ಸಚಿನ್ ಬಳಿಕ ಹೈಬ್ರಿಡ್ ಕಾರಿಗೆ ಶಾರೂಕ್ ಖಾನ್ ಫಿದಾ!

Written By:

ಜರ್ಮನಿಯ ಐಷಾರಾಮಿ ಕಾರು ಸಂಸ್ಥೆ ಬಿಎಂಡಬ್ಲ್ಯು ಮುಖ್ಯ ಪ್ರಚಾರ ರಾಯಭಾರಿ ಕೂಡಾ ಆಗಿರುವ ಭಾರತೀಯ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್, ಈ ಜನಪ್ರಿಯ ಸಂಸ್ಥೆಯ 'ಐ8 ಹೈಬ್ರಿಡ್ ಕಾರಿನ ಹೆಮ್ಮೆಯ ಮಾಲಿಕರಾಗಿದ್ದಾರೆ. ಈಗ ಸಚಿನ್ ಬಳಿಕ ಬಾಲಿವುಡ್ ಬಾದ್ ಷಾ ಖ್ಯಾತಿಯ ಶಾರೂಕ್ ಖಾನ್ ಸಹ ಹೈಬ್ರಿಡ್ ಕಾರಿಗೆ ಫಿದಾ ಆಗಿ ಬಿಟ್ಟಿದ್ದಾರೆ.

ಮುಂಬೈನಲ್ಲಿರುವ ಶಾರೂಕ್ ಬೇಡಿಕೆಯ ಮೆರೆಗೆ ಹೊಚ್ಚ ಹೊಸ ಬಿಎಂಡಬ್ಲ್ಯು ಐ8 ಕಾರನ್ನು ಹಸ್ತಾಂತರಿಸಲಾಗಿದೆ. ಕಾರು ಸಿಕ್ಕಿದ್ದೇ ತಡ ಶಾರೂಕ್ ರಸ್ತೆಗಿಳಿದು ಒಂದು ರೌಂಡ್ ಜಾಲಿ ರೈಡ್ ಹೊಡೆದಿದ್ದಾರೆ.

To Follow DriveSpark On Facebook, Click The Like Button
ಸಚಿನ್ ಬಳಿಕ ಹೈಬ್ರಿಡ್ ಕಾರಿಗೆ ಶಾರೂಕ್ ಖಾನ್ ಫಿದಾ!

ಬಿಎಂಡಬ್ಲ್ಯು ನವನೀತ್ ಮೋಟಾರ್ಸ್ ನ ನಿರ್ದೇಶಕ ಶರದ್ ಕಚಲಿಯಾ ಅವರೇ ಸ್ವತ: ಶಾರೂಕ್ ಅವರಿಗೆ ಕಾರನ್ನು ಹಸ್ತಾಂತರಿಸಿದ್ದಾರೆ. ತನ್ಮೂಲಕ ಶಾರೂಕ್ ಕಾರು ಸಂಗ್ರಹಾಲಯಕ್ಕೆ ಮಗದೊಂದು ಆಕರ್ಷಕ ಕಾರು ಸೇರ್ಪಡೆಯಾಗಿದೆ.

ಸಚಿನ್ ಬಳಿಕ ಹೈಬ್ರಿಡ್ ಕಾರಿಗೆ ಶಾರೂಕ್ ಖಾನ್ ಫಿದಾ!

ಆಗಲೇ ಆಡಿ ಎ6, ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಮತ್ತು ರೋಲ್ಸ್ ರಾಯ್ಸ್ ಫಾಟಂಗಳಂತಹ ಐಷಾರಾಮಿ ಕಾರುಗಳನ್ನು ಮಾಲಿಕರಾಗಿರುವ ಶಾರೂಕ್, ಡಿಸಿ ಡಿಸೈನ್ ವಿಶೇಷವಾಗಿ ಮಾರ್ಪಾಡುಗೊಳಿಸಿರುವ ಬಸ್ ಸಹ ಹೊಂದಿದ್ದಾರೆ.

ಸಚಿನ್ ಬಳಿಕ ಹೈಬ್ರಿಡ್ ಕಾರಿಗೆ ಶಾರೂಕ್ ಖಾನ್ ಫಿದಾ!

ಭಾರತದಲ್ಲಿ ಬಿಎಂಡಬ್ಲ್ಯು ಐ8 ಹೈಬ್ರಿಡ್ ಕಾರು 2.29 ಕೋಟಿ ರುಪಾಯಿಗಳಷ್ಟು ದುಬಾರಿಯೆನಿಸುತ್ತದೆ. ಇದು ದೇಶದಲ್ಲಿರುವ ಅತಿ ಬೇಡಿಕೆಯ ಹೈಬ್ರಿಡ್ ಕಾರುಗಳಲ್ಲಿ ಒಂದಾಗಿದೆ.

ಸಚಿನ್ ಬಳಿಕ ಹೈಬ್ರಿಡ್ ಕಾರಿಗೆ ಶಾರೂಕ್ ಖಾನ್ ಫಿದಾ!

ಏತನ್ಮಧ್ಯೆ ನಟಿ ಶಿಲ್ಪಾ ಶೆಟ್ಟಿ ಸಹ ಬಿಎಂಡಬ್ಲ್ಯು ಐ8 ಕಾರಿನ ಹೆಮ್ಮೆಯ ಮಾಲಿಕರಾಗಿದ್ದಾರೆ. ಇವೆಲ್ಲವೂ ಬಾಲಿವುಡ್ ಗಣ್ಯರಲ್ಲಿ ಹೆಚ್ಚುತ್ತಿರುವ ಐ8 ಅಭಿಮಾನಕ್ಕೆ ಸಾಕ್ಷಿಯಾಗಿದೆ.

