'ದಿಲ್‌ವಾಲೆ' ಶಾರೂಕ್ ಅಲ್ಲ; ನೈಜ ಸ್ಟಾರ್ ಯಾರು ಗೊತ್ತೇ?
ಹಿಂದಿ ಚಿತ್ರರಂಗದ ಎವರ್ ಗ್ರೀನ್ ಪ್ರಣಯ ಜೋಡಿ ಶಾರೂಕ್ ಖಾನ್ ಮತ್ತು ಕಾಜೋಲ್ ಮತ್ತೆ ಒಂದಾಗುವ ರೋಮ್ಯಾಟಿಂಕ್ ಆಕ್ಷನ್ ಚಲನಚಿತ್ರ 'ದಿಲ್‌ವಾಲೆ' ಇದೇ ಮುಂಬರುವ ಡಿಸೆಂಬರ್ 18ರಂದು ತೆರೆ ಕಾಣಲಿದೆ.
ಬಾಲಿವುಡ್‌ನ ಹೆಸರಾಂತ ನಿರ್ದೇಶಕ ರೋಹಿತ್ ಶೆಟ್ಟಿ ನಿರ್ದೇಶನದ ಈ ಚಿತ್ರವನ್ನು ರೆಡ್ ಚಿಲ್ಲೀಸ್ ಎಂಟರ್ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಹೊರ ತರಲಾಗುತ್ತಿದೆ. ಚಿತ್ರದಲ್ಲಿ ವರುಣ್ ಧವನ್ ಹಾಗೂ ನಟಿ ಕೃತಿ ಸನೊನ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.

ಇಷ್ಟೆಲ್ಲ ವಿಚಾರಗಳನ್ನು ನಾವಿಲ್ಲಿ ಹೇಳಿಕೊಳ್ಳಲು ಕಾರಣವೊಂದಿದೆ. ಚಿತ್ರದ ಆಕ್ಷನ್ ರಂಗಕ್ಕಾಗಿ ರೋಹಿತ್ ಮತ್ತವರ ತಂಡ ಸಾವನ್ನು ಲೆಕ್ಕಿಸದೇ ಅತಿ ಹೆಚ್ಚು ಅಪಾಯವನ್ನು ಆಹ್ವಾನಿಸಿಕೊಂಡಿತ್ತು.

ಪ್ರತಿ ಬಾರಿಯೂ ಪರದೆಯ ಮೇಲೆ ಸ್ಟಂಟ್ ಸೀನ್‌ವೊಂದನ್ನು ನೋಡುವಾಗ ಪ್ರೇಕ್ಷಕರ ಮನದಲ್ಲಿ ರೋಮಾಂಚನ ಸೃಷ್ಟಿಯಾಗುತ್ತದೆ. ಆದರೆ ಪರದೆಯ ಹಿಂದೆ ಚಿತ್ರ ತಂಡ ನಡೆಸಿರುವ ಕಠಿಣ ಪ್ರಯತ್ನವನ್ನು ಯಾರೂ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ.

ಪರದೆಯ ಮೇಲೆ ನಾಯಕ ವಿಲನ್ ಗಳ ಮೇಲೆ ಯದ್ವಾ ತದ್ವಾ ಹೊಡೆಯುವುದು. ಕಾರಲ್ಲಿ ಚೇಸ್ ಮಾಡಿ ಗುಂಡು ಹಾರಿಸುವುದು ಸಾಮಾನ್ಯ ದೃಶ್ಯ. ಆದರೆ ಇದನ್ನು ನೈಜವಾಗಿಯೂ ಚಿತ್ರಿಕರಿಸುವುದು ನಿಜಕ್ಕೂ ಸವಾಲಿನ ವಿಷಯ ಎಂಬುದನ್ನು ರೋಹಿತ್ ಬಹಿರಂಗಪಡಿಸುತ್ತಾರೆ.

ಪ್ರಸ್ತುತ ದಿಲ್‌ವಾಲೆ ಚಿತ್ರದಲ್ಲೂ ಹಾಲಿವುಡ್ ನಿರ್ಮಾಣಕ್ಕೆ ಸಮಾನವಾದ ರೀತಿಯ ಕಾರು ಚೇಸಿಂಗ್ ರಂಗವೊಂದಿಗೆ. ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಲಿರುವ ಈ ರಂಗವನ್ನು ಚಿತ್ರಿಕರಿಸಲು ರೋಹಿತ್ ವಿಶೇಷ ತಂಡವನ್ನು ರಚಿಸಿದ್ದರು.

100 ಕೀ.ಮೀ. ಗಿಂತಲೂ ಹೆಚ್ಚಿನ ವೇಗದಲ್ಲಿ ಚಲಿಸುವ ಕಾರು ಸಡನ್ ಆಗಿ ಆಕಾಶಕ್ಕೆ ಚಿಮ್ಮಿ ಪಲ್ಟಿ ಹೊಡೆಯುವುದನ್ನು ಪರದೆಯ ಮೇಲೆ ನೋಡುವುದು ಮನರಂಜನೆ ನೀಡುತ್ತದೆ. ಆದರೆ ಕಾರಿನೊಳಗಿರುವ ಆ ಸ್ಟಂಟ್ ಚಾಲಕ ಪಡುವ ಪಾಡು ಅಷ್ಟಿಷ್ಟಲ್ಲ ಎಂಬುದನ್ನು ರೋಹಿತ್ ಬಹಿರಂಗಪಡಿಸುತ್ತಾರೆ.

ಹಿಂದೆಂದಿಗಿಂತಲೂ ಉನ್ನತ್ತ ಮಟ್ಟದ ಕಾರು ಚೇಸಿಂಗ್ ಸ್ಟಂಟ್ ಚಿತ್ರಿಕರಣಕ್ಕಾಗಿ ರೋಹಿತ್ ಅವರು ಬಲ್ಗೇರಿಯಾ, ದಕ್ಷಿಣ ಆಫ್ರಿಕಾ ಜೊತೆಗೆ ತನ್ನ ವಿಶೇಷ ತಂಡವನ್ನು ರಚಿಸಿದ್ದರು. ಈ ಎಲ್ಲ ಮೂರು ತಂಡಗಳು ಒಗ್ಗಟ್ಟಾಗಿ ಕೆಲಸ ಮಾಡಿರುವುದರಿಂದ ಅದ್ಬುತ ಚಿತ್ರವೊಂದರ ನಿರ್ಮಾಣವಾಗಿದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

ಪ್ರತಿ ಬಾರಿಯೂ ಸ್ಟಂಟ್ ಚಿತ್ರಿಕರಣದ ವೇಳೆ ದೇವರಲ್ಲಿ ಬೇಡಿಕೊಳ್ಳುತ್ತೇನೆ. ತಮ್ಮಿಂದಾಗುವುದನ್ನು ತಾವು ಮಾಡಿಕೊಳ್ಳುತ್ತಿದ್ದು, ಮಿಕ್ಕಿದೆಲ್ಲ ದೇವರಿಗೆ ಬಿಟ್ಟುಬಿಡುತ್ತೇವೆ ಎಂದಿದ್ದಾರೆ.

ಸ್ಟಂಟ್ ಚಿತ್ರಿಕರಣದ ವೇಳೆ ಅಪಘಾತಗಳು ಸಂಭವಿಸುವುದು ಸಾಮಾನ್ಯ. ಇದರಿಂದಾಗಿ ಚಿತ್ರ ತಂಡದ ಹಿಂದೆ ಕೆಲಸ ಮಾಡುವ ವಿಶೇಷ ಪರಿಣಿತ ಸ್ಟಂಟ್ ಸ್ಟಾರ್ ಗಳೇ ನಿಜವಾದ ತಾರೆಯರು ಎಂದವರು ಅಭಿಪ್ರಾಯಪಡುತ್ತಾರೆ.


Click it and Unblock the Notifications








