ಕಿಂಗ್ ಖಾನ್ ಪಾಲಾಯ್ತು ಬಾಲಿವುಡ್‌ನ ದುಬಾರಿ ವ್ಯಾನಿಟಿ ಬಸ್

Written By:

ಸಕಲ ರೀತಿಯ ಆಡಂಬರದ ಸೌಲಭ್ಯಗಳನ್ನೊಳಗೊಂಡಿರುವ ಅತ್ಯಂತ ದುಬಾರಿ ವ್ಯಾನಿಟಿ ಬಸ್ ಹೊಂದಿರುವ ಬಾಲಿವುಡ್ ನಟ ಎಂಬ ಕೀರ್ತಿಗೆ ಕಿಂಗ್ ಖಾನ್ ಖ್ಯಾತಿಯ ಶಾರೂಕ್ ಖಾನ್ ಭಾಜನರಾಗಿದ್ದಾರೆ.

ಶಾರೂಕ್ ಖಾನ್ ಇತ್ತೀಚೆಗಷ್ಟೇ ಐಷಾರಾಮಿ ವ್ಯಾನಿಟಿ ವ್ಯಾನ್ ಖರೀದಿಸಿರುವುದರ ಬಗ್ಗೆ ನಾವು ವರದಿ ಮಾಡಿರುತ್ತೇವೆ. ದೇಶದ ಪ್ರತಿಷ್ಠಿತ ವಿನ್ಯಾಸ ಮಾರ್ಪಾಡು ಸಂಸ್ಥೆ ಡಿಸಿ ಡಿಸೈನ್, ಶಾರೂಕ್ ಅವರ ಕನಸಿನ ಬಸ್ಸನ್ನು ವಿನ್ಯಾಸಗೊಳಿಸಿದೆ.

To Follow DriveSpark On Facebook, Click The Like Button
ಕಿಂಗ್ ಖಾನ್ ಪಾಲಾಯ್ತು ಬಾಲಿವುಡ್‌ನ ದುಬಾರಿ ವ್ಯಾನಿಟಿ ಬಸ್

ನಿಮ್ಮ ಮಾಹಿತಿಗಾಗಿ ಶಾರೂಕ್ ಬಳಿ ಈಗಾಗಲೇ ಡಿಸಿ ಡಿಸೈನ್ ವಿನ್ಯಾಸಿತ ಬಸ್ಸೊಂದಿದೆ. ಈಗ ಖರೀದಿಸಿರುವ ಬಿ9ಆರ್ ವೋಲ್ವೋ ಬಸ್ ನಾಲ್ಕು ಕೋಟಿ ರುಪಾಯಿಗಳಷ್ಟು ದುಬಾರಿಯೆನಿಸುತ್ತದೆ.

ಕಿಂಗ್ ಖಾನ್ ಪಾಲಾಯ್ತು ಬಾಲಿವುಡ್‌ನ ದುಬಾರಿ ವ್ಯಾನಿಟಿ ಬಸ್

ನಟ ಶಾರೂಕ್ ಖಾನ್ ಅವರ ಅಭಿಲಾಷೆ ಹಾಗೂ ಬೇಡಿಕೆಗೆ ತಕ್ಕಂತೆ ಸಂಚರಿಸುವ ಮನೆ ಅಥವಾ ಕಚೇರಿಯನ್ನು ತಯಾರಿಸಲಾಗಿದೆ. ಈ ಬಗ್ಗೆ ದಿಲೀಪ್ ಛಾಬ್ರಿಯಾ ನೇತೃತ್ವದ ಸಂಸ್ಥೆಯು ಅತೀವ ಹರ್ಷ ವ್ಯಕ್ತಪಡಿಸಿದೆ.

ಕಿಂಗ್ ಖಾನ್ ಪಾಲಾಯ್ತು ಬಾಲಿವುಡ್‌ನ ದುಬಾರಿ ವ್ಯಾನಿಟಿ ಬಸ್

ಈ ಮಲ್ಟಿ ಆಕ್ಸೆಲ್ ಬಸ್ಸು ಹೊರಗಿನಿಂದ ನೋಡಲು ಎಷ್ಟು ಸುಂದರವಾಗಿದೆಯೋ ಅಷ್ಟೇ ಅಚ್ಚುಕಟ್ಟಾಗಿ ಒಳಮೈ ಕೂಡಾ ರಚಿಸಲಾಗಿದೆ. ಇದರಲ್ಲಿ ಖಾಸಗಿ ಕೊಠಡಿಗಳು ಇರಲಿದೆ.

ಕಿಂಗ್ ಖಾನ್ ಪಾಲಾಯ್ತು ಬಾಲಿವುಡ್‌ನ ದುಬಾರಿ ವ್ಯಾನಿಟಿ ಬಸ್

ಸೆಲೆಬ್ರಿಟಿಗಳು ಸದಾ ಒಂದಲ್ಲ ಒಂದು ಚಟುವಟಿಕೆಯಲ್ಲಿ ಕಾರ್ಯ ನಿರತರಾಗಿರುತ್ತಾರೆ. ಇದನ್ನು ಶೂಟಿಂಗ್ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ತಲುಪಲು ಅಥವಾ ಇನ್ನಿತರ ಖಾಸಗಿ ಪಯಣಗಳಿಗಾಗಿ ಬಳಕೆ ಮಾಡಬಹುದಾಗಿದೆ.