ಸಚಿನ್ ಬಳಿಕ ಹೈಬ್ರಿಡ್ ಕಾರಿಗೆ ಶಾರೂಕ್ ಖಾನ್ ಫಿದಾ!

ನಿಮ್ಮ ಮಾಹಿತಿಗಾಗಿ, 2015ನೇ ಸಾಲಿನಲ್ಲಿ ಒಟ್ಟು 5,456 ಯುನಿಟ್ ಗಳ ಮಾರಾಟವನ್ನು ಕಂಡಿರುವ ಬಿಎಂಡಬ್ಲ್ಯು ಐ8, ಜಗತ್ತಿನಲ್ಲೇ ಅತಿ ಹೆಚ್ಚು ಮಾರಾಟವಾಗುತ್ತಿರುವ ಹೈಬ್ರಿಡ್ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ಸಚಿನ್ ಬಳಿಕ ಹೈಬ್ರಿಡ್ ಕಾರಿಗೆ ಶಾರೂಕ್ ಖಾನ್ ಫಿದಾ!

2014 ದೆಹಲಿ ಆಟೋ ಎಕ್ಸ್ ಪೋದಲ್ಲೂ ಮೊದಲ ಬಾರಿಗೆ ಅನಾವರಣ ಕಂಡಿರುವ ಬಿಎಂಡಬ್ಲ್ಯು ಐ8 ಕಳೆದ ವರ್ಷಾರಂಭದಲ್ಲಿ ಸಚಿನ್ ದಿವ್ಯ ಹಸ್ತಗಳ ಸ್ಪರ್ಶದೊಂದಿಗೆ ಭಾರತೀಯ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿತ್ತು.

ಸಚಿನ್ ಬಳಿಕ ಹೈಬ್ರಿಡ್ ಕಾರಿಗೆ ಶಾರೂಕ್ ಖಾನ್ ಫಿದಾ!

ಜಾಗತಿಕವಾಗಿ ಅತಿ ಹೆಚ್ಚು ಮನ್ನಣೆಗೆ ಪಾತ್ರವಾಗಿ ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು ಕಂಪ್ಲೀಟ್ ಬಿಲ್ಟ್ ಯುನಿಟ್ ಮುಂಖಾಂತರ ಸೀಮಿತ ಆವೃತ್ತಿಯಲ್ಲಿ ಮಾತ್ರ ಮಾರಾಟವಾಗಲಿದೆ.

ಸಚಿನ್ ಬಳಿಕ ಹೈಬ್ರಿಡ್ ಕಾರಿಗೆ ಶಾರೂಕ್ ಖಾನ್ ಫಿದಾ!

ಬಿಎಂಡಬ್ಲ್ಯು ಐ8 ಪ್ಲಗಿನ್ ಹೈಬ್ರಡ್ ಮಾದರಿಲ್ಲಿ 1.5 ಲೀಟರ್ ಟರ್ಬೊ ತ್ರಿ ಸಿಲಿಂಡರ್ ಎಂಜಿನ್ ಆಳವಡಿಸಲಾಗಿದೆ. ಇದರ ಜೊತೆಗೆ ಎಲೆಕ್ಟ್ರಿಕ್ ಮೋಟಾರು ಕೂಡಾ ಇರಲಿದೆ.

ಸಚಿನ್ ಬಳಿಕ ಹೈಬ್ರಿಡ್ ಕಾರಿಗೆ ಶಾರೂಕ್ ಖಾನ್ ಫಿದಾ!

ಇವೆರಡು ಸೇರಿ ಗರಿಷ್ಠ 370 ಅಶ್ವಶಕ್ತಿ ಉತ್ಪಾದಿಸಲಿದ್ದು, 4.4 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗದಲ್ಲಿ ಚಲಿಸಲಿದೆ. ಅಂತೆಯೇ ಗರಿಷ್ಠ ಗಂಟೆಗೆ 250 ಕೀ.ಮೀ. ವೇಗವನ್ನು ಪಡೆಯಲಿದೆ.

ಸಚಿನ್ ಬಳಿಕ ಹೈಬ್ರಿಡ್ ಕಾರಿಗೆ ಶಾರೂಕ್ ಖಾನ್ ಫಿದಾ!

ಬಿಎಂಡಬ್ಲ್ಯು ಐ8 ನಿರ್ಮಾಣದಲ್ಲಿ ಅತಿ ಹೆಚ್ಚು ಕಾರ್ಬನ್ ಫೈಬರ್ ಬಳಕೆ ಮಾಡಲಾಗಿದೆ. ಇದು ಕಾರಿನ ಒಟ್ಟಾರೆ ತೂಕ ಕಡಿತ ಮಾಡುವಲ್ಲಿ ನೆರವಾಗಿದೆ. ಅತ್ಯಂತ ಕಡಿಮೆ ಗುರುತ್ವವನ್ನು ಹೊಂದಿರುವ ಬಿಎಂಡಬ್ಲ್ಯು ಐ8 1490 ಕೆ.ಜಿ ತೂಕವನ್ನಷ್ಟೇ ಹೊಂದಿದೆ.

English summary
Bollywood Badshah Shah Rukh Khan buys new BMW i8
Story first published: Monday, June 20, 2016, 10:44 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark