಿ cocoa ಕಪ್ಪು ಹಾಗೂ beige ಮಾದರಿ ಪಡೆಯಬಹುದು.

ಎಲಾಂಟ್ರಾಗೆ ಸೆಡಾನ್ ವಿಭಾಗದಲ್ಲಿ ಸ್ಕೋಡಾ ಲಾರಾ ಹಾಗೂ ಟಯೋಟಾ ಕರೋಲ್ಲಾ ಕಾರುಗಳಿಂದ ತೀವ್ರ ಪೈಪೋಟಿ ಎದುರಾಗಲಿದೆ. 2.7 ಮೀ ವೀಲ್ ಬೇಸ್ ಇದ್ದು, ಸೀಟಿಂಗ್ ಕಂಫರ್ಟ್ ಕೂಡಾ ಉತ್ತಮವಾಗಿದೆ .ಆದರೆ, ಎತ್ತರದ ವ್ಯಕ್ತಿಗಳಿಗೆ ರೂಫ್ ತಾಗುವಂತಿರುವುದು ಕೊಂಚ ಹಿನ್ನೆಡೆಯಾಗಬಹುದು.

ಉಳಿದಂತೆ ಎಲ್ಲಾ ಆಧುನಿಕ ಸೌಲಭ್ಯಗಳು ಲಭ್ಯವಿದೆ. ಏರ್ ಬ್ಯಾಗ್, ESP, ವೆಂಟೀಲೇಟೆಡ್ ಸೀಟುಗಳು, ಡುಯಲ್ ಜೋನ್ ಹವಾನಿಯಂತ್ರಣ, ಹಿಂಬದಿ ಸೀಟುಧಾರರಿಗೆ ಆಡಿಯೋ ಕಂಟ್ರೋಲ್ ಮಾಡುವ ಸೌಲಭ್ಯ, ಕ್ರೂಸ್ ಕಂಟ್ರೋಲ್, ಪನೋರೊಮಿಕ್ ಸನ್ ರೂಫ್, ಪಾರ್ಕಿಂಗ್ ಸೆನ್ಸಾರ್ ಗಳು, ಹಿಲ್ ಡೀಸೆಂಟ್ ಕಂಟ್ರೋಲ್ ಹಾಗೂ ಹೀಟೆಡ್ ಮಿರರ್ ಗಳಿರುತ್ತದೆ. ಹ್ಯುಂಡೈ ಸಂಸ್ಥೆ ಎಲಾಂಟ್ರಾ ಮೂಲಕ ಸೆಡಾನ್ ವಿಭಾಗದಲ್ಲಿ ಭರ್ಜರಿ ವ್ಯಾಪಾರದ ನಿರೀಕ್ಷೆ ಇಟ್ಟುಕೊಂಡಿದೆ.

English summary
Hyundai has launched the new Fluidic Elantra sedan with a starting price of Rs. 12.51 lakhs. The new Elantra is a completely different package when compared with the previous Elantra that was being sold here. Hyundai opened bookings of the new Elantra fully confident of its performance in the market.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more