ಹ್ಯುಂಡೈ ಮೋಟರ್ಸ್ ನೌಕರರೊಂದಿಗೆ ಕದನವಿರಾಮ ಒಪ್ಪಂದ

Hyundai Workers To Sign Truce Agreement
ಕಾರ್ಮಿಕ ಸಂಘದ ನೀತಿ ನಿಯಮಗಳಲ್ಲಿ ಒಂದಿಷ್ಟು ಮಾರ್ಪಾಡು ಮಾಡಲು ಹ್ಯುಂಡೈ ಮೋಟರ್ಸ್ ಇಂಡಿಯಾ ನಿರ್ಧರಿಸಿದೆ. ಕೊರಿಯಾ ಕಾರು ಕಂಪನಿ ಹ್ಯುಂಡೈನ ಚೆನ್ನೈ ಘಟಕದಲ್ಲಿ ಇತ್ತೀಚೆಗೆ ನೌಕರರು ಪ್ರತಿಭಟನೆ ನಡೆಸಿದ್ದರು. ಇದೀಗ ಹ್ಯುಂಡೈ ಕಂಪನಿಯು ನೂತನ ಒಪ್ಪಂದವೊಂದಕ್ಕೆ ನೌಕರರ ಸಹಿ ಪಡೆಯುವ ಪ್ರಯತ್ನದಲ್ಲಿದೆ.

ಈ ಹಿಂದೆ ಮಾನೆಸರ್ ಘಟಕದ ನೌಕರರ ಪ್ರತಿಭಟನೆ ಮಾರುತಿ ಸುಜುಕಿ ಕಂಪನಿಯನ್ನು ಹಿಂಡಿಹಿಪ್ಪೆ ಮಾಡಿತ್ತು. ಹ್ಯುಂಡೈ ನೌಕರರ ಯುನೈಟೆಡ್ ಯುನಿಯನ್ ಜೊತೆ ಕಂಪನಿಯು ಹಲವು ಸುತ್ತಿನ ಮಾತುಕತೆ ನಡೆಸಿದೆ. ಹೊಸ ಅಗ್ರಿಮೆಂಟ್ ಕುರಿತು ನೌಕರರು ಸಕಾರಾತ್ಮಕವಾಗಿ ಸ್ಪಂಧಿಸುವ ನಿರೀಕ್ಷೆಯನ್ನು ಕಂಪನಿ ವ್ಯಕ್ತಪಡಿಸಿದೆ. ಉತ್ಪಾದಕತೆ ಹೆಚ್ಚಿಸಲು ಹ್ಯುಂಡೈ ಪ್ರಯತ್ನಿಸಿದಾಗ ನೌಕರರು ಇತ್ತಿಚೇಗೆ ಪ್ರತಿಭಟನೆ ಮಾಡಿದ್ದರು.

ಈಗಾಗಲೇ ಒಂದು ಅಧಿಕೃತ ನೌಕರರ ಸಂಘವಿರುವುದರಿಂದ ನೂತನ ಕಾರ್ಮಿಕ ಸಂಘಟನೆಗೆ ಅನುಮತಿ ನೀಡಲು ಹ್ಯುಂಡೈ ನಿರಾಕರಿಸಿತ್ತು. ಇದೀಗ ಕಾರ್ಮಿಕ ಸಮಸ್ಯೆಗಳ ಕುರಿತು ಹೆಚ್ಚು ಆದ್ಯತೆ ನೀಡಲು ಕಂಪನಿ ನಿರ್ಧರಿಸಿದೆ. ಒಟ್ಟಾರೆ ಹ್ಯುಂಡೈ ಮತ್ತು ಕಾರ್ಮಿಕರ ಸಂಘರ್ಷ ಶೀಘ್ರದಲ್ಲಿ ಶಮನವಾಗುವ ನಿರೀಕ್ಷೆಯಿದೆ.

More from DriveSpark

Article Published On: Wednesday, February 1, 2012, 11:32 [IST]
English summary
Hyundai Motors India, the country's second largest carmaker is set to avert a possible altercation with its workers union. Workers at the Korean car maker plant near Chennai have been raising several labor issues and were threatening a strike. Recent news reports say the car maker and its workers are on their way to sign an agreement.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+