ಎಲೈಟ್ ಐ20 ಭಾರಿ ಸೇಲ್; 56,000 ಬುಕ್ಕಿಂಗ್

Written By:

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಕೆಲವು ತಿಂಗಳುಗಳ ಹಿಂದೆಯಷ್ಟೇ ಮಾರುಕಟ್ಟೆ ಪ್ರವೇಶಿಸಿದ್ದ ಹ್ಯುಂಡೈನ ಎಲೈಟ್ ಐ20 ಭರ್ಜರಿ ಮಾರಾಟ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಸಂಸ್ಥೆಯು, ನಾಲ್ಕು ತಿಂಗಳ ಹಿಂದೆ ಮಾರುಕಟ್ಟೆ ಪ್ರವೇಶಿಸಿದ್ದ ಎಲೈಟ್ ಐ20, ಈಗಾಗಲೇ 56,000 ಯುನಿಟ್‌ಗಿಂತಲೂ ಹೆಚ್ಚು ಬುಕ್ಕಿಂಗ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದಿದೆ.

ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಗ್ರಾಹಕರಿಗೆ ಉತ್ತಮ ಆಯ್ಕೆ ನೀಡುತ್ತಿರುವ ಐ20 ಕಾರನ್ನು ಈಗಾಗಲೇ ಮೂರು ಲಕ್ಷದಷ್ಟು ಮಂದಿ ವಿಚಾರಿಸಿಕೊಂಡು ಬಂದಿದ್ದಾರೆ. ಅಷ್ಟೇ ಯಾಕೆ 2014 ನವೆಂಬರ್ ತಿಂಗಳಲ್ಲಿ ಮಾತ್ರವಾಗಿ 10,500 ಯುನಿಟ್‌ಗಳ ಮಾರಾಟ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ.

hyundai i20

ಇವೆಲ್ಲವೂ ಸಂಸ್ಥೆಯ ಪಾಲಿಗೆ ಹೊಸ ಮೈಲುಗಲ್ಲಾಗಿದೆ. ಸಂಸ್ಥೆಯೇ ಹೇಳುವ ಪ್ರಕಾರ ಹಿಂದಿನ ಪೀಳಿಗೆಯ ಐ20 ಕಾರು ಸಹ ಇಷ್ಟೊಂದು ಯಶ ಕಂಡಿರಲಿಲ್ಲ. ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈ, ಪ್ರಸಕ್ತ ಸಾಲಿನಲ್ಲಿ ಗ್ರಾಂಡ್ ಐ10, ಎಕ್ಸ್‌ಸೆಂಟ್ ಹಾಗೂ ಸಾಂಟಾಫೆಗಳಂತಹ ಮಾದರಿಗಳನ್ನು ಬಿಡುಗಡೆಗೊಳಿಸಿತ್ತು.

ಈ ನಿಟ್ಟಿನಲ್ಲಿ ಗ್ರಾಹಕರ ಬೇಡಿಕೆಯನ್ನು ಈಡೇರಿಸಲು ನಿರ್ಮಾಣ ಸಾಮರ್ಥ್ಯವನ್ನು ವೃದ್ಧಿಸಲಾಗುತ್ತಿದೆ ಎಂಬುದನ್ನು ಸಂಸ್ಥೆ ಸ್ಪಷ್ಟಪಡಿಸಿದೆ.

ಒಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಭರ್ಜರಿ ಯಶಸ್ಸು ಸಾಧಿಸಿರುವ ಎಲೈಟ್ ಐ20, ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳಲ್ಲಿ ಲಭ್ಯವಿರಲಿದೆ. ಭಾರತ ವಾಹನ ಅಧ್ಯಯನ ಸಂಸ್ಥೆಯ ಪ್ರಕಾರ ಇದರ ಡೀಸೆಲ್ ಮಾದರಿಯು ಪ್ರತಿ ಲೀಟರ್‌ಗೆ 22.54 ಕೀ.ಮೀ. ಅಂತೆಯೇ ಪೆಟ್ರೋಲ್ ಎಂಜಿನ್ ಪ್ರತಿ ಲೀಟರ್‌ಗೆ 18.60 ಕೀ.ಮೀ. ಇಂಧನ ಕ್ಷಮತೆ ನೀಡಲಿದೆ.

ಕಾರ್ ಕೇರ್ ಸೆಟ್ - ಪಡೆಯಿರಿ ಶೇ.10ರಷ್ಟು ರಿಯಾಯಿತಿ - ಸೀಮಿತ ಆಫರ್ ಮಾತ್ರ

English summary
South-Korean automobile manufacturer, Hyundai has launched a few new products in India this year. Their most popular vehicle is their newly launched premium hatchback, the Elite i20. Now the manufacturer has achieved a milestone with their new product.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark