ಹ್ಯುಂಡೈ ಐ20: ಉದ್ದದ ಸೆಡಾನ್ ಕಾರು ಬರುತ್ತಂತೆ!

ಹ್ಯುಂಡೈ ಮೋಟರ್ ಇಂಡಿಯಾ, ನೆಕ್ಸ್ಟ್ ಜನರೇಷನ್ ಐ20 ಕಾರಿನ ಎಂಟ್ರಿ ಲೆವೆಲ್ ಸಣ್ಣ ಸೆಡಾನ್ ಆವೃತ್ತಿಯೊಂದನ್ನು ಪರಿಚಯಿಸಲು ಯೋಜಿಸಿದೆ ಎಂದು ವದಂತಿಗಳು ಹೇಳಿವೆ. ದೇಶದಲ್ಲಿ ಕಂಪನಿಯು ಈಗ ಐ20 ಹ್ಯಾಚ್ ಬ್ಯಾಕ್ ಆವೃತ್ತಿಯನ್ನು ಮಾರಾಟ ಮಾಡುತ್ತಿದೆ.

ಐ20 ಹೊಸ ಸೆಡಾನ್ ಆವೃತ್ತಿಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಇದು ಸಹ ಫ್ಲೂಡಿಕ್ ವಿನ್ಯಾಸ ಹೊಂದಿರುವ ನಿರೀಕ್ಷೆಯನ್ನು ಮೂಲಗಳು ವ್ಯಕ್ತಪಡಿಸಿವೆ. ಇದು ವೆರ್ನಾ ಕಾರಿಗಿಂತ ಕೊಂಚ ಕಡಿಮೆ ಗಾತ್ರದ ಸೆಡಾನ್ ಆಗಿರಲಿದೆ.

ಕಂಪನಿಯು ಕೆಲವು ದಿನಗಳ ಹಿಂದೆ ಐ20 ಕಾರಿನ ಫ್ಲೂಡಿಕ್ ಆವೃತ್ತಿಯನ್ನೂ ಪರಿಚಯಿಸಿತ್ತು. 2012ರ ಐ20 ಫ್ಲೂಡಿಕ್ ಸುಮಾರು 12 ಆವೃತ್ತಿಗಳಲ್ಲಿ ದೊರಕಲಿದೆ. ಇದರ ಆರಂಭಿಕ ದರ 4.73 ಲಕ್ಷ ರುಪಾಯಿ. ಟಾಪ್ ಎಂಡ್ ಪೆಟ್ರೋಲ್ ಆಟೋಮ್ಯಾಟಿಕ್ ಆವೃತ್ತಿ ದರ 7.6 ಲಕ್ಷ ರುಪಾಯಿ ಇದೆ.

ನೂತನ ಐ20 ಕಾರಿನ ಪ್ರಮುಖ ಬದಲಾವಣೆಯೆಂದರೆ ಎಂಜಿನ್ ತಂತ್ರಜ್ಞಾನ. ಇದು 1.2 ಲೀಟರ್ ಪೆಟ್ರೋಲ್ ವಿಟಿವಿಟಿ ಎಂಜಿನ್ ಹೊಂದಿದೆ. ಇದು ಸುಮಾರು 84 ಹಾರ್ಸ್ ಪವರ್ ಮತ್ತು ನೀಡುತ್ತದೆ. ಹಳೆಯ ಐ20 80 ಹಾರ್ಸ್ ಪವರ್ ನೀಡುತ್ತಿತ್ತು.

ಹಳೆಯ ಹ್ಯುಂಡೈ ಐ20 ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ದೊರಕುತ್ತಿದೆ. ಇದು 1.4 ಲೀಟರ್ ಎಂಜಿನ್ ಹೊಂದಿದ್ದು 100 ಹಾರ್ಸ್ ಪವರ್ ನೀಡುತ್ತದೆ. 1.2 ಲೀಟರ್ ಕಪ್ಪಾ ಎಂಜಿನ್ ಹೊಂದಿರುವ ಐ20 ಕಾರು 79 ಹಾರ್ಸ್ ಪವರ್ ನೀಡುತ್ತದೆ.

ಓದಿ: ಶಂಕರ್ ರಾವ್: ನಾನೇಕೆ ಡೀಸೆಲ್ ಐ20 ಖರೀದಿಸಿದೆ?

More from DriveSpark

Article Published On: Thursday, August 9, 2012, 17:16 [IST]
English summary
Country's second largest car maker Hyundai Motor is working on an compact sedan to be built along the next generation i20 platform to tap entry level sedan market. The new compact sedan will give tough competition to Maruti Dzire, Mahindra Verito and Ford Classic.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+