ಹುಡ್ಗಿಗೆ ಡೌ ಹೊಡೆದ ಶಾರೂಖ್ ಖಾನ್ ತಲೆಗೆ ಏಟು!
ಜೂನ್ 12ರಂದು ನೂತನ ಟಿವಿ ಜಾಹೀರಾತು ಪ್ರಸಾರ ನಿನ್ನೆಯಿಂದ ಆರಂಭವಾಗಿದೆ. "ನೀವು ಐ10 ಡ್ರೈವಿಂಗ್ ಮಾಡುವಾಗ ವಿಶ್ವವೇ ನಿಮ್ಮ ಕಡೆಗಿರುತ್ತದೆ" ಎನ್ನುವುದು ಜಾಹೀರಾತಿನ ಸಾರ. ಈ ಜಾಹೀರಾತಿನಲ್ಲಿ ಶಾರೂಖ್ ಖಾನ್ ಐ10 ಕಾರನ್ನು ಉಲ್ಲಾಸದಿಂದ ಡ್ರೈವಿಂಗ್ ಮಾಡುತ್ತಿರುವ ದೃಷ್ಯವಿದೆ.
ವಿಶೇಷವೆಂದರೆ ಈ ಜಾಹೀರಾತಿನಲ್ಲಿ ಬೃಹತ್ ಕೈಯೊಂದು ಗಮನ ಸೆಳೆಯುತ್ತದೆ. ಈ ಕೈ ಕಾರನ್ನು ಸವರುತ್ತದೆ. ಕಂಪನಿಯು ಐ10 ಕಾರಿಗಾಗಿ ಮಾಡಿದ ಎರಡನೇ ಜಾಹೀರಾತು ಇದಾಗಿದೆ. ಆರಂಭದಲ್ಲಿ ಸ್ಯಾಂಟ್ರೊ ಕಾರಿಗೆ ಶಾರೂಖ್ ಖಾನ್ ಬ್ರಾಂಡ್ ಅಂಬಾಸಡರ್ ಆಗುವ ಮೂಲಕ ಕಂಪನಿಯ ಜೊತೆ ಸೇರಿಕೊಂಡಿದ್ದರು.
ಹ್ಯುಂಡೈ ಮೋಟರ್ಸ್ ಕಂಪನಿಯು 2007ರಲ್ಲಿ ಐ10 ಕಾರನ್ನು ದೇಶದ ರಸ್ತೆಗೆ ಪರಿಚಯಿಸಿತ್ತು. ಇದು ಕಂಪನಿಯ ಅತ್ಯಧಿಕ ಮಾರಾಟದ ಕಾರು ಕೂಡ ಹೌದು. ಕಂಪನಿಯು ಹಲವು ಬಾರಿ ಐ10 ಕಾರನ್ನು ಪರಿಷ್ಕರಿಸಿತ್ತು. ಈ ವರ್ಷದ ಅಂತ್ಯಕ್ಕೆ ಅಥವಾ ಮುಂದಿನ ವರ್ಷದ ಆರಂಭಕ್ಕೆ ಫ್ಲೂಡಿಕ್ ವಿನ್ಯಾಸದ ಐ10 ಕಾರು ಆಗಮಿಸುವ ನಿರೀಕ್ಷೆಯಿದೆ.
ಶಾರೂಖ್ ಖಾನ್ ಜೊತೆಗೆ ಮೈತ್ರಿಯಿಂದಾಗಿ ಕಂಪನಿಗೆ ಹಲವು ಲಾಭಗಳಾಗಿವೆ. ಶಾರೂಖ್ ಬ್ರಾಂಡ್ ಇಮೇಜ್ ಮೂಲಕ ಕಂಪನಿಯು ದೇಶದ ವಾಹನ ಮಾರುಕಟ್ಟೆ ಪಾಲು ಹೆಚ್ಚಿಸಿಕೊಂಡಿತ್ತು. ಹ್ಯುಂಡೈ ಮೋಟರ್ಸ್ ಕಂಪನಿಯ ಟಾಪ್ ಎಂಡ್ ಕಾರುಗಳು ಶಾರೂಖ್ ಸಿನಿಮಾಗಳಲ್ಲಿಯೂ ಅಭಿನಯಿಸಿವೆ. ಉದಾಹರಣೆಗೆ ಇತ್ತೀಚೆಗೆ ಡಾನ್ 2 ಚಿತ್ರದಲ್ಲಿ ಫ್ಲೂಡಿಕ್ ಸೊನಾಟಾ ಮತ್ತು ಫ್ಲೂಡಿಕ್ ಸಾಂತಾ ಫೆ ಕಾರುಗಳಿದ್ದವು.
ಕಡಲ ಕಿನಾರೆಯಲ್ಲಿ ಹುಡ್ಗಿ ಜೊತೆ ಮಾತನಾಡುತ್ತಿರುವಾಗ ಅದೃಷ್ಯ ಹಸ್ತ ಶಾರೂಖ್ ತಲೆಗೆ ಪ್ರೀತಿಯಿಂದ ಏಟು ಕೊಡುವ ದೃಷ್ಯವು ಜಾಹೀರಾತು ವೀಕ್ಷಕರ ಮುಖದಲ್ಲಿ ನಗು ಬರಿಸುವುದರಲ್ಲಿ ಸಂಶಯವಿಲ್ಲ.


Click it and Unblock the Notifications









