ಮಾರುತಿ ಮಾರ್ಕೆಟ್ನಲ್ಲಿ ಇಯಾನ್ ಉಸಿರಾಡೋದೆ ಕಷ್ಟ

Hyundai Eon Outperforms Established Models
ಎಂಟ್ರಿ ಲೆವೆಲ್ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿಯದ್ದೇ ಕಾರುಬಾರು. ಇಲ್ಲಿ ಮಾರುತಿ ಸುಜುಕಿ ಆಲ್ಟೋ, ಮಾರುತಿ 800 ಮತ್ತು ವ್ಯಾಗನಾರ್ ಕಾರುಗಳು ಫೇಮಸ್ಸು ಮತ್ತು ಬೆಸ್ಟ್ ಸೆಲ್ಲರ್. ಮಾರುತಿ ಸುಜುಕಿಯ ಹಿಡಿತದಲ್ಲಿರುವ ಈ ಸೆಗ್ಮೆಂಟ್ ದೇಶದ ವಾಹನ ಮಾರುಕಟ್ಟೆಯ ಎರಡನೇ ಬೃಹತ್ ಕಂಪನಿ ಹ್ಯುಂಡೈಗೆ ಉಸಿರುಗಟ್ಟಿಸುತ್ತಿದೆ.

ಹ್ಯುಂಡೈ ಇಯಾನ್ ದೇಶದ ಅತ್ಯಧಿಕ ಮಾರಾಟವಾಗುವ ಕಾರಾಗಬೇಕೆಂಬ ಕನಸನ್ನು ಕಂಪನಿ ಹೊಂದಿತ್ತು. ಆದರೆ ಮಾರುತಿ ಪ್ರಾಬಲ್ಯವಿರುವ ದೇಶದ ಮಾರುಕಟ್ಟೆಯಲ್ಲಿ ಇಯಾನ್ ಮಾರಾಟ ಆಶಾದಾಯಕವಾಗಿ ಕಂಪನಿಗೆ ಗೋಚರಿಸುತ್ತಿಲ್ಲ. ಇತ್ತೀಚಿನ ಫ್ಲೂಡಿಕ್ ವಿನ್ಯಾಸ ಹೊಂದಿರುವ ಇಯಾನ್ ಆಕರ್ಷಕ ಇಂಟಿರಿಯರ್, ಸ್ಮೂತಾಗಿ ಚಾಲನೆಗೆ ಸಹಕರಿಸುವ ಎಂಜಿನ್ ಮತ್ತು ಡ್ಯೂಯಲ್ ಇಂಧನ ಸಾಮರ್ಥ್ಯ ಫೀಚರ್ಸ್ ಹೊಂದಿದೆ.

ಜನವರಿ ತಿಂಗಳಲ್ಲಿ ಐ10 ಮತ್ತು ಐ20 ಕಾರುಗಳು ಸುಮಾರು 10,744 ಯುನಿಟ್ ನಷ್ಟು ಮಾರಾಟವಾಗಿದ್ದವು. ಆದರೆ ಇಯಾನ್ ಕೇವಲ 7,344 ಯುನಿಟ್ ಮಾರಾಟವಾಗಿತ್ತು. ಮಾರಾಟ ವಿಷ್ಯದಲ್ಲಿ ಇಯಾನ್ ಕಾರು ಐ10ನ್ನು ಹಿಂದಿಕ್ಕುವ ನಿರೀಕ್ಷೆಯನ್ನು ಕಂಪನಿ ಹೊಂದಿದೆ.

ಜನವರಿಯಲ್ಲಿ ಹ್ಯುಂಡೈನ ಮೂರನೇ ಬೃಹತ್ ಮಾರಾಟದ ಐ20 ಕಾರಿನ ಮಾರಾಟ 6,068 ಯುನಿಟ್ ತಲುಪಿತ್ತು. ಸುಮಾರು 4,826 ಸ್ಯಾಂಟ್ರೊ ಮಾರಾಟವಾಗಿತ್ತು. ಸುಮಾರು 4,311 ವೆರ್ನಾ ಕಾರುಗಳು ಮಾರಾಟವಾಗಿದ್ದವು. ಒಂದೇ ಒಂದು ಸೊನಾಟಾ ಸೆಡಾನ್ ಕಾರು ಮಾರಾಟವಾಗಿರಲಿಲ್ಲ. ಜನರೆಲ್ಲ ಕಂಪನಿಯ ನೂತನ ಫ್ಲೂಡಿಕ್ ಸೊನಾಟಾ ನಿರೀಕ್ಷೆಯಲ್ಲಿದ್ದದ್ದು ಹಳೆಯ ಸೊನಾಟಾ ಮಾರಾಟವಾಗದಿರಲು ಕಾರಣವಾಗಿದೆ.

More from DriveSpark

Article Published On: Tuesday, February 7, 2012, 16:28 [IST]
English summary
The entry level small car segment had been the bastion of Maruti Suzuki almost entirely until late last year. Models such as the Maruti Suzuki Alto, Maruti 800 and Wagon R have had a firm grip on the market that India's second largest carmaker Hyundai Motors was struggling to break. The car that can be credited with breaking the status-quo is the Hyundai Eon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+