ಕಿಂಗ್ ಖಾನ್ ಪಾಲಾಯ್ತು ಬಾಲಿವುಡ್‌ನ ದುಬಾರಿ ವ್ಯಾನಿಟಿ ಬಸ್

ಎರಡು ತಿಂಗಳುಗಳ ನಿರಂತರ ಪ್ರಯತ್ನದ ಬಳಿಕ ಶಾರೂಕ್ ವ್ಯಾನಿಟಿ ಬಸ್ ಸಿದ್ಧಗೊಂಡಿದೆ. ಸದ್ಯ ಬಾಲಿವುಡ್ ನಟರ ಪೈಕಿ ಅತಿ ದುಬಾರಿ ವ್ಯಾನಿಟಿ ವ್ಯಾನ್ ಶಾರೂಕ್ ಪಾಲಾಗಿದೆ.

ಕಿಂಗ್ ಖಾನ್ ಪಾಲಾಯ್ತು ಬಾಲಿವುಡ್‌ನ ದುಬಾರಿ ವ್ಯಾನಿಟಿ ಬಸ್

14 ಮೀಟರ್ ಉದ್ದದ ಈ ಬಸ್ಸನ್ನು ನಾಲ್ಕು ಕೋಣೆಗಳಾಗಿ ವಿಭಜನೆಗೊಳಿಸಲಾಗಿದೆ. ಇದರಲ್ಲಿ ಕಚೇರಿ ಕೊಠಡಿ, ಬೆಡ್ ರೂಂ, ಶೌಚಾಲಯ ಮತ್ತು ಮೇಕಪ್ ಹಾಗೂ ಡ್ರೆಸ್ಸಿಂಗ್ ಕೊಠಡಿಗಳಿರಲಿದೆ.

ಕಿಂಗ್ ಖಾನ್ ಪಾಲಾಯ್ತು ಬಾಲಿವುಡ್‌ನ ದುಬಾರಿ ವ್ಯಾನಿಟಿ ಬಸ್

ಬಸ್ಸಿನ ಒಳಮೈಯಲ್ಲಿ ವಿಶಿಷ್ಟ ಎಲ್ ಇಡಿ ಲೈಟಿಂಗ್ಸ್, ಭವಿಷ್ಯತ್ತಿನ ಕೋಣೆಗಳು, ವಿಶ್ರಾಂತಿ ಕೊಠಡಿಗಳು, ಶೌಚಾಲಯ, ಮೇಕಪ್ ಮತ್ತು ಡ್ರೆಸ್ಸಿಂಗ್ ಸೆಂಟರ್, ಕಚೇರಿ, ಬೆಡ್ ರೂಂ ಮುಂತಾದ ವ್ಯವಸ್ಥೆಗಳಿರಲಿದೆ.

ಕಿಂಗ್ ಖಾನ್ ಪಾಲಾಯ್ತು ಬಾಲಿವುಡ್‌ನ ದುಬಾರಿ ವ್ಯಾನಿಟಿ ಬಸ್

ಇನ್ನುಳಿದಂತೆ ಅನಿಯಮಿತ ವೈ-ಫೈ ಸೇವೆ, ಆಪಲ್ ಟಿವಿ, ಸ್ಯಾಟಲೈಟ್ ಟಿವಿ ಜೊತೆ 4ಕೆ ಟೆಲಿವಿಷನ್ ಸೆಟ್, ಗಾಜಿನ ನೆಲ, ವುಡನ್ ಫಿನಿಶ್ ರೂಫ್, ಅಲ್ಲದೆ 4000 ವ್ಯಾಟ್ ವರೆಗಿನ ಸೌಂಡ್ ಸಿಸ್ಟಂಗಳನ್ನು ಆಳವಡಿಸಲಾಗಿದೆ.

ಕಿಂಗ್ ಖಾನ್ ಪಾಲಾಯ್ತು ಬಾಲಿವುಡ್‌ನ ದುಬಾರಿ ವ್ಯಾನಿಟಿ ಬಸ್

ಸಂಪೂರ್ಣ ಲೈಟಿಂಗ್ಸ್ ಮತ್ತು ಹೀಟಿಂಗ್ ಹಾಗೂ ಕೂಲಿಂಗ್ ವ್ಯವಸ್ಥೆಯನ್ನು ಕೇವಲ ಒಂದು ಸ್ಪರ್ಶದಿಂದಲೇ ನಿಯಂತ್ರಿಸಬಹುದಾಗಿದೆ. ಇನ್ನು ಮೈಕ್ರೋವೇವ್ ಹೊಂದಿರುವ ಕಿಚನ್ ಸಹ ಇರಲಿದೆ.

ಕಿಂಗ್ ಖಾನ್ ಪಾಲಾಯ್ತು ಬಾಲಿವುಡ್‌ನ ದುಬಾರಿ ವ್ಯಾನಿಟಿ ಬಸ್

ಈ ಸಂಬಂಧ ಎಕ್ಸ್ ಕ್ಲೂಸಿವ್ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿರುವ ಡಿಸಿ ಡಿಸೈನ್, ತಮಗೆ ಇಂತಹ ಅವಕಾಶ ಮಾಡಿಕೊಟ್ಟಿರುವ ಕಿಂಗ್ ಖಾನ್ ಅವರಿಗೆ ಧನ್ಯವಾದಗಳನ್ನು ಸಮರ್ಪಿಸಿದೆ.

English summary
Shah Rukh Khan Workspace by DC: More Pictures
Story first published: Monday, September 7, 2015, 11:54 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark