ಹ್ಯುಂಡೈ LPG ಇಯಾನ್ ಕಾರು ರಸ್ತೆಗೆ, ದರ 2.98 ಲಕ್ಷ ರು.

Hyundai launched LPG Eon small car at Rs.2.98 lakhs
ದೇಶದ ಬೃಹತ್ ಪ್ರಯಾಣಿಕ ಕಾರು ರಫ್ತುದಾರ ಕಂಪನಿ ಮತ್ತು ಎರಡನೇ ಬೃಹತ್ ಕಾರು ಕಂಪನಿ ಹ್ಯುಂಡೈ ಮೋಟರ್ ಇಂಡಿಯಾ ಲಿಮಿಟೆಡ್, ಮೂರು ನೂತನ ಇಯಾನ್ ಆವೃತ್ತಿಗಳನ್ನು ಹೊರತಂದಿದೆ. ವಿಶೇಷವೆಂದರೆ ಈ ಕಾರುಗಳ ಆರಂಭಿಕ ದರ 3 ಲಕ್ಷ ರು.ಗಿಂತ ಕಡಿಮೆಯಿದೆ. ಇನ್ನೊಂದು ವಿಶೇಷವೆಂದರೆ ಈ ಕಾರುಗಳು ಎಲ್ ಪಿಜಿ ಆಯ್ಕೆಯಲ್ಲೂ ದೊರಕಲಿವೆ.

ಹ್ಯುಂಡೈ ಹೊರತಂದಿರುವ ಮೂರು ಇಯಾನ್ ಆವೃತ್ತಿಗಳ ಹೆಸರು ಡಿ ಲೈಟ್ ಪ್ಲಸ್( D-Lite +), ಇರಾ ಪ್ಲಸ್ ಮತ್ತು ಮ್ಯಾಗ್ನಾ. ಮೂರು ಲಕ್ಷ ರು.ಗಿಂತ ಕಡಿಮೆ ದರದ ಕಾರು ಹುಡುಕುವರಿಗೆ ಇದು ಸೂಕ್ತ ಆಯ್ಕೆಯಾಗಬಹುದು. ಎಲ್ ಪಿಜಿ ಇಯಾನ್ ಆವೃತ್ತಿಗಳ ದರ 27 ಸಾವಿರ ರುಪಾಯಿ ಹೆಚ್ಚಿರಲಿದೆ.

D-Lite+ ಇಯಾನ್ ಕಾರು ಏರ್ ಕಂಡಿಷನರ್, ಪವರ್ ಸ್ಟಿಯರಿಂಗ್, ಗಿಫ್ಟ್ ಶಿಫ್ಟ್ ಇಂಡಿಕೇಟರ್ ಮತ್ತು ಬಾಡಿ ಬಣ್ಣದ ಬಂಪರ್ ಗಳನ್ನು ಹೊಂದಿದೆ. ಇದರ ದರ 2.98 ಲಕ್ಷ ರು. ಇರಾ ಪ್ಲಸ್ ಕಾರಿನಲ್ಲಿ ಇಷ್ಟು ಫೀಚರುಗಳು ಮಾತ್ರವಲ್ಲದೇ ಪವರ್ ವಿಂಡೋಸ್ ಮತ್ತು ಸೆಂಟ್ರಲ್ ಲಾಕಿಂಗ್ ಸಿಸ್ಟಮ್ ಇದೆ. ಇದರ ದರ 3.12 ಲಕ್ಷ ರು.

ಮ್ಯಾಗ್ನಾ ಪ್ಲಸ್ ಕಾರು 2 ಡಿನ್ ಆಡಿಯೋ ಸಿಸ್ಟಮ್, ಯುಎಸ್ ಬಿ ಮುಂತಾದ ಹಲವು ಹೆಚ್ಚುವರಿ ಫೀಚರುಗಳನ್ನು ಹೊಂದಿದೆ. ಇದರ ದರ 3.42 ಲಕ್ಷ ರು. ಇವೆಲ್ಲ ದೆಹಲಿ ಎಕ್ಸ್ ಶೋರೂಂ ದರವಾಗಿದೆ. ಪರಿಸರ ಸ್ನೇಹಿ ಬ್ಲೂಡ್ರೈವ್ ಕಾರ್ಯಕ್ರಮದ ಭಾಗವಾಗಿ ಹ್ಯುಂಡೈ ಕಂಪನಿಯು ಎಲ್ ಪಿಜಿ ಆವೃತ್ತಿಗಳನ್ನು ಪರಿಚಯಿಸಿದೆ.

ಈ ಆವೃತಿಗಳಲ್ಲಿ ಎರಡು ಪ್ರತ್ಯೇಕ ಇಂಧನ ಟ್ಯಾಂಕುಗಳಿವೆ. ಅಂದರೆ 32 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಮತ್ತು 34 ಲೀಟರ್ ಎಲ್ ಪಿಜಿ ಟ್ಯಾಂಕ್ ಹೊಂದಿದೆ. ಫುಲ್ ಟ್ಯಾಂಕ್ ಎಲ್ ಪಿಜಿ ಮತ್ತು ಪೆಟ್ರೋಲಿಗೆ ಇಯಾನ್ ಕಾರು 1,200ಕ್ಕೂ ಹೆಚ್ಚು ಕಿ.ಮೀ. ಸಾಗುತ್ತದೆ.

More from DriveSpark

Article Published On: Tuesday, January 17, 2012, 9:36 [IST]
English summary
Hyundai Motors has today launched the much awaited LPG version of the Eon small car. The Eon LPG will be available in three variants with entry level version being priced at Rs.2.98 lakhs. Each of the three LPG variants are Rs.7,000-27,000 more expensive than their respective petrol versions. The Eon LPG can also run on petrol.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+