ಶಾರೂಕ್ ಅದ್ದೂರಿ ಬಸ್ಸಲ್ಲಿ ಅಂತದ್ದೇನಿದೆ?
ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಜೀವನ ಶೈಲಿಗೆ ತಕ್ಕಂತೆ ವಾಹನ ಪ್ರೇಮವನ್ನು ಹೊಂದಿರುತ್ತಾರೆ. ಇದು ಸಮಾಜದಲ್ಲಿ ತಾರೆಗಳ ಪ್ರತಿಷ್ಠೆಯ ವಿಷಯವಾಗಿರುತ್ತದೆ.
ಇದರಿಂದ ಬಾಲಿವುಡ್ ಬಾದ್‌ಷಾ ಶಾರೂಕ್ ಖಾನ್ ಕೂಡಾ ಹೊರತಾಗಿಲ್ಲ. ಕಳೆದ ಒಂದೆರಡು ದಶಕಗಳಲ್ಲಿ ಹಿಂದಿ ಸಿನೆಮಾ ರಂಗದಲ್ಲಿ ಸಕ್ರಿಯವಾಗಿರುವ ಶಾರೂಕ್, ತಮ್ಮದೇ ಆದ ಕಸ್ಟಮೈಸ್ಡ್ ಬಸ್‌ವೊಂದನ್ನು ಹೊಂದಿದ್ದಾರೆ.
ದಿಲೀಪ್ ಛಾಬ್ರಿಯಾ ಒಡೆತನದ ಪ್ರತಿಷ್ಠಿತ ವಿನ್ಯಾಸ ಕಂಪನಿಯಾದ ಡಿಸಿ ಡಿಸೈನ್, ಶಾರೂಕ್‌ಗಾಗಿ ವಿಶೇಷವಾಗಿ ಬಸ್ ರೂಪಿಸಿದೆ.
ಔಟ್ ಡೋರ್ ಶೂಟಿಂಗ್ ಸಂದರ್ಭದಲ್ಲಿ ಶಾರೂಕ್ ಇದೇ ಬಸ್ಸಲ್ಲಿ ಸಂಚರಿಸುತ್ತಾರೆ. ತಮ್ಮ ಕುಟುಂಬದ ಜತೆ ವಿನೋದ ಸಂಚಾರಕ್ಕಾಗಿಯೂ ಇದೇ ಬಸ್ಸನ್ನು ಬಳಕೆ ಮಾಡುತ್ತಾರೆ. ಹಾಗಿದ್ದರೆ ಶಾರೂಕ್ ಬಸ್ಸಲ್ಲಿ ಅಂತದ್ದೇನಿದೆ ಸ್ಪೆಷಾಲಿಟಿ ಎಂಬುದನ್ನು ನೋಡೋಣ.

ಸೆಲೆಬ್ರಿಟಿ ಲೈಫ್ ಸ್ಟೈಲಿಗೆ ತಕ್ಕಂತೆ ಈ ಲಗ್ಷುರಿ ಬಸ್ ತಯಾರಿಸಲಾಗಿದೆ. ಇದು ಡಿಸಿ ಡಿಸೈನ್ ಬೇಡಿಕೆಯನ್ನು ಕೂಡಾ ಹೆಚ್ಚಿಸಿದೆ.

ಶಾರೂಕ್ ಕಸ್ಟಮೈಸ್ಡ್ ಬಸ್ಸಿನ ಇಂಟಿರಿಯರ್‌ಗಳು ತುಂಬಾನೇ ದುಬಾರಿಯಾಗಿದೆ. ಶೂಟಿಂಗ್ ಕಳೆದ ಬಳಿಕ ಶಾರೂಕ್‌ಗೆ ರಿಲಾಕ್ಸ್ ಮಾಡಿಕೊಳ್ಳಲು ಈ ಆದ್ದೂರಿ ಆಸನಗಳು ನೆರವಾಗಲಿದೆ.

ಡಿಸಿ ತನ್ನದೇ ಆದ ಸ್ಟೈಲಿಷ್ ಇಂಟಿರಿಯರ್ ವಿನ್ಯಾಸ ರೂಪಿಸಿಕೊಳ್ಳುವುದರಲ್ಲಿ ಹೆಸರುವಾಸಿಯಾಗಿದೆ. ಚಿತ್ರದಲ್ಲಿ ತೋರಿಸಿರುವಂತೆಯೇ ಗೋಡೆಗೆ ಅಂಟಿಕೊಂಡಿರುವ ಎಲ್‌ಇಡಿ ಟಿ.ವಿ ನೋಡಿರಿ...

ಡಿಸಿ ಡಿಸೈನ್ ಕಸ್ಟಮೈಸ್ಡ್ ಮಾಡಿರುವ ಶಾರೂಕ್ ಬಸ್‌ನ ಎಕ್ಸ್‌ಟೀರಿಯರ್ ವಿನ್ಯಾಸ ನೋಡಿ.

ಇನ್ನು ಶಾರೂಕ್‌ಗೆ ಶೂಟಿಂಗ್ ವೇಳೆ ಮೇಕಪ್ ಕೂಡಾ ಇದೇ ಬಸ್ಸಲ್ಲೇ ಮಾಡುವ ವ್ಯವಸ್ಥೆ ಆಳವಡಿಸಲಾಗಿದೆ.

ಈ ಆದ್ದೂರಿ ಬಸ್ಸಲ್ಲಿ ಫಿಟ್‌ನೆಸ್ ಸೆಂಟರ್ ಕೂಡಾ ಆಳವಡಿಸಲಾಗಿದೆ. ಇದರಿಂದ ಬಸ್ ದೀರ್ಘ ದೂರ ಪ್ರಯಾಣಿಸುತ್ತಿರುವಂತೆಯೇ ತಮ್ಮ ಫಿಟೆನೆಸ್ ಕಳೆದುಕೊಳ್ಳದಂತೆ ಶಾರೂಕ್‌ಗೆ ನೆರವಾಗಲಿದೆ.

ಇನ್ನು ಮನರಂಜನೆಗಾಗಿ ಎಲ್‌ಇಡಿ ಟಿ.ವಿ ವ್ಯವಸ್ಥೆ ಆಳವಡಿಸಲಾಗಿದೆ. ಇದರ ಜತೆ ಎ.ಸಿ ಕೂಡಾ ಬಸ್ಸನ್ನು ತಂಪಾಗಿರಿಸಲಿದೆ.

ಬಾಲಿವುಡ್ ಬಾದ್‌ಷಾ ಶಾರೂಕ್ ಅದ್ದೂರಿ ಬಸ್‌ನ ಮತ್ತೊಂದು ಭಂಗಿ

ಶಾರೂಕ್ ಅದ್ದೂರಿ ಬಸ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...


Click it and Unblock the Notifications